Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಸಿಸಿ ಮುಖ್ಯಸ್ಥರಾಗಿ ಜಯ್‌ ಶಾ ಎಷ್ಟು ವರ್ಷ ಇರುತ್ತಾರೆ? ಹೊರ ಬಿತ್ತು ಬಿಗ್ ಅಪ್‌ಡೇಟ್

ಬಿಸಿಸಿಐ ಕಾರ್ಯದರ್ಶಿಯಾಗಿ ಯಶಸ್ವಿ ಸೇವೆ ಸಲ್ಲಿಸಿದ ಜಯ್‌ ಶಾ, ಈಗ ಐಸಿಸಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುವತ್ತ ಚಿತ್ತ ನೆಟ್ಟಿದ್ದಾರೆ. ಈಗ ಇವರಿಗೆ ಸಂಬಂಧಿಸಿದಂತೆ ದೊಡ್ಡ ಸುದ್ದಿಯೊಂದು ಹೊರ ಬಂದಿದೆ. ಈ ಸುದ್ದಿ ನಿಜಕ್ಕೂ ಜಯ್‌ ಶಾ ಮುಖದಲ್ಲಿ ದೊಡ್ಡ ಮಂದಹಾಸವನ್ನು ಮೂಡಿಸಲಿದೆ.

ಜಯ್‌ ಶಾ ಅಂತಾರಾಷ್ಟ್ರೀಯ ಕ್ರಿಕೆಟ್‌ನ ಅತ್ಯುನ್ನತ ಹುದ್ದೆಯನ್ನು ಅಲಂಕರಿಸಿಲು ಉತ್ಸುಕರಾಗಲಿದ್ದಾರೆ. ಇತ್ತೀಚಿಗೆ ಜಯ್‌ ಶಾ ಅವರನ್ನು ಐಸಿಸಿ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿತ್ತು. ಈ ಹುದ್ದೆಯನ್ನು ಮತ್ತೊಮ್ಮೆ ಭಾರತೀಯರು ಏರಲು ಪ್ಲ್ಯಾನ್‌ ಮಾಡಿಕೊಂಡಿದ್ದಾರೆ. ಈ ಹುದ್ದೆಯನ್ನು ಅಲಂಕರಿಸಲಿರುವ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹಿರಿಮೆಯನ್ನು ಜಯ್‌ ಶಾ ತಮ್ಮದಾಗಿಸಿಕೊಳ್ಳಲಿದ್ದಾರೆ.

Jay Shah Set for 6-Year Tenure as ICC Chairman Following Unopposed Election

ಮಾಧ್ಯಮ ವರದಿಗಳ ಪ್ರಕಾರ ಜಯ್ ಶಾ ಅವರು 6 ವರ್ಷಗಳ ಕಾಲ ಐಸಿಸಿ ಅಧ್ಯಕ್ಷ ಹುದ್ದೆಯಲ್ಲಿ ಇರಲಿದ್ದಾರೆ. ಈ ಮೂಲಕ ಜಯ್‌ ಶಾ ಅವರು ಐಸಿಸಿ ಅಧ್ಯಕ್ಷರಾಗಿ ಸತತ 3 ಅವಧಿಯನ್ನು ಪೂರ್ಣಗೊಳಿಸಲಿದ್ದಾರೆ ಎಂಬ ಮಾಹಿತಿ ಹೊರ ಬಂದಿದೆ.

ಐಸಿಸಿ ಮಂಡಳಿಯ ಸಭೆಯಲ್ಲಿ ಮಹಿಳಾ ಕ್ರಿಕೆಟ್‌ಗೆ ಉತ್ತೇಜನ ನೀಡಲು ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಜಾಗತಿಕ ಸಂಸ್ಥೆಯು ಮಹಿಳಾ ಅಸೋಸಿಯೇಟ್ ಸದಸ್ಯರ T20 ಸ್ಪರ್ಧೆಗಳ ಸರಣಿಯನ್ನು ಸಹ ಅನುಮೋದಿಸಿತು. ಐಸಿಸಿ ಮಹಿಳಾ ಟಿ 20 ವಿಶ್ವಕಪ್‌ನಲ್ಲಿ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಎರಡು ವಾರ್ಷಿಕ ಟಿ 20 ಅಂತಾರಾಷ್ಟ್ರೀಯ ಪಂದ್ಯಾವಳಿಗಳನ್ನು ಪರಿಚಯಿಸಲು ನಾವು ಯೋಜಿಸಿದ್ದೇವೆ" ಎಂದು ಐಸಿಸಿ ತಿಳಿಸಿದೆ.

ಮಾಧ್ಯಮ ವರದಿಗಳ ಪ್ರಕಾರ ಜಯ್ ಶಾ ಅವರ ಅಧಿಕಾರಾವಧಿ 6 ವರ್ಷ ಇರಬಹುದಾಗಿದೆ. ಈ ರೀತಿಯಾಗಿ ಅವರು 3 ವರ್ಷಗಳ ಕಾಲ ಐಸಿಸಿ ಚೇರೆಮನ್ ಆಗಿ ಕೆಲಸ ನಿರ್ವಹಿಸಲಿದ್ದಾರೆ. ಈ ಬಗ್ಗೆ ಇನ್ನು ಅಧಿಕೃತ ಘೋಷಣೆ ಬಾಕಿ ಇದೆ. ಈ ಅನುಮೋದನೆಗೆ ಐಸಿಸಿಯ ಇತರ ಸದಸ್ಯರ ಅನುಮೋದನೆ ಸಿಗುವುದು ಬಾಕಿ ಇದೆ. ಇನ್ನು ಇಗ ಬರುತ್ತಿರುವ ಮಾಹಿತಿಯ ಪ್ರಕಾರ ಜಯ್‌ ಶಾ 2030ರ ವೇಳೆಗೆ ಐಸಿಸಿ ಚೇರೆಮನ್‌ ಆಗಿ ಕಾರ್ಯವನ್ನು ನಿರ್ವಹಿಸಲಿದ್ದಾರೆ.

ಜಯ್‌ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಅಗಸ್ಟ್‌ 27ಕ್ಕೆ ನಾಮ ಪತ್ರ ಸಲ್ಲಿಸಿದ್ದರು. ಜಯ್‌ ಶಾ ಪರವಾಗಿ ಹೆಚ್ಚು ಸದಸ್ಯರು ಮತ ಚಲಾಯಿಸಿದ್ದರಿಂದ, ಜಯ್ ಶಾ ಈ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಆದರು.

Story first published: Monday, October 21, 2024, 23:58 [IST]
Other articles published on Oct 21, 2024
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+