For Quick Alerts
ALLOW NOTIFICATIONS  
For Daily Alerts
 

ಮೊಹಮ್ಮದ್ ಶಮಿ ಮೈದಾನಕ್ಕೆ ಮರಳುವುದು ಯಾವಾಗ?, ಜಯ್ ಶಾ ಹೇಳಿದ್ದೇನು?

ಭಾರತ ತಂಡದ ಸ್ಟಾರ್‌ ಬೌಲರ್‌ ಮೊಹಮ್ಮದ್ ಶಮಿ ಗಾಯದಿಂದ ಹಲವು ದಿನಗಳ ಕಾಲ ಮೈದಾನದಿಂದ ದೂರವಿದ್ದರು. ಈಗ ಅವರು ಮೈದಾನಕ್ಕೆ ಮರಳುವ ಬಗ್ಗೆ ದಿನಗಣನೆ ಆರಂಭವಾಗಿದೆ. ಈಗ ಶಮಿ ಅವರು ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಹಾಗಿದ್ದರೆ ಅವರು ಮೈದಾನಕ್ಕೆ ಮರಳುವುದು ಯಾವಾಗ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

ಮೊಹಮ್ಮದ್‌ ಶಮಿ ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಹಾರ್ದಿಕ್‌ ಪಾಂಡ್ಯ, 2023 ಏಕದಿನ ಪಂದ್ಯದ ಬಾಂಗ್ಲಾದೇಶದ ಪಂದ್ಯದ ವೇಳೆ ಗಾಯಕ್ಕೆ ತುತ್ತಾದರು. ಆ ಬಳಿಕ ತಂಡದಲ್ಲಿ ಮೊಹಮ್ಮದ್ ಶಮಿ ಅವರಿಗೆ ಸ್ಥಾನ ಲಭಿಸಿತು. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡ ಶಮಿ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡಿದರು. ಅಲ್ಲದೆ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದು ಸಾಧನೆ ಮಾಡಿದರು.

Jay Shah Hints at Mohammed Shami s Imminent International Comeback

ವಿಶ್ವಕಪ್‌ ಫೈನಲ್‌ ಪಂದ್ಯದ ಬಳಿಕ ಶಮಿ ಗಾಯದ ಬಗ್ಗೆ ಮಾಹಿತಿ ಲಭ್ಯವಾಯಿತು. ಬಳಿಕ ಶಮಿ ಶಸ್ತ್ರ ಚಿಕಿತ್ಸೆಗೆ ಒಳಗಾದರು. ಶಮಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನವೆಂಬರ್ 19 ರಂದು ಟೀಮ್ ಇಂಡಿಯಾ ಪರ ಕೊನೆಯ ಪಂದ್ಯವನ್ನು ಆಡಿದರು. ಈಗ ಶಮಿ ಮೈದಾನಕ್ಕೆ ಮರಳು ಸಿದ್ಧರಾಗಿದ್ದಾರೆ. ಶಮಿ ಮೈದಾನಕ್ಕೆ ಮರಳು ಬಗ್ಗೆ ಅವರು ಸಹ ತಮ್ಮ ಅನಿಸಿಕೆ ತಿಳಿಸಿದ್ದರು.

ರಣಜಿ ಆಡಲಿರುವ ಶಮಿ

ಪಿಟಿಐ ವರದಿಗಳ ಪ್ರಕಾರ, ಅಕ್ಟೋಬರ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಮೊದಲು ಮೊಹಮ್ಮದ್‌ ಶಮಿ, ತಮ್ಮ ತವರು ಪಶ್ಚಿಮ ಬಂಗಾಳ ಪರ ರಣಜಿ ಟೂರ್ನಿಯಲ್ಲಿ ಆಡಲಿದ್ದಾರೆ. ಅಕ್ಟೋಬರ್ 11 ರಿಂದ ರಣಜಿ ಟ್ರೋಫಿ ಆರಂಭವಾಗಲಿದೆ. ಈ ಪಂದ್ಯದಲ್ಲಿ ಬಂಗಾಳ ಉತ್ತರ ಪ್ರದೇಶವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಶಮಿ ಆಡುವುದನ್ನು ಕಾಣಬಹುದಾಗಿದೆ. ಈ ತಂಡದಲ್ಲಿ ಆಡಿದ ಬಳಿಕವೇ ಶಮಿ ಅಕ್ಟೋಬರ್ 19 ರಿಂದ ನ್ಯೂಜಿಲೆಂಡ್ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ತಂಡ ಸೇರಬಹುದು.

ಮೈದಾನಕ್ಕೆ ಮರಳುವುದು ಯಾವಾಗ?

ಮೊಹಮ್ಮದ್ ಶಮಿ ಮೈದಾನಕ್ಕೆ ಮರಳುವ ಬಗ್ಗೆ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಖಚಿತ ಪಡಿಸಿದ್ದಾರೆ. ಟೈಮ್‌ ಆಫ್‌ ಇಂಡಿಯಾದೊಂದಿಗೆ ಮಾತನಾಡಿರುವ ಶಾ, ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಶಮಿ ಆಡಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಟೀಮ್ ಇಂಡಿಯಾ ಸದ್ಯ ಉತ್ತಮ ಲಯದಲ್ಲಿದೆ. ಯಾರ್ಕರ್ ಸ್ಪೇಷಲಿಸ್ಟ್‌ ಅವರಿಗೆ ವಿಶ್ರಾಂತಿ ನೀಡಿದ್ದೇವೆ. ಬಾರ್ಡರ್‌ ಗವಾಸ್ಕರ್‌ ಟೂರ್ನಿಯ ವೇಳೆ ಶಮಿ ಫಿಟ್ ಆಗುವು ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.

Jay Shah Hints at Mohammed Shami s Imminent International Comeback

ಮೊಹಮ್ಮದ್ ಶಮಿ ಅವರ ಅನುಭವ ನಮ್ಮ ತಂಡಕ್ಕೆ ಆಸ್ಟ್ರೇಲಿಯಾದಲ್ಲಿ ನೆರವಿಗೆ ಬರಲಿದೆ ಎಂದು ಜಯ್‌ ಶಾ ತಿಳಿಸಿದ್ದಾರೆ.

ಶಮಿ ಸಾಧನೆ

ಶಮಿ ಭಾರತದ ಪರ ಮೂರು ಫಾರ್ಮ್ಯಾಟ್‌ಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಟೀಂ ಇಂಡಿಯಾ ಪರ ಇದುವರೆಗೆ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದು,101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್‌ ಕಬಳಿಸಿದ್ದಾರೆ. ಇನ್ನು 23 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 25 ವಿಕೆಟ್‌ ಸಾಧನೆ ಮಾಡಿದ್ದಾರೆ.

Story first published: Monday, August 19, 2024, 9:15 [IST]
Other articles published on Aug 19, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+