ಜೆಮಿಮಾ ಅರ್ಧಶತಕದ ಬಲ: ಟೀಮ್ ಇಂಡಿಯಾ 198 ರನ್‌ಗೆ ಆಲೌಟ್
ಪರ್ತ್: ಭರವಸೆಯ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅವರು ಬಾರಿಸಿದ ಅರ್ಧಶತಕದ ಬಲದಿಂದ ಡೇ ಆಂಡ್ ನೈಟ್ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಮಹಿಳಾ ತಂಡ 198 ರನ್‌ಗಳಿಗೆ ಆಸ್ಟ್ರೇಲಿಯಾ ವನಿತೆಯರ ವಿರುದ್ಧ ಆಲೌಟ್ ಆಗಿದೆ.
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾದ ಆರಂಭ ಕಳಪೆಯಾಗಿತ್ತು. ಭರವಸೆಯ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ 13 ಎಸೆತಗಳಲ್ಲಿ ಕೇವಲ 4 ರನ್ ಬಾರಿಸಿ ಲೂಸಿ ಹ್ಯಾಮಿಲ್ಟನ್ ಅವರಿಗೆ ವಿಕೆಟ್ ಒಪ್ಪಿಸಿದರು. 18 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಶಫಾಲಿ ವರ್ಮಾ ಹಾಗೂ ಪ್ರತಿಕಾ ರಾವಲ್ ಜೋಡಿ ಕೊಂಚ ಆಧಾರವಾಯಿತು. ಈ ಜೋಡಿ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ 38 ರನ್ ಸೇರಿಸಿತು. ಈ ಅವಧಿಯಲ್ಲಿ ಶಫಾಲಿ 6 ಬೌಂಡರಿ ನೆರವಿನಿಂದ 35 ರನ್ ಬಾರಿಸಿ ಔಟ್ ಆದರು.

ಪ್ರತಿಕಾ ರಾವಲ್ ಸಹ ಒತ್ತಡವನ್ನು ಮೆಟ್ಟಿನಿಂತು ಬ್ಯಾಟ್ ಮಾಡಲಿಲ್ಲ. ಇವರು 3 ಬೌಂಡರಿ ನೆರವಿನಿಂದ 18 ರನ್ ಸಿಡಿಸಿದರು. ನಾಯಕಿ ಹರ್ಮನ್ ಪ್ರೀತ್ ಕೌರ್ 4 ಬೌಂಡರಿ ನೆರವಿನಿಂದ 19 ರನ್ ಬಾರಿಸಿ ಔಟ್ ಆದರು. ಆಲ್‌ರೌಂಡರ್ ದೀಪ್ತಿ ಶರ್ಮಾ (7) ಬಂದು ಹೋಗುವ ಸಂಪ್ರದಾಯವನ್ನು ಮುಗಿಸಿದರು.
ಜೆಮಿಮಾ ರೊಡ್ರಿಗಸ್ ಅರ್ಧಶತಕ
107 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ತಂಡಕ್ಕೆ ಜೆಮಿಮಾ ರೊಡ್ರಿಗಸ್ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ರಿಚಾ ಘೋಷ್ ಜೋಡಿ ಕೊಂಚ ಆಧಾರವಾಯಿತು. ಈ ಜೋಡಿ 71 ಎಸೆತಗಳ ವರೆಗೂ ವಿಕೆಟ್ ಬೀಳದಂತೆ ನೋಡಿಕೊಂಡು 43 ರನ್ ಸೇರಿಸಿತು. ಈ ವೇಳೆ 11 ರನ್ ಬಾರಿಸಿದ್ದ ರಿಚಾ ಘೋಷ್ ಇಲ್ಲದ ಹೊಡೆತಕ್ಕೆ ಮುಂದಾಗಿ ಔಟ್ ಆದರು.
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಜೆಮಿಮಾ ರೊಡ್ರಿಗಸ್ ಆರ್ಭಟಿಸಿದರು. ಇವರು 84 ಎಸೆತಗಳಲ್ಲಿ 7 ಬೌಂಡರಿ ನೆರವಿನಿಂದ 52 ರನ್ ಸಿಡಿಸಿ ಲೂಸಿ ಹ್ಯಾಮಿಲ್ಟನ್ ಅವರಿಗೆ ವಿಕೆಟ್ ಒಪ್ಪಿಸಿದರು.
9ನೇ ವಿಕೆಟ್‌ಗೆ ಕಾಶ್ವಿ ಗೌತಮ್ ಹಾಗೂ ಸಯಾಲಿ ಸತ್ಘರೆ (7) ಜೋಡಿ 38 ರನ್ ಸೇರಿಸಿ ತಂಡದ ಮೊತ್ತವನ್ನು ಹಿಗ್ಗಿಸಿತು. ಕಾಶ್ವಿ ಗೌತಮ್ 3 ಬೌಂಡರಿ ನೆರವಿನಿಂದ ಅಜೇಯ 34 ರನ್ ಸಿಡಿಸಿದರು. ಅಂತಿಮವಾಗಿ ಭಾರತ 62.4 ಓವರ್‌ಗಳಲ್ಲಿ 198 ರನ್ ಸೇರಿಸಿತು. ಆಸೀಸ್ ಪರ ಅನ್ನಾಬೆಲ್ ಸದರ್ಲ್ಯಾಂಡ್ 4, ಹ್ಯಾಮಿಲ್ಟನ್ 3 ವಿಕೆಟ್ ಕಬಳಿಸಿದ್ದಾರೆ.
ಆಸೀಸ್ ಕಳಪೆ ಆರಂಭ
ಮೊದಲ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ ಸಹ ಕಳಪೆ ಆರಂಭವನ್ನು ಕಂಡಿತು. ಆರಂಭಿಕ ಆಟಗಾರ್ತಿ ಜಾರ್ಜಿಯಾ ವೋಲ್ (2), ಫೋಬೆ ಲಿಚ್‌ಫೀಲ್ಡ್ (9) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ನಾಯಕಿ ಅಲಿಸಾ ಹೀಲಿ 1 ಬೌಂಡರಿ ನೆರವಿನಿಂದ 13 ರನ್ ಬಾರಿಸಿ ಔಟ್ ಆದರು. ಎರಡನೇ ದಿನಕ್ಕೆ ಎಲ್ಲಿಸಾ ಪೆರ್ರಿ ಅಜೇಯ 43, ಅನ್ನಾಬೆಲ್ ಸದರ್ಲ್ಯಾಂಡ್ ಅಜೇಯ 20 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆಸ್ಟ್ರೇಲಿಯಾ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 96 ರನ್ ಸೇರಿಸಿದೆ. ಇನಿಂಗ್ಸ್ ಮುನ್ನಡೆ ಸಾಧಿಸಲು ಆಸೀಸ್ ವನಿತೆಯರಿಗೆ ಇನ್ನು 102 ರನ್ ಅವಶ್ಯಕತೆ ಇದೆ. ಭಾರತದ ಪರ ಸಯಾಲಿ ಸತ್ಘರೆ 2 ಹಾಗೂ ಕ್ರಾಂತಿ ಗೌಡ 1 ವಿಕೆಟ್ ಪಡೆದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications