Jemimah Rodrigues: ಜೆಮಿಮಾ ಪಡೆಗೆ ಸೋಲಿನ ಮೇಲೆ ಮತ್ತೊಂದು ಬರೆ
ನಾಲ್ಕನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ ಅಂತಿಮ ಹಂತಕ್ಕೆ ಬಂದು ನಿಂತಿದೆ. ಐದೂ ತಂಡಗಳು ಲೀಗ್ ಹಂತದಲ್ಲಿ ಸ್ಥಿರ ಪ್ರದರ್ಶನ ನೀಡುವತ್ತ ಚಿತ್ತ ನೆಟ್ಟಿವೆ. ಎಲ್ಲ ಪಂದ್ಯಗಳು ಸಹ ಈಗ ಪ್ಲೇ ಆಫ್ ದೃಷ್ಟಿಯಿಂದ ಮಹತ್ವದಾಗಿದೆ. ಮಂಗಳವಾರ (ಜ.27) ರಂದು ಗುಜರಾತ್ ಜೈಂಟ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಣ ಜಿದ್ದಾಜಿದ್ದಿನ ಕಾದಾಟ ನಡೆಯಿತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಸೋಲು ಕಂಡಿದೆ. ಕ್ಯಾಪಿಟಲ್ಸ್ ತಂಡದ ನಾಯಕಿಗೆ ಒಂದು ಕಡೆ ಸೋಲಿನ ನೋವಾದರೆ, ಇನ್ನೊಂದೆಡೆ ದಂಡದ ಪೆಟ್ಟು ಸಹ ಬಿದ್ದಿದೆ.
ಗುಜರಾತ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ 6 ಎಸೆತಗಳಲ್ಲಿ 9 ರನ್ ಕಲೆ ಹಾಕುವಲ್ಲಿ ವಿಫಲವಾಗಿ ಸೋಲು ಕಂಡಿದೆ. ಈ ಪಂದ್ಯದಲ್ಲಿ ಗೆದ್ದ ಗುಜರಾತ್ ತಂಡದ ಪ್ಲೇ ಆಫ್ ಆಸೆ ಚಿಗುರಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಲೆಕ್ಕಾಚಾರ ಆರಂಭಿಸಿದೆ. ಡೆಲ್ಲಿ ಕ್ಯಾಪಿಟಲ್ಸ್ ಮಂಗಳವಾರ ನಡೆದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್‌ಗಳನ್ನು ಕಂಪ್ಲೀಟ್ ಮಾಡದ ಹಿನ್ನೆಲೆಯಲ್ಲಿ ದಂಡಕ್ಕೆ ತುತ್ತಾಗಿದೆ. ಪಂದ್ಯ ಮುಕ್ತಾಯದ ಬಳಿಕ ಡಬ್ಲ್ಯೂಪಿಎಲ್ ಅಧಿಕಾರಿಗಳು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಅಲ್ಲದೆ ಜೆಮಿಮಾ ರೊಡ್ರಿಗಸ್ ಅವರಿಗೆ ದಂಡವನ್ನು ವಿಧಿಸಲಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ನಾಯಕಿ ಜೆಮಿಮಾ ರೊಡ್ರಿಗಸ್‌ಗೆ ನಾಲ್ಕನೇ ಆವೃತ್ತಿಯ ಲೀಗ್‌ನಲ್ಲಿ ಮೊದಲ ಓವರ್-ರೇಟ್ ಅಪರಾಧ ಎಂದು ಎಸಗಿದ್ದು, ಅವರಿಗೆ ₹1.2 ಮಿಲಿಯನ್ ದಂಡ ವಿಧಿಸಲಾಗಿದೆ. ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೊನೆಯ ಓವರ್‌ನಲ್ಲಿ ಎಡವಿ ನಿರಾಸೆ ಅನುಭವಿಸಿದೆ.
ಡೆಲ್ಲಿ ಪ್ಲೇ ಆಫ್ ಲೆಕ್ಕಾಚಾರ
ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ಆವೃತ್ತಿಯ ಪ್ರೀಮಿಯರ್ ಲೀಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಹೊಸ ನಾಯಕಿ ಜೆಮಿಮಾ ಹಾಗೂ ಆರಂಭಿಕ ಆಟಗಾರ್ತಿಯರಾದ ಲೆಜಲ್ ಲೀ, ಶಫಾಲಿ ವರ್ಮಾ ತಂಡದ ಪರ ಆರ್ಭಟಿಸುತ್ತಿದ್ದಾರೆ. ಈ ಆಟಗಾರರು ಲೀಗ್ ಹಂತದ ಕೊನೆಯ ಪಂದ್ಯದಲ್ಲೂ ಇದೇ ಆಟವನ್ನು ಆಡುವ ಅನಿವಾರ್ಯತೆ ಇದೆ. ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಡೆಲ್ಲಿ, ಯುಪಿ ವಾರಿಯರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯ ಉಭಯ ತಂಡಗಳಿಗೂ ಮಹತ್ವದಾಗಿದೆ. ಈ ಪಂದ್ಯದಲ್ಲಿ ಡೆಲ್ಲಿ ಜಯ ಸಾಧಿಸಿದರೆ, ನೇರವಾಗಿ ಪ್ಲೇ ಆಫ್‌ಗೆ ಅರ್ಹತೆ ಪಡೆಯುತ್ತದೆ. ಡೆಲ್ಲಿ ಈ ಪಂದ್ಯದಲ್ಲಿ ಸೋತರೆ, ಗುಜರಾತ್ ಮುಂಬೈ ತಂಡವನ್ನು ಮಣಿಸಬೇಕಾಗುತ್ತದೆ. ಅಲ್ಲದೆ ಆರ್‌ಸಿಬಿ ಯುಪಿ ವಾರಿಯರ್ಸ್ ವಿರುದ್ಧ ಭಾರೀ ಅಂತರದಿಂದ ಗೆದ್ದಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಲಾಭವಾಗುತ್ತದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications