Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಬುಮ್ರಾ 5 ಐಪಿಎಲ್‌ ಪಂದ್ಯವಾಡಿದರೂ ವಿಕೆಟ್‌ ಪಡೆದಿಲ್ಲ ಏಕೆ? ಅಶ್ವಿನ್ ದೊಡ್ಡ ಹೇಳಿಕೆ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌)ನಲ್ಲಿ ಭರವಸೆ ಮೂಡಿಸಿದ್ದ ಬೌಲರ್‌ಗಳು ನಿರಾಸೆ ಅನುಭವಿಸುತ್ತಿದ್ದಾರೆ. ಈ ಪಟ್ಟಿಯಲ್ಲಿ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅವರ ಹೆಸರು ಮುಂಚೂಣಿಯಲ್ಲಿರುತ್ತದೆ. ಆಶ್ಚರ್ಯಕರ ಎನಿಸುವಂತಹ ಅಂಕಿ ಅಂಶಗಳು ಬುಮ್ರಾ ಅವರ ಬುಟ್ಟಿಯಲ್ಲಿವೆ. ಈ ಬಾರಿಯ ಐಪಿಎಲ್‌ನಲ್ಲಿ ಬುಮ್ರಾ ಆಡಿದ ನಾಲ್ಕೂ ಪಂದ್ಯಗಳಲ್ಲಿ ಖಾಲಿ ಕೈಯಲ್ಲಿ ಮೈದಾನದಿಂದ ಹೊರ ನಡೆದಿದ್ದಾರೆ. ಈ ಅಂಕಿ ಅಂಶ ನಿಜಕ್ಕೂ ಮುಂಬೈ ಇಂಡಿಯನ್ಸ್‌ ಕ್ಯಾಂಪ್‌ನಲ್ಲಿ ಚಿಂತೆಯ ಗೆರೆಗಳನ್ನು ಮೂಡಿಸುವಂತೆ ಮಾಡಿವೆ. ಆದರೂ ಸಹ ಯಾರ್ಕರ್ ಸ್ಪೆಷಲಿಸ್ಟ್‌ ಜಸ್ಪ್ರೀತ್ ಬುಮ್ರಾ ಅವರ ಬೆಂಬಲಕ್ಕೆ ರವಿಚಂದ್ರನ್ ಅಶ್ವಿನ್ ನಿಂತಿದ್ದಾರೆ.

ಬುಮ್ರಾ ಅವರ ನಿಜವಾದ ಶಕ್ತಿ ವಿಕೆಟ್ ಪಡೆಯುವುದರಲ್ಲಿ ಮಾತ್ರವಲ್ಲ, ಅವರ ನಿಖರವಾದ ಯಾರ್ಕರ್‌ಗಳ ಮೂಲಕ ಎದುರಾಳಿಗಳನ್ನು ಕಾಡಬಲ್ಲರು ಎಂದು ಅಶ್ವಿನ್‌ ನಂಬುತ್ತಾರೆ. ಕ್ರಿಕ್‌ವಿಜ್‌ ಮಾಹಿತಿಯ ಪ್ರಕಾರ ಜಸ್ಪ್ರೀತ್ ಬುಮ್ರಾ ಅವರು 122 ಎಸೆತಗಳಲ್ಲಿ ಒಂದೇ ಒಂದು ವಿಕೆಟ್‌ ಪಡೆದಿಲ್ಲ. ಇದು ಅವರ ಐಪಿಎಲ್ ವೃತ್ತಿಜೀವನದ ವಿಕೆಟ್‌ ಪಡೆಯದೇ ಇರುವ ದೊಡ್ಡ ಅವಧಿಯಾಗಿದೆ. ಜಸ್ಪ್ರೀತ್ ಬುಮ್ರಾ ಈ ಆವೃತ್ತಿಯ 4 ಪಂದ್ಯ ಹಾಗೂ ಕಳೆದ ಆವೃತ್ತಿಯಲ್ಲಿ ಮುಂಬೈ ಆಡಿದ ಕೊನೆಯ ಪಂದ್ಯದಲ್ಲೂ ವಿಕೆಟ್‌ ಪಡೆಯುವಲ್ಲಿ ವಿಫಲರಾಗಿದ್ದರು.

Jasprit Bumrah

ಭಾನುವಾರ ನಡೆದ ಎರಡನೇ ಪಂದ್ಯದಲ್ಲೂ ಬುಮ್ರಾ ಅವರು ಆರ್‌ಸಿಬಿ ವಿರುದ್ಧವೂ ವಿಕೆಟ್‌ ಪಡೆಯುವಲ್ಲಿ ವಿಫಲರಾದರು. ಆದರೆ ಇವರು ಮುಂಬೈ ಪರ ಕಡಿಮೆ ಎಕಾನಮಿ ಹೊಂದಿರುವ ಬೌಲರ್‌ ಎಂಬ ಖ್ಯಾತಿ ಹೊಂದಿದ್ದಾರೆ. ಇವರು ಆರ್‌ಸಿಬಿ ವಿರುದ್ಧ ಮಾಡಿದ 4 ಓವರ್‌ಗಳಲ್ಲಿ 35 ರನ್‌ ನೀಡಿದ್ದಾರೆ. ಆರ್‌ಸಿಬಿ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 240 ರನ್‌ ಸೇರಿಸಿತ್ತು.

ಬರೀ ವಿಕೆಟ್‌ ಪಡೆಯುವುದು ಅಷ್ಟೇ ಅಲ್ಲ...

ಜಸ್ಪ್ರೀತ್ ಬುಮ್ರಾ ಅವರ ಬಗ್ಗೆ ಮಾತನಾಡುತ್ತಾ ಅಶ್ವಿನ್‌, ವಿಕೆಟ್‌ ಕಾಲಂ ನಲ್ಲಿ ಮಾತ್ರ ಗಮನಹರಿಸುವುದು ತಪ್ಪು. ಬುಮ್ರಾ ಅವರ ಕೊಡುಗೆ ವಿಕೆಟ್‌ ಪಡೆಯುವುದಕ್ಕಿಂತ ಹೆಚ್ಚಾಗಿದೆ. ಯಾರ್ಕರ್‌ ಸ್ಪೇಷಲಿಸ್ಟ್‌ ಒತ್ತಡವನ್ನು ಸೃಷ್ಟಿಸಿ, ಎದುರಾಳಿ ಬ್ಯಾಟರ್‌ಗಳು ತಪ್ಪು ಮಾಡುವಂತೆ ಒತ್ತಾಯಿಸುತ್ತಾರೆ. ಅಲ್ಲದೆ ಬ್ಯಾಟರ್‌ಗಳು ಮುಕ್ತವಾಗಿ ಆಡದಂತೆ ತಡೆಯುತ್ತಾರೆ, ಇದು ಟಿ 20 ಕ್ರಿಕೆಟ್‌ನಲ್ಲಿ ವಿಕೆಟ್ ಪಡೆಯುವಷ್ಟೇ ಮುಖ್ಯವಾಗಿದೆ ಎಂದು ಅಶ್ವಿನ್ ತಿಳಿಸಿದ್ದಾರೆ.

Jasprit Bumrah

ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದು ಜೊತೆಯಾಟದ ಆಟ. ಒಬ್ಬ ಬೌಲರ್‌ ಶಿಸ್ತುಬದ್ಧವಾಗಿ ದಾಳಿ ಸಂಘಟಿಸಿದರೆ, ಅವರು ಹಾಕುವ ಈ ಒತ್ತಡ ಇತರೆ ಬೌಲರ್‌ಗಳಿಗೆ ಸಹಾಯಕವಾಗುತ್ತದೆ ಎಂದು ಅಶ್ವಿನ್ ಅಭಿಪ್ರಾಯ ಪಟ್ಟಿದ್ದಾರೆ. ಬುಮ್ರಾ ಅವರು ಈ ಐದು ಪಂದ್ಯಗಳಲ್ಲಿ ಉತ್ತಮ ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ. ಇವರು ಎರಡು ಪಂದ್ಯಗಳಲ್ಲಿ ಮಾತ್ರ 10ಕ್ಕೂ ಹೆಚ್ಚಿನ ರನ್ ನೀಡಿದ್ದಾರೆ.

Story first published: Monday, April 13, 2026, 14:59 [IST]
Other articles published on Apr 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+