Jay Shah: ಕ್ರಿಕೆಟ್‌ಗೆ ಜಯ್ ಶಾ ಎಂಟ್ರಿ ನೀಡಿದ್ದು ಹೇಗೆ?, 21 ವಯಸ್ಸಿನಲ್ಲಿ ಫೇಮಸ್
ಮಂಗಳವಾರ ಐಸಿಸಿ, ಭಾರತದ ಕ್ರಿಕೆಟ್ ಅಭಿಮಾನಿಗಳು ಖುಷಿ ಪಡುವ ಸುದ್ದಿಯನ್ನು ನೀಡಿದೆ. ಐಸಿಸಿ ನೂತನ ಅಧ್ಯಕರಾಗಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಈ ಮೂಲಕ ಕಿರಿಯ ಅಧ್ಯಕ್ಷ ಎಂಬ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ ಐದನೇ ಭಾರತೀಯ ಎಂಬ ಹಿರಿಮೆ ಸಹ ಇವರದ್ದಾಗಿದೆ.
ಐಸಿಸಿ ಅಧ್ಯಕ್ಷರ ಹುದ್ದೆಗೆ ಏರಲು 16 ಸದಸ್ಯರ ಪೈಕಿ 9 ಸದಸ್ಯರ ಬೆಂಬಲ ಸಿಗಬೇಕಿತ್ತು. ಇವರಿಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಬಹಿರಂಗವಾಗಿ ಬೆಂಬಲವನ್ನು ಸೂಚಿಸಿದ್ದವು. ಮಂಗಳವಾರ ಅವರು ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಜಯ್ ಶಾ ಕ್ರಿಕೆಟ್ ಬ್ಯಾಕ್ ಗ್ರೌಂಡ್ ಹೊಂದದೇ ಇದ್ದರೂ, ಇಂತಹ ಉನ್ನತ ಹುದ್ದೆಗೆ ಚಿಕ್ಕ ವಯಸ್ಸಿನಲ್ಲಿ ತಲುಪಿದ್ದು ಹೇಗೆ ಎಂಬ ಪ್ರಶ್ನೆಗಳು ಮೂಡುವುದು ಸಹಜ ಇದಕ್ಕೆ ಉತ್ತರ ಇಲ್ಲಿದೆ.

ಚಿಕ್ಕ ವಯಸ್ಸಿನಲ್ಲೇ ಫೇಮಸ್..
ಜಯ್ ಕ್ರಿಕೆಟ್ ಆಟಗಾರರಲ್ಲ. ಆದರೆ ಕ್ರಿಕೆಟ್ ಸಂಬಂಧಿತ ಆಡಳಿತದೊಂದಿಗೆ ಚಿಕ್ಕ ವಯಸ್ಸಿನಿಂದ ನಂಟು ಹೊಂದಿದ್ದಾರೆ. ತಮ್ಮ 21ನೇ ವಯಸ್ಸಿನಲ್ಲಿ ಜಯ್ ಶಾ ಸೆಂಟ್ರಲ್ ಬೋರ್ಡ್ ಆಫ್ ಕ್ರಿಕೆಟ್ ಕಾರ್ಯಕಾರಿ ಮಂಡಳಿಯ ಸದಸ್ಯರಾಗಿದ್ದರು. ದಿನ ಕಳೆದಂತೆ ಕ್ರಿಕೆಟ್ ಆಡಳಿತದಲ್ಲಿ ಇವರ ಸ್ಥಾನ ಮಾನ ಗಣನೀಯವಾಗಿ ಏರುತ್ತಲೆ ಸಾಗಿತು. ತಮ್ಮ 25ನೇ ವಯಸ್ಸಿನಲ್ಲಿ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದರು.
ತಂದೆ ಅಧ್ಯಕ್ಷ, ಮಗ ಜಂಟಿ ಕಾರ್ಯದರ್ಶಿ
ಗುಜರಾತ್ ಕ್ರಿಕೆಟ್ ಅಸೋಸಿಯೇಷನ್‌ನಲ್ಲಿ ಜಯ್ ಶಾ ಜಂಟಿ ಕಾರ್ಯದರ್ಶಿ ಆಗಿದ್ದಾಗ ಅವರ ತಂದೆ ಅಮಿತ್ ಶಾ ಇದೇ ಸಂಸ್ಥೆಯ ಅಧ್ಯಕ್ಷರು ಆಗಿದ್ದರು. ಇದಾದ ಎರಡೇ ವರ್ಷಗಳಲ್ಲಿ ಅಹಮದಾಬಾದ್‌ನಿಂದ ಜಯ್ ಶಾ ಡೈರೆಕ್ಟ್ ಬಿಸಿಸಿಐ ಆಡಳಿಕ್ಕೆ ಕೈ ಹಾಕಿದರು. ಮೊದಲ ಪ್ರಯತ್ನದಲ್ಲಿ ಅವರು ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಸದಸ್ಯರಾದರು.

ಬಿಸಿಸಿಐನಲ್ಲಿ ಹಣಕಾಸು ಮತ್ತು ಮಾರುಕಟ್ಟೆ ಸಮಿತಿಯ ಸದಸ್ಯ ಸ್ಥಾನದ ಜೊತೆ ಜಯ್ ಶಾ 2019ರ ವರೆಗೆ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿಯಾಗಿ ಇದ್ದರು. ಬಳಿಕ ಈ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಬಳಿಕ ಬಿಸಿಸಿಐ ಕಾರ್ಯದರ್ಶಿ ಹುದ್ದೆಗೆ ಏರಿದ ಅತ್ಯಂತ ಕಿರಿಯ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.
ಬಿಸಿಸಿಐನಲ್ಲಿ ಹಿಡಿತ
2022 ರಲ್ಲಿ ಅವರ ಅವಧಿ ಮುಗಿದ ನಂತರ, ಅವರನ್ನು ಕಾರ್ಯದರ್ಶಿಯಾಗಿ ಮರು ಆಯ್ಕೆ ಮಾಡಲಾಯಿತು ಮತ್ತು ಅವರ ಪ್ರಸ್ತುತ ಅವಧಿ 2025 ರಲ್ಲಿ ಕೊನೆಗೊಳ್ಳುತ್ತದೆ. ಬಿಸಿಸಿಐ ಕಾರ್ಯದರ್ಶಿ ಹುದ್ದೆಯಲ್ಲಿದ್ದಾಗ, ಜಯ್ ಶಾ ಅವರು 2021 ರಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರ ಅಧಿಕಾರ ಅವಧಿ ಈ ವರ್ಷದ ಆರಂಭದಲ್ಲಿ ಕೊನೆ ಗೊಳ್ಳಬೇಕಿತ್ತು. ಇನ್ನು ಈ ಹುದ್ದೆ ಶ್ರೀಲಂಕಾ ಪಾಲಾಗಿತ್ತು. ಆದರೆ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರು ಜಯ್ ಶಾ ಅಧಿಕಾರದಲ್ಲಿ ಮುಂದುವರೆಯುವಂತೆ ಬೆಂಬಲಿಸಿ ಮತ ಚಲಾಯಿಸಿದರು.
ಜಯ್ ಶಾ 35ನೇ ವಯಸ್ಸಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಅಧ್ಯಕರಾಗಿದ್ದಾರೆ. ಜಯ್ ಶಾ ಅಧಿಕಾರವಧಿ ಡಿಸೆಂಬರ್ 1 ರಿಂದ ಪ್ರಾರಂಭವಾಗುತ್ತದೆ. ಇವರಿಗಿಂತ ಮೊದಲು ಜಗಮೋಹನ್ ದಾಲ್ಮಿಯಾ, ಶರದ್ ಪವಾರ್, ಎನ್ ಶ್ರೀನಿವಾಸನ್ ಮತ್ತು ಶಶಾಂಕ್ ಮನೋಹರ್ ಐಸಿಸಿ ಅಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications