ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಜಸ್ಪ್ರಿತ್ ಬುಮ್ರಾ ತಮ್ಮ ಬಿಗುವಿನ ದಾಳಿಯಿಂದ ಬ್ಯಾಟರ್‌ಗಳನ್ನು ಕಾಡುತ್ತಾರೆ. ತಮ್ಮ ವಿಶಿಷ್ಠಿ ದಾಳಿಯಿಂದ ಹೆಸರುವಾಸಿ. ಬೌಲಿಂಗ್‌ನಲ್ಲಿ ವೇರಿಯೇಷನ್‌ನಿಂದ ಟೀಮ್ ಇಂಡಿಯಾಕ್ಕೆ ನೆರವಾಗುವ ಬೌಲರ್. ಇವರನ್ನು ತಂಡದ ಯಶಸ್ವಿ ಬೌಲರ್ ಎಂದು ಅಭಿಮಾನಿಗಳು ಕರೆಯುತ್ತಾರೆ. ಇತ್ತೀಚಿಗೆ ಬುಮ್ರಾ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದರು.
ಮಾಧ್ಯಮದವು ಕೇಳಿದ ಜಠಿಲ ಪ್ರಶ್ನೆಗೆ ಬುಮ್ರಾ ಸಲೀಸಾಗಿ ಉತ್ತರ ನೀಡಿದ್ದಾರೆ. ಅವರ ಉತ್ತರ ಕೇಳಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ. ಭಾರತೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಜನ ಶ್ರೇಷ್ಠ ನಾಯಕರು ಇದ್ದಾರೆ. ಆದರೆ ವೈಯಕ್ತಿಕವಾಗಿ ನೀವು ನನಗೆ ನನ್ನ ನಾಯಕನ ಬಗ್ಗೆ ಕೇಳಿದರೆ, ನಾನೇ ನನ್ನ ನೆಚ್ಚಿನ ನಾಯಕ ಎಂದಿದ್ದಾರೆ.

ಇದೇ ವೇಳೆ ಜಸ್ಪ್ರಿತ್ ಬುಮ್ರಾ ಅವರಿಗೆ ನಿಮ್ಮ ನೆಚ್ಚಿನ ಕ್ಷಣ ಯಾವುದು ಎಂದು ಪ್ರಶ್ನಿಸಿದರು. 2024ರ T20 ವಿಶ್ವಕಪ್ ನೆಚ್ಚಿನ ಕ್ಷಣದ ಬಗ್ಗೆ ಜಸ್ಪ್ರೀತ್ ಬುಮ್ರಾ ಮೆಲಕು ಹಾಕಿದರು. ಫೈನಲ್ ಪಂದ್ಯದ ಕೊನೆಯ ಎಸೆತ.. ಆ ಕ್ಷಣದ ಬಗ್ಗೆ ಪದಗಳಲ್ಲಿ ವರ್ಣನೆ ಮಾಡಲು ಆಗದು ಎಂದಿದ್ದಾರೆ.
ಇನ್ನು ಇದೇ ವೇಳೆ ನೀವು ಕ್ರಿಕೆಟ್ ಅಂಗಳದಲ್ಲಿ ಆಲಿ ಪೋಪ್, ಶಾನ್ ಮಾರ್ಷ್, ಮೊಹಮ್ಮದ್ ರಿಜ್ವಾನ್, ಆಲಿ ರಾಬಿನ್ಸನ್ ಅವರ ವಿಕೆಟ್ ಪಡೆದಿದ್ದೀರಾ. ಐಪಿಎಲ್‌ನಲ್ಲಿ ಚೊಚ್ಚಲ ಪಂದ್ಯದಲ್ಲೇ ವಿರಾಟ್ ಕೊಹ್ಲಿ ವಿಕೆಟ್ ಪಡೆದಿದ್ದೀರಿ. ಈ ಇಷ್ಟಲ್ಲದರಲ್ಲಿ ನಿಮ್ಮ ನೆಚ್ಚಿನ ವಿಕೆಟ್ ಯಾವುದು ಪ್ರಶ್ನಿಸಿದ್ದಾರೆ. ಅದಕ್ಕೆ ಬುಮ್ರಾ 19 ನೇ ವಯ್ಸಸಿನಲ್ಲಿ ವಿರಾಟ್ ಕೊಹ್ಲಿ ಅವರನ್ನು ಔಟ್ ಮಾಡಿದ್ದು, ತುಂಬ ಖುಷಿ ನೀಡಿದ ಕ್ಷಣ ಎಂದು ಬಂಣಿಸಿದ್ದಾರೆ.

16ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯಾ ನಾಯಕತ್ವದಲ್ಲಿ ಆಡಬೇಕಾಯಿತು. ಈ ವೇಳೆ ಮೈದಾನದಲ್ಲಿ ಅವರ ವಿರುದ್ಧ ಕೂಗುಗಳು ಕೇಳಿ ಬಂದಿದ್ದವು. ಈ ಪ್ರಶ್ನೆಯನ್ನೇ ಸಂದರ್ಶಕ ಕೇಳಿದರು. ಈ ಸವಾಲಿನ ವೇಳೆ ಮುಂಬೈ ತಂಡ ಹಾರ್ದಿಕ್ ಪಾಂಡ್ಯ ಬೆಂಬಲಸಿತು.
ನಾವು ಅದನ್ನು ತಂಡವಾಗಿ ಪ್ರೋತ್ಸಾಹಿಸುವುದಿಲ್ಲ, ಪ್ರಚಾರ ಮಾಡುವುದಿಲ್ಲ. ಇದರ ಅವಶ್ಯಕತೆ ಇಲ್ಲ ಎಂದು ನಾವು ಭಾವಿಸುತ್ತೇವೆ. ನಾಯಕ ಹಾರ್ದಿಕ್‌ಗೂ ಎಲ್ಲರ ಬೆಂಬಲ ಅವಶ್ಯಕತೆ ಇತ್ತು. 2024ರಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದಾಗ ಹಾರ್ದಿಕ್ ಪಾಂಡ್ಯ ಮೇಲೆ ಇಮೇಜ್ ಬದಲಾಯಿತು ಎಂದು ತಿಳಿಸಿದ್ದಾರೆ.