For Quick Alerts
ALLOW NOTIFICATIONS  
For Daily Alerts
 

Jemimah Rodrigues: ಆಸ್ಟ್ರೇಲಿಯಾ ವಿರುದ್ಧ ಸ್ಮರಣೀಯ ಇನಿಂಗ್ಸ್‌ ಕಟ್ಟಿದ ಜೆಮಿಮಾ

ಭಾರತದ ಸ್ಟಾರ್‌ ಆಟಗಾರ್ತಿ ಜೆಮಿಮಾ ರೋಡ್ರಿಗಸ್‌ ಮಹತ್ವದ ಪಂದ್ಯದಲ್ಲಿ ಒತ್ತಡವನ್ನು ಮೆಟ್ಟಿ ನಿಂತಿದ್ದಾರೆ. ತಮ್ಮ ತವರು ಅಂಗಳ ನವಿ ಮುಂಬೈನಲ್ಲಿ ನಡೆಯುತ್ತಿರುವ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಜೆಮಿಮಾ ಅಮೋಘ ಬ್ಯಾಟಿಂಗ್ ನಡೆಸಿ ತಂಡಕ್ಕೆ ಆಧಾರವಾದರು. ತಮ್ಮ ನೈಜ್ಯ ಆಟವನ್ನು ಆಡಿದ ಜೆಮಿಮಾ ಆಸೀಸ್‌ ಬೌಲರ್‌ಗಳನ್ನು ಕಾಡಿದರು. ತಮ್ಮ ವೃತ್ತಿ ಜೀವನದ ಸ್ಮರಣೀಯ ಇನಿಂಗ್ಸ್‌ ಆಡಿದ ಜೆಮಿಮಾ ಅಭಿಮಾನಿಗಳಿಗೆ ಹಬ್ಬದೂಟವನ್ನು ಬಡಿಸಿದರು.

ಭಾರತ ಸವಾಲಿನ ಮೊತ್ತ ಹಿಂಬಾಲಿಸಿದಾಗ ಶೆಫಾಲಿ ವರ್ಮಾ ಬೇಗನೆ ಪೆವಿಲಿಯನ್‌ಗೆ ಸೇರಿದಾಗ ಬ್ಯಾಟಿಂಗ್‌ನಲ್ಲಿ ಬಡ್ತಿ ಪಡೆದ ಜೆಮಿಮಾ ರೋಡ್ರಿಗಸ್ ಕ್ಲಾಸ್ ಆಟ ಆಡಿದರು. ತಂಡ ತಮ್ಮ ಮೇಲೆ ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಬ್ಯಾಟ್ ಮಾಡಿದ ಜೆಮಿಮಾ ಆರ್ಭಟಿಸಿದರು. ಜೆಮಿಮಾ ತಮ್ಮ ವೃತ್ತಿ ಜೀವನದ 58ನೇ ಏಕದಿನ ಪಂದ್ಯ ಅವಿಸ್ಮರಣೀಯವಾಗಿಸಿದರು. ಇವರು ಏಕದಿನ ಕ್ರಿಕೆಟ್‌ನಲ್ಲಿ ಮೂರನೇ ಶತಕವನ್ನು ಬಾರಿಸಿದರು. ಜೆಮಿಮಾ ಪ್ರಸಕ್ತ ವರ್ಷದಲ್ಲಿ ಮೂರನೇ ಶತಕವನ್ನು ಬಾರಿಸಿ ಆರ್ಭಟಿಸಿದರು. ಈ ಮೂಲಕ ಸೆಮಿಫೈನಲ್‌ ಪಂದ್ಯದಲ್ಲಿ ಶತಕ ಬಾರಿಸಿದ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು.

Jemimah Rodrigues Slams Third ODI Century of the Year in Semifinal Thriller against Australia

ಜೆಮಿಮಾ ರೋಡ್ರಿಗಸ್‌ ಅವರಿಗೆ ಸ್ಥಾನ ನೀಡಬೇಕೋ ಬೇಡವೋ ಎಂಬ ಪ್ರಶ್ನೆಗಳೇ ಉದ್ಭವಿಸಿದ್ದವು. ಆದರೆ ಜೆಮಿಮಾ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಭರವಸೆ ಮೂಡಿಸಿ ಸ್ಥಾನವನ್ನು ಉಳಿಸಿಕೊಂಡರು. ನ್ಯೂಜಿಲೆಂಡ್ ವಿರುದ್ಧ ಆಡಿದ ಧಾಟಿಯಲ್ಲಿ ಬ್ಯಾಟ್ ಮಾಡಿ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡರು. ಜೆಮಿಮಾ ಪಂದ್ಯದಲ್ಲಿ ಯಾವುದೇ ರಿಸ್ಕ್ ಶಾಟ್‌ಗಳನ್ನು ಆಡದೆ ಗ್ರೌಂಡ್‌ ಶಾಟ್‌ಗಳನ್ನು ಪ್ರಯೋಗಿಸಿಯೇ ರನ್‌ ಕಲೆ ಹಾಕಿ ಗೆಲುವಿನಲ್ಲಿ ಮಿಂಚಿದರು. ಜೆಮಿಮಾ 134 ಎಸೆತಗಳಲ್ಲಿ 14 ಬೌಂಡರಿ ನೆರವಿನಿಂದ ಅಜೇಯ 127 ರನ್‌ ಬಾರಿಸಿ ಮಿಂಚಿದು. ಇವರ ಅಮೋಘ ಬ್ಯಾಟಿಂಗ್ ಪ್ರದರ್ಶನಕ್ಕೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಲಭಿಸಿತು.

Story first published: Thursday, October 30, 2025, 22:17 [IST]
Other articles published on Oct 30, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+