ಶೀಘ್ರದಲ್ಲೇ ಐಸಿಸಿ ಚುಕ್ಕಾಣಿ ಹಿಡಿಯಲಿದ್ದಾರೆ ನೂತನ ಬಾಸ್: ಯಾರೆಲ್ಲಾ ರೇಸ್‌ನಲ್ಲಿದ್ದಾರೆ ಗೊತ್ತಾ?
ಇತ್ತೀಚಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಆನ್ ಲೈನ್ ಸಭೆ ನಡೆಸಿತು. ಈ ಮಂಡಳಿಯ ಸಭೆಯಲ್ಲಿ ಹಲವು ಮಹತ್ವದ ವಿಷಯಗಳ ಬಗ್ಗೆ ಚರ್ಚೆಗಳು ನಡೆದವು. ಇದೇ ವೇಳೆ ಐಸಿಸಿ ಮುಂದಿನ ಅಧ್ಯಕ್ಷ ಯಾರು ಎಂಬ ಬಗ್ಗೆ ಹಲವು ಚರ್ಚೆಗಳು ನಡೆದವು.
ಅಂದಾಹಾಗೆ ಹಾಲಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ ಅವರ ಅವಧಿಯು ನವೆಂಬರ್‌ರಲ್ಲಿ ಕೊನೆಗೊಳ್ಳುತ್ತದೆ. ಈ ಹುದ್ದೆಗೆ ಅವಿರೋಧ ಆಯ್ಕೆ ಆಗುತ್ತದೋ ಅಥವಾ ಚುನಾವಣೆಗಳು ನಡೆಯುತ್ತವೆ ಎಂಬುದರ ಬಗ್ಗೆ ಇನ್ನು ಸ್ಪಷ್ಟತೆ ಇಲ್ಲ. ಇನ್ನು ಕೆಲವೇ ತಿಂಗಳಲ್ಲಿ ಗ್ರೆಗ್ ಬಾರ್ಕ್ಲೇ ಅವರ ಅವಧಿ ಕೊನೆಗೊಳ್ಳಲಿದೆ. ಈ ಸಭೆಯಲ್ಲಿ ಇನ್ನು ಚುನಾವಣೆಗಳ ದಿನಾಂಕವೂ ನಿಗದಿಯಾಗಿಲ್ಲ. ಅಧ್ಯಕ್ಷ ಹುದ್ದೆಗೆ ಎರಡು ಅಥವಾ ಅದಕ್ಕಿಂತ ಹೆಚ್ಚಿನ ನಾಮ ಪತ್ರಗಳು ಬಂದಿದ್ದೇ ಆದಲ್ಲಿ ಇನ್ನು ಎರಡು ಮೂರು ತಿಂಗಳಲ್ಲಿ ಚುನಾವಣಾ ಪ್ರಕ್ರಿಯೆ ಆರಂಭವಾಗ ಬಹುದು.

ಐಸಿಸಿ ಅಧ್ಯಕ್ಷರ ರೇಸ್‌ನಲ್ಲಿ ಯಾರಿದ್ದಾರೆ ಗೊತ್ತಾ?
ಐಸಿಸಿ ಅಧ್ಯಕ್ಷರ ಅವಧಿ ಮುಗಿಯುವ ವೇಳೆಗೆ ಅವರ ಉತ್ತರಾಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ. ಇನ್ನು ಈ ಸ್ಥಾನದ ಮೇಲೆ ಆಕಾಂಕ್ಷಿಗಳು ನಾಮ ನಿರ್ದೇಶನಗಳನ್ನು ಸಲ್ಲಿಸಲು ಆಗಸ್ಟ್ 27, 2024 ರವರೆಗೆ ಸಮಯ ನೀಡಲಾಗಿದೆ. ಇನ್ನು ಐಸಿಸಿ ಈ ನಾಮ ನಿರ್ದೇಶನವನ್ನು ಸಲ್ಲಿಸಲು ಸಮಯಾವಕಾಶವನ್ನು ನೀಡುತ್ತದೆ. ಈ ಹುದ್ದೆಯ ಮೇಲೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೆಸರೂ ಮುಂಚೂಣಿಯಲ್ಲಿ ಕೇಳಿ ಬರುತ್ತಿದೆ.
ಜಯ್ ಶಾ ಅವರು ತಮ್ಮಲ್ಲಿ ಮ್ಯಾನೇಜ್ಮೆಂಟ್ ಗುಣಗಳು ಇವೆ ಎಂಬುದನ್ನು ಈಗಾಗಲೇ ಸಾಬೀತು ಪಡಿಸಿದ್ದಾರೆ. ಈಗಾಗಲೇ ಎಸಿಸಿ ಅಧ್ಯಕ್ಷರಾಗಿ ಅದ್ಭುತ ಕೆಲಸ ಮಾಡಿದ್ದಾರೆ. ಈ ಮೂಲಕ ತಮ್ಮ ಗುಣಗಳನ್ನು ಸಾಬೀತು ಪಡಿಸಿದ್ದಾರೆ. ಹೊಸ ಅಧ್ಯಕ್ಷರ ಅಧಿಕಾರಾವಧಿಯು ಡಿಸೆಂಬರ್ 1, 2024 ರಿಂದ ಪ್ರಾರಂಭವಾಗಲಿದೆ.
ಹಾಲಿ ಐಸಿಸಿ ಅಧ್ಯಕ್ಷ ಬಾರ್ಕ್ಲೇಯಿಂದ ಸ್ಥಾನ ಅಧಿಕಾರ ವಹಿಸಿಕೊಳ್ಳುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಜಯ್ ಶಾ ಒಬ್ಬರು. ಜಯ್ ಶಾ 2019 ಬಿಸಿಸಿಐ ಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸದ್ಯ ಎರಡನೇ ಅವಧಿಗೆ ಇದೇ ಹುದ್ದೆಯಲ್ಲಿ ಮುಂದುವರೆದಿದ್ದಾರೆ. ಇವರ ಅಧಿಕಾರ ಅವಧಿ 2025ರಲ್ಲಿ ಮುಗಿಯ ಬಹುದು.
ಐಸಿಸಿ ಅಧ್ಯಕ್ಷ ಸ್ಥಾನದ ಮೇಲೆ ಬಿಸಿಸಿಐ ಕಾರ್ಯದರ್ಶಿ ಕಣ್ಣು ನೆಟ್ಟಿದ್ದಾರೆ. ಐಸಿಸಿ ಮಂಡಳಿಯಲ್ಲಿ ಸೇವೆ ಸಲ್ಲಿಸಿದ ಬಳಿಕ ಜಯ್ ಶಾ ಮತ್ತೆ ಬಿಸಿಸಿಐಗೆ ಮರಳಬಹುದು.
ಯುಎಇಗೆ ಸ್ಥಳಾಂತರ
ಮಹಿಳಾ ಟಿ20 ವಿಶ್ವಕಪ್ ಟೂರ್ನಿ ಬಾಂಗ್ಲಾದೇಶದಲ್ಲಿ ನಡೆಯಬೇಕಿತ್ತು. ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿ ಹಿಂಸಾಚಾರಗಳು ಭುಗಿಲೆದ್ದಿದ್ದರಿಂದ, ಟಿ20 ವಿಶ್ವಕಪ್‌ನ್ನು ಸ್ಥಳಾಂತರಿಸಲಾಗಿದೆ. ವಿಶ್ವಕಪ್ ಟೂರ್ನಿಯನ್ನು ಭಾರತದಲ್ಲಿ ಆಯೋಜಿಸುವಂತೆ ಕೇಳಿಕೊಳ್ಳಲಾಗಿತ್ತು. ಆದರೆ ಬಿಸಿಸಿಐ ನಿರಾಕರಿಸಿತ್ತು. ಈ ಟೂರ್ನಿಯನ್ನು ಯುಎಇನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications