For Quick Alerts
ALLOW NOTIFICATIONS  
For Daily Alerts
 

ಮಂಗಳೂರಿನಿಂದ ಕನಸಿನ ನೌಕೆ ಏರಿದ್ದ ಜೆಮಿಮಾ ಕುಟುಂಬ

ಜೆಮಿಮಾ ರೋಡ್ರಿಗಸ್‌ ಸದ್ಯ ಭಾರತ ಕ್ರಿಕೆಟ್‌ ನಲ್ಲಿ ಭಾರೀ ಚರ್ಚೆಯಲ್ಲಿರುವ ಹೆಸರು. ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಜೆಮಿಮಾ ಅಮೋಘ ಪ್ರದರ್ಶನ ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಅಸಾಧ್ಯವಾದದನ್ನು ಸಾಧ್ಯವಾಗಿಸಿದ ಹೆಗ್ಗಳಿಕೆ ಭಾರತ ತಂಡಕ್ಕೆ ಸಲ್ಲುತ್ತದೆ. ಈ ಪಂದ್ಯದಲ್ಲಿ ಜೆಮಿಮಾ ಕಮಾಲ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಇವರು ಮುಂಬೈ ನಿವಾಸಿಯಾದರೂ ಇವರಿಗೂ ಕರ್ನಾಟಕಕ್ಕೂ ಒಂದು ಸಂಬಂಧ ಇದೆ. ಹಾಗಿದ್ದರೆ ಆ ಸಂಬಂಧ ಏನು ಎಂಬ ಬಗ್ಗೆ ವರದಿ ಇಲ್ಲಿದೆ.

22 ಯಾರ್ಡ್‌ ಸರ್ಕಲ್‌ನಲ್ಲಿ ಮಿಂಚಿನಂತೆ ಓಡುತ್ತಾ ಸ್ಟ್ರೈಕ್‌ ರೋಟೆಟ್‌ ಮಾಡಿ, ಸ್ಕೋರ್‌ ಬೋರ್ಡ್‌ಗೆ ಯಾವಾಗಲೂ ಕೆಲಸವನ್ನು ನೀಡುವ ಜೆಮಿಮಾ ರೋಡ್ರಿಗಸ್‌, 25ನೇ ವಯಸ್ಸಿನಲ್ಲಿ ವಿಶ್ವವೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ಇವರ ಆಟವನ್ನು ಕಂಡು ದಿಗ್ಗಜ ಆಟಗಾರರು ಸಹ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ. ಇನ್ನು ಅವರ ಕುಟುಂಬದವರಂತೂ ತಾವೇ ಆಡಿದಷ್ಟು ಖುಷಿಯನ್ನು ಪಟ್ಟಿದ್ದಾರೆ. ಅಂದಹಾಗೆ ಜೆಮಿಮಾಗೂ ಕರ್ನಾಟಕದ ಕೋಸ್ಟಲ್‌ ಭಾಗಕ್ಕೂ ಸಂಬಂಧವಿದೆ.

Jemimah Rodrigues Coastal Karnataka Connection Revealed

ಕರ್ನಾಟಕದ ಕರವಾಳಿ ಭಾಗವಾದ ಮಂಗಳೂರಿನಲ್ಲಿ ಜೇಮಿಮಾ ರೋಡ್ರಿಗಸ್‌ ಅವರ ಕುಟುಂಬದ ಬೇರುಗಳು ಬೇರು ಬಿಟ್ಟಿವೆ. ದೊಡ್ಡ ಕನಸಿನ ಕುದುರೆಯ ಬೆನ್ನು ಹತ್ತಿ ಹೋದಾಗ, ಕುದುರೆ ಹೇಗೆ ಪ್ರಯಾಣ ಬೆಳೆಸುತ್ತದೋ ಹಾಗೆ ಪ್ರಯಾಣಿಸಿದ ರೋಡ್ರಿಗಸ್‌ ಕುಟುಂಬ ಮುಂಬೈನಲ್ಲಿ ನೆಲಿಸಿತ್ತು. ಜೇಮಿಮಾ ಸೆಪ್ಟಂಬರ್ 5, 2000 ರಂದು ಮುಂಬೈನಲ್ಲಿ ಜನಿಸಿದರು. ಇವರು ರೋಮನ್‌ ಕ್ಯಾಥೋಲಿಕ್ ಕುಟಂಬದಲ್ಲಿ ಜನಿಸಿದರು. ಇವರ ಪೂರ್ವಜರು ಮಂಗಳೂರು ಮೂಲದವರು.

ಮಂಗಳೂರು TO ಮುಂಬೈ

ಮಕ್ಕಳ ಉನ್ನತ ಭವಿಷ್ಯಕ್ಕಾಗಿ ಕುಟುಂಬ ಮಂಗಳೂರಿನಿಂದ ಮಾಯಾನಗರಿಗೆ ಶಿಫ್ಟ್‌ ಆಯಿತು. ಈ ವೇಳೆ ಶೈಕ್ಷಣಿಕ ಹಾಗೂ ಕ್ರೀಡಾ ಕ್ಷೇತ್ರದಲ್ಲಿ ವಿಫುಲ ಅವಕಾಶ ಸಿಗಬಹುದ ಎಂಬ ಕಾರಣಕ್ಕೆ ಕರ್ನಾಟಕದ ಕರವಾಳಿ ಪ್ರದೇಶದಿಂದ, ಮಹಾರಾಷ್ಟ್ರದ ಕರವಾಳಿಗೆ ವಲಸೆ ಹೋಯಿತು. ಮುಂಬೈನಲ್ಲೇ ಜೆಮಿಮಾ ಹುಟ್ಟಿದರು. ಅಲ್ಲದೆ ವ್ಯಸಾಂಗ ಹಾಗೂ ಕ್ರಿಕೆಟ್‌ ಅಭ್ಯಾಸವನ್ನು ಇದೇ ಅಂಗಳದಲ್ಲಿ ಆರಂಭಿಸಿದರು. ತಂದೆ ಇವಾನ್‌ ರೋಡ್ರಿಗಸ್‌ ಕ್ಲಬ್‌ ಪರ ಕ್ರಿಕೆಟ್‌ ಆಡಿದ ಆಟಗಾರ. ಸದ್ಯ ಜೂನಿಯರ್‌ ಆಟಗಾರರಿಗೆ ತರಬೇತಿ ನೀಡುತ್ತಾರೆ. ಜೆಮಿಮಾ ಅವರ ಕ್ರಿಕೆಟ್‌ ಪ್ರೀತಿಗೆ ಆರಂಭದಲ್ಲಿ ನೀರು ಹಾಕಿ ಪೋಷಿಸಿದವರು, ಇವರೇ. ನೆಟ್ಸ್‌ನಲ್ಲಿ ಜೆಮಿಮಾ ಬೆವರು ಹರಿಸುವಾಗ ತಂದೆ ನಿಂತು ಪೋಷಿಸಿದ್ದಾರೆ. ತಾಯಿ ಲವಿತಾ ಇವರ ಶ್ರಮಕ್ಕೆ ಬೆನ್ನೆಲುಬಾಗಿ ನಿಂತವರು.

ಧಾರ್ಮಿಕ ಸಭೆಗಳನ್ನು ನಡೆಸಲು ಕ್ಲಬ್‌ ಖಾರ್ ಜಿಮ್ಖಾನಾ ಜೆಮಿಮಾ ಸ್ಥಳವನ್ನು ಬಳಸಿದಕ್ಕಾಗಿ ಇವಾನ್‌ ಅವರ ಗೌರವ ಸದಸ್ಯತ್ವವನ್ನು ರದ್ದುಗೊಳಿಸಿದಾಗ ವಿವಾದ ಹೊತ್ತಿಕೊಂಡಿತ್ತು.

ಗುರುವಾರ ಜೆಮಿಮಾ ರೋಡ್ರಿಗಸ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದರು. ಆಸ್ಟ್ರೇಲಿಯಾ ವಿರುದ್ಧದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಸವಾಲಿನ ಮೊತ್ತವನ್ನು ಚೇಸ್‌ ಮಾಡಿ ಅಬ್ಬರಿಸಿತು. ಈ ಮೂಲಕ ಭಾರತ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್‌ಗೆ ಅರ್ಹತೆ ಪಡೆದಿದೆ.

Story first published: Saturday, November 1, 2025, 13:20 [IST]
Other articles published on Nov 1, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+