2024ರ ಟಿ20 ವಿಶ್ವಕಪ್‌ನ ಟಾಪ್ 4 ಸೆಮಿಫೈನಲಿಸ್ಟ್ ತಂಡಗಳ ಭವಿಷ್ಯ ನುಡಿದ ಜಯ್ ಶಾ
ಇದೇ ಜೂನ್ 2ರಿಂದ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಬಹು ನಿರೀಕ್ಷಿತ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ದಿನಗಣನೆ ಶುರುವಾಗಿದ್ದು, ಜಗತ್ತಿನಾದ್ಯಂತದ ಕ್ರಿಕೆಟ್ ಪ್ರೇಮಿಗಳಿಗೆ ಭಾರೀ ಉತ್ಸಾಹ ಉಂಟುಮಾಡುತ್ತಿದೆ.
ಏಕೆಂದರೆ ಕ್ರಿಕೆಟ್‌ನ ಚುಟುಕು ಸ್ವರೂಪವು ಅನಿರೀಕ್ಷಿತ ಫಲಿತಾಂಶಗಳೊಂದಿಗೆ ರೋಚಕ ಪಂದ್ಯಗಳ ಭರವಸೆ ನೀಡುತ್ತದೆ. ವಿಶ್ವದ ಬಲಿಷ್ಠ 20 ತಂಡಗಳು ಪ್ರತಿಷ್ಠಿತ ಐಸಿಸಿ ಟ್ರೋಫಿಗಾಗಿ ಸ್ಪರ್ಧಿಸುವುದರಿಂದ, ಈ ಆವೃತ್ತಿಯು ಅಮೆರಿಕದಲ್ಲಿ ಕ್ರಿಕೆಟ್ ಬೆಳೆಯಲು ಅಪರೂಪದ ಅವಕಾಶವನ್ನು ನೀಡುತ್ತದೆ.
ಎಲ್ಲಾ 20 ತಂಡಗಳನ್ನು ಮೊದಲು ಗುಂಪುಗಳಾಗಿ ವಿಭಜಿಸಲಾಗುವುದು. ಲೀಗ್‌ನಲ್ಲಿನ ಅಗ್ರ 2 ತಂಡಗಳು ಸೂಪರ್ 8ಗೆ ಮುನ್ನಡೆಯಲಿದ್ದರೆ, ಅಲ್ಲಿ ಅಗ್ರ 4 ತಂಡಗಳು ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗಲಿವೆ. ಆ ಬಳಿಕ ಅಗ್ರ 2 ತಂಡಗಳು ಫೈನಲ್‌ನಲ್ಲಿ ಸೆಣಸಾಡಲಿವೆ.

2024ರ ಐಪಿಎಲ್ ಪಂದ್ಯಾವಳಿ ಮುಗಿಯುತ್ತಿದ್ದಂತೆಯೇ, ಟಿ20 ವಿಶ್ವಕಪ್ ಜ್ವರ ಹೆಚ್ಚಾಗುತ್ತದೆ. ಈ ವೇಳೆ ಯಾವ ತಂಡಗಳು ಸೆಮಿಫೈನಲ್‌ಗೆ ಮುನ್ನಡೆಯುತ್ತವೆ ಎಂದು ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಊಹಿಸುತ್ತಿದ್ದಾರೆ.
ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಭಾರತದಂತಹ ಇತಿಹಾಸವನ್ನು ಹೊಂದಿರುವ ಬಲಿಷ್ಠ ತಂಡಗಳು ತಮ್ಮ ಶಕ್ತಿಯುತ ಮತ್ತು ವಿಶ್ವಾಸಾರ್ಹ ದಾಖಲೆಗಳ ಕಾರಣದಿಂದಾಗಿ ಉತ್ತಮವಾಗಿ ಪ್ರದರ್ಶನ ನೀಡಲು ನಿರೀಕ್ಷಿಸಲಾಗಿದೆ.
2023ರ ಏಕದಿನ ವಿಶ್ವಕಪ್ ಫೈನಲ್‌ನ ಆಘಾತದ ಬಳಿಕ ಭಾರತ ಈ ಬಾರಿ ಐಸಿಸಿ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯಲ್ಲಿದೆ. ಯುವ ಪ್ರತಿಭೆ ಮತ್ತು ಅನುಭವಿ ಆಟಗಾರರ ಅತ್ಯುತ್ತಮ ಸಂಯೋಜನೆಯು ತಂಡವನ್ನು ಮುನ್ನಡೆಸುತ್ತದೆ. ಭಾರತ ಕೊನೆಯ ಬಾರಿಗೆ 2007ರಲ್ಲಿ ಟಿ20 ವಿಶ್ವಕಪ್ ಗೆದ್ದಿದೆ.
ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಅವರ ಆಕ್ರಮಣಕಾರಿ ವಿಧಾನದಿಂದಾಗಿ ಮಾಜಿ ಚಾಂಪಿಯನ್ ಆಸ್ಟ್ರೇಲಿಯಾ ಐಸಿಸಿ ಪಂದ್ಯಾವಳಿಯಲ್ಲಿ ಸ್ಥಿರ ಪ್ರದರ್ಶನ ನೀಡುವ ನೆಚ್ಚಿನ ತಂಡವಾಗಿದೆ.

ಇದೇ ವೇಳೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ತಮ್ಮ ಹೇಳಿಕೆಯಲ್ಲಿ, ವೆಸ್ಟ್ ಇಂಡೀಸ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಭಾರತ ತಂಡಗಳನ್ನು 2024ರ ಟಿ20 ವಿಶ್ವಕಪ್ ಸೆಮಿಫೈನಲಿಸ್ಟ್‌ಗಳಿಗೆ ತಮ್ಮ ನೆಚ್ಚಿನ ತಂಡಗಳಿಗೆ ಆಯ್ಕೆ ಮಾಡಿದ್ದಾರೆ.
"ಭಾರತ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಆತಿಥೇಯ ವೆಸ್ಟ್ ಇಂಡೀಸ್ 2024ರ ಟಿ20 ವಿಶ್ವಕಪ್ ಗೆಲ್ಲಲು ಪ್ರಬಲ ತಂಡಗಳು," ಎಂದು ಜಯ್ ಶಾ ತಿಳಿಸಿದ್ದಾರೆ. ಈ ತಂಡಗಳು ಪ್ರಬಲ ಸ್ಪರ್ಧಿಗಳಾಗಿರುವುದರಿಂದ ಪಂದ್ಯಾವಳಿಯ ಸೆಮಿಫೈನಲ್ ತಲುಪಲಿವೆ ಎಂದು ಜಯ್ ಶಾ ಅಭಿಪ್ರಾಯಪಟ್ಟಿದ್ದಾರೆ.
2024ರ ಟಿ20 ವಿಶ್ವಕಪ್ ಪಂದ್ಯಾವಳಿಗಾಗಿ ಗುಂಪುಗಳು
ಗುಂಪು ಎ: ಭಾರತ, ಪಾಕಿಸ್ತಾನ, ಐರ್ಲೆಂಡ್, ಕೆನಡಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ
ಗುಂಪು ಬಿ: ಇಂಗ್ಲೆಂಡ್, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್ಲೆಂಡ್, ಓಮನ್
ಗುಂಪು ಸಿ: ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಅಫ್ಘಾನಿಸ್ತಾನ, ಉಗಾಂಡಾ, ಪಪುವಾ ನ್ಯೂ ಗಿನಿಯಾ
ಗುಂಪು ಡಿ: ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್, ನೇಪಾಳ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications