For Quick Alerts
ALLOW NOTIFICATIONS  
For Daily Alerts
 

Jay Shah: ಐಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಜಯ್ ಶಾ

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ( ಐಸಿಸಿ) ಅಧ್ಯಕ್ಷರಾಗಿ ಜಯ್ ಶಾ ಅವರ ಅಧಿಕಾರಾವಧಿ ಪ್ರಾರಂಭವಾಗಿದೆ. ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆ ಜಯ್ ಶಾ ಪಾತ್ರರಾಗಿದ್ದಾರೆ. ನವೆಂಬರ್ 2020 ರಿಂದ ಐಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಗ್ರೆಗ್ ಬಾರ್ಕ್ಲೇ ಅವರ ಸ್ಥಾನದಲ್ಲಿ ಇಂದಿನಿಂದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ ಅವರು ಮುಂದುವರೆಯಲಿದ್ದಾರೆ.

ಜಯ್ ಶಾ ಐಸಿಸಿ ಅಧ್ಯಕ್ಷರಾದ 5 ನೇ ಭಾರತೀಯ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಶರದ್ ಪವಾರ್, ಎನ್ ಶ್ರೀನಿವಾಸನ್, ಶಶಾಂಕ್ ಮನೋಹರ್ ಮತ್ತು ಜಗಮೋಹನ್ ದಾಲ್ಮಿಯಾ ಅವರು ಐಸಿಸಿ ಅಧ್ಯಕ್ಷರಾಗಿದ್ದರು. ಜಯ್ ಶಾ 2009 ರಲ್ಲಿ ಕ್ರಿಕೆಟ್ ಆಡಳಿತದಲ್ಲಿ ತಮ್ಮ ಪ್ರಯಾಣವನ್ನು ಪ್ರಾರಂಭಿಸಿದರು. ಮೊದಲು ಅವರನ್ನು ಅಹಮದಾಬಾದ್‌ನ ಕೇಂದ್ರ ಕ್ರಿಕೆಟ್ ಮಂಡಳಿಯ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿ ಆಯ್ಕೆ ಮಾಡಲಾಗಿತ್ತು.

Jay Shah takes charge as ICC President

2013ರಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ​​(ಜಿಸಿಎ) ನ ಜಂಟಿ ಕಾರ್ಯದರ್ಶಿಯಾದ ನಂತರ ಶಾ ಅವರು ಅಹಮದಾಬಾದ್‌ನಲ್ಲಿ ಐಕಾನಿಕ್ ನರೇಂದ್ರ ಮೋದಿ ಸ್ಟೇಡಿಯಂ ನಿರ್ಮಾಣದಲ್ಲಿ ಸಹಾಯ ಮಾಡಿದರು. 2015 ರಲ್ಲಿ ಅವರು ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಸದಸ್ಯರಾಗಿ ಬಿಸಿಸಿಐಗೆ ಸೇರ್ಪಡೆಗೊಂಡರು.

ಜಯ್ ಶಾ ಹೇಳಿದ್ದೇನು?

ಐಸಿಸಿ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಳ್ಳಲು ನನಗೆ ಹೆಮ್ಮೆಯಾಗುತ್ತಿದೆ ಎಂದು ಜಯ್ ಶಾ ಹೇಳಿದ್ದಾರೆ. ಐಸಿಸಿ ನಿರ್ದೇಶಕರು ಮತ್ತು ಸದಸ್ಯ ಮಂಡಳಿಗಳ ಬೆಂಬಲ, ನಂಬಿಕೆಗೆ ನಾನು ಕೃತಜ್ಞನಾಗಿದ್ದೇನೆ. ಇದು ಕ್ರಿಕೆಟ್ ಆಟಕ್ಕೆ ರೋಮಾಂಚನಕಾರಿ ಕ್ಷಣವಾಗಿದೆ. ನಾವು 2028 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದೇವೆ. ಅಭಿಮಾನಿಗಳಿಗೆ ಕ್ರಿಕೆಟ್ ಅನ್ನು ಹೆಚ್ಚು ಆಸಕ್ತಿಕರಗೊಳಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ನೂತನ ಐಸಿಸಿ ಅಧ್ಯಕ್ಷ ಜಯ್ ಶಾ ಹೇಳಿದ್ದಾರೆ.

ಜಯ್ ಶಾ ಮುಂದಿರುವ ಸವಾಲು

ಐಸಿಸಿ ನೂತನ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದಿರು ಜಯ್ ಶಾ ಅವರ ಮುಂದೆ ಹಲವು
ಜವಾಬ್ದಾರಿಗಳಿವೆ. ಭಾರತ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ 'ಬಿಗ್ 3' ಆಗಿದ್ದು, ಐಸಿಸಿ ಈ ದೇಶಗಳ ಪಂದ್ಯಗಳಿಂದ ಹೆಚ್ಚಿನ ಆದಾಯವನ್ನು ಪಡೆಯುತ್ತದೆ. ಐಸಿಸಿಯ ಹೆಚ್ಚಿನ ಆದಾಯವನ್ನು 'ಬಿಗ್ 3' ಪಡೆಯುತ್ತದೆ. ಇದಕ್ಕೂ ಮೊದಲು, ಕ್ರಿಕೆಟ್ ವೆಸ್ಟ್ ಇಂಡೀಸ್ ಮುಖ್ಯಸ್ಥ ಜಾನಿ ಗ್ರೇವ್ ಅವರು ಆದಾಯ ಹಂಚಿಕೆ ಮಾದರಿಯು ಸಂಪೂರ್ಣವಾಗಿ ಮುರಿದು ಹೋಗಿದೆ ಎಂದು ಹೇಳಿದ್ದರು. ಇಂತಹ ಸಂದರ್ಭದಲ್ಲಿ ಟೆಸ್ಟ್ ಕ್ರಿಕೆಟ್ ಆಡುವ ದೇಶಗಳಿಗಾದರೂ ಹೆಚ್ಚಿನ ಹಣ ಸಿಗುವಂತೆ ನೋಡಿಕೊಳ್ಳುವ ಅತಿ ದೊಡ್ಡ ಸವಾಲು ಶಾ ಮುಂದಿದೆ.

Story first published: Sunday, December 1, 2024, 15:44 [IST]
Other articles published on Dec 1, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+