ಮಹಿಳಾ ಟಿ20 ಕ್ರಿಕೆಟ್ : ಶ್ರೀಲಂಕಾ ವಿರುದ್ಧ ಭಾರತಕ್ಕೆ 13 ರನ್ ಗೆಲುವು

ಕೊಲಂಬೋ, ಸೆಪ್ಟೆಂಬರ್ 19: ಶ್ರೀಲಂಕಾ ಪ್ರವಾಸದಲ್ಲಿರುವ ಭಾರತದ ವನಿತೆಯರು ಶ್ರೀಲಂಕಾ ವಿರುದ್ಧ ಟಿ20 ಸರಣಿಯ ಮೊದಲ ಪಂದ್ಯದಲ್ಲಿ 13 ರನ್ ಜಯ ಸಾಧಿಸಿದ್ದಾರೆ. ಜೆಮಿಮಾ ರೊಡ್ರಿಗಸ್ ಅವರ ಬ್ಯಾಟಿಂಗ್ ಮತ್ತು ಪೂನಂ ಯಾದವ್ ಅವರ ಬೌಲಿಂಗ್ ನೆರವಿನಿಂದ ಭಾರತ ಗೆಲುವು ತನ್ನದಾಗಿಸಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ ಭಾರತದ ವನಿತೆಯರು 20 ಓವರ್ ಮುಕ್ತಾಯಕ್ಕೆ 8 ವಿಕೆಟ್ ಕಳೆದು 168 ರನ್ ಪೇರಿಸಿದ್ದರು. ರೋಡ್ರಿಗನ್ 36 (15), ತಾನಿಯಾ ಭಾಟಿಯಾ 46 (35), ಅಂಜು ಪಾಟಿಲ್ 36 (29), ವೇದಾ ಕೃಷ್ಣಮೂರ್ತಿ 21 (15) ರನ್ ಮೂಲಕ ತಂಡಕ್ಕೆ ರನ್ ಬಲ ತುಂಬಿದರು.
ಚೇಸಿಂಗ್ ಗೆ ಇಳಿದ ಶ್ರೀಲಂಕಾ ವನಿತೆಯರಲ್ಲಿ ಯಶೋದಾ ಮೆಂಡಿಸ್ 32 (12), ನಾಯಕಿ ಚಾಮರಿ ಅಟಾಪಟ್ಟು 27 (22), ಎಶನಿ ಲೋಕುಸರ್ಯಾಜ್ 45 (31) ಪೇರಿಸಿ ತಂಡವನ್ನು ಗೆಲುವಿನ ದಡಕ್ಕೆ ತರಲು ಯತ್ನಿಸಿದರಾದರೂ ಶ್ರೀಲಂಕಾ 19.3 ಓವರ್ ಗೆ ಎಲ್ಲಾ ವಿಕೆಟ್ ಕಳೆದು 155 ರನ್ ಪೇರಿಸಿ 13 ರನ್ ಗಳಿಂದ ಶರಣಾಯಿತು.
ಶ್ರೀಲಂಕಾ ಇನ್ನಿಂಗ್ಸ್ ವೇಳೆ ಭಾರತದ ಪೂನಂ ಯಾದವ್ ಭರ್ಜರಿ ಬೌಲಿಂಗ್ ಪ್ರದರ್ಶಿಸಿದರು. 26 ರನ್ನಿಗೆ 4 ವಿಕೆಟ್ ಉರುಳಿಸಿ ಪೂನಂ ಎದುರರಾಳಿಯನ್ನು ಕಾಡಿದರು. ಅಲ್ಲದೆ ಅಂತಾರಾಷ್ಟ್ರೀಯ ಪಂದ್ಯವೊಂದರ ಒಂದೇ ಓವರ್ ನಲ್ಲಿ ಮೂರು ಸಿಕ್ಸರ್ ಬಾರಿಸಿದ ಭಾರತ ಮೊದಲ ಮಹಿಳಾ ಕ್ರಿಕೆಟರ್ ಹೆಗ್ಗಳಿಕೆಗೆ ಜೆಮಿಮಾ ಪಾತ್ರರಾಗಿದ್ದಾರೆ. ಈ ಗೆಲುವಿನೊಂದಿಗೆ ಐದು ಪಂದ್ಯಗಳ ಈ ಟಿ20 ಸರಣಿಯಲ್ಲಿ ಭಾರತ 1-0ಯ ಮುನ್ನಡೆಯಲ್ಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications