Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

IND vs SA: ಜೆಮಿಮಾ ರೋಡಿಗ್ರಸ್‌ ಬಿರುಗಾಳಿ ಬ್ಯಾಟಿಂಗ್‌ ದಾಖಲೆಯ ಪುಟಕ್ಕೆ ಎಂಟ್ರಿ

ಭಾರತ ಮಹಿಳಾ ತಂಡ ಪ್ರಸ್ತುತ ಶ್ರೀಲಂಕಾ ಪ್ರವಾಸದಲ್ಲಿದೆ. ಈ ವೇಳೆ ತ್ರಿಕೋನ ಸರಣಿಯಲ್ಲಿ ಭಾರತ ತಂಡ ಆಡುತ್ತಿದೆ. ಬುಧವಾರದಂದು ಭಾರತ, ದಕ್ಷಿಣ ಆಫ್ರಿಕಾ ವಿರುದ್ಧ ಕಾದಾ ನಡೆಸಿತು. ಈ ಪಂದ್ಯದಲ್ಲಿ ಭಾರತದ ಮಧ್ಯಮ ಕ್ರಮಾಂಕದ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿ ಇತಿಹಾಸ ಬರೆದರು. ದಕ್ಷಿಣ ಆಫ್ರಿಕಾ ವಿರುದ್ಧ ಬಿರುಗಾಳಿಯ ಶತಕ ಸಿಡಿಸಿದ ಇವರು ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

ಭಾರತದ ಪರ ಮೂರನೇ ವೇಗದ ಶತಕ ಬಾರಿಸಿದ ಹಿರಿಮೆಯನ್ನು ಜೆಮಿಮಾ ರೊಡ್ರಿಗಸ್ ತಮ್ಮದಾಗಿಸಿಕೊಂಡರು. ಜೇಮಿಮಾ ರೋಡ್ರಿಗಸ್‌ 101 ಎಸೆತಗಳಲ್ಲಿ 15 ಬೌಂಡರಿ, 1 ಸಿಕ್ಸರ್ ಸಹಾಯದಿಂದ 123 ರನ್‌ ಸಿಡಿಸಿದರು. ಇವರ ಅಮೋಘ ಆಟದ ನೆರವಿನಿಂದ ಭಾರತ 50 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 337 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

Jemimah Rodrigues Smashes Record-Breaking Century as India Posts Massive Total Against South Africa

ಭಾರತದ ಪರ ಅತಿ ವೇಗದ ಶತಕ ಬಾರಿಸಿದ ದಾಖಲೆ ಸ್ಮೃತಿ ಮಂಧನಾ ಹೆಸರಿನಲ್ಲಿದೆ. ಇವರು 2025ರಲ್ಲಿ ಐರ್ಲೆಂಡ್‌ ವಿರುದ್ಧ ನಡೆದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ಇವರು 70 ಎಸೆತಗಳಲ್ಲಿ ಮೂರಂಕಿ ಮುಟ್ಟಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದರು. ಇನ್ನು ಭಾರತದ ಪರ ಎರಡನೇ ವೇಗದ ಶತಕ ಬಾರಿಸಿದ ದಾಖಲೆ ನಾಯಕಿ ಹರ್ಮನ್ ಪ್ರೀತ್ ಕೌರ್‌ ಅವರದ್ದಾಗಿದೆ. ಇವರು 2024ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ 87 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಬುಧವಾರದ ಪಂದ್ಯದಲ್ಲಿ ಜೆಮಿಮಾ 89 ಎಸೆತಗಳಲ್ಲಿ ಶತಕ ಬಾರಿಸಿ ಅಬ್ಬರಿಸಿದರು. ಈ ಮೂಲಕ ಭಾರತದ ಪರ ವೇಗದ ಶತಕ ದಾಖಲಿಸಿದ ಮೂರನೇ ಮಹಿಳಾ ಬ್ಯಾಟರ್‌ ಎಂಬ ಹಿರಿಮೆಗೆ ಪಾತ್ರರಾದರು.

ಜೆಮಿಮಾ ದಾಖಲೆ

ಜೇಮಿಮಾ ಭಾರತದ ಪರ ಮತ್ತೊಂದು ದಾಖಲೆ ನಿರ್ಮಿಸಿದರು. ಇವರು ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬಿಗ್ ಇನಿಂಗ್ಸ್‌ ಕಟ್ಟಿದ ಎರಡನೇ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾದರು. ದಕ್ಷಿಣ ಆಫ್ರಿಕಾ ವಿರುದ್ಧ ಅತಿ ದೊಡ್ಡ ಇನಿಂಗ್ಸ್‌ ಕಟ್ಟಿದ ಹೆಗ್ಗಳಿಕೆ ಸ್ಮೃತಿ ಮಂಧನಾ ಅವರದ್ದಾಗಿದೆ. ಇವರು ಕಿಂಬರ್ಲಿಯಲ್ಲಿ 136 ರನ್ ಬಾರಿಸಿದ್ದರು.

ಇದೇ ಪಂದ್ಯದಲ್ಲಿ ಸ್ಟಾರ್ ಆಲ್‌ರೌಂಡರ್ ದೀಪ್ತಿ ಶರ್ಮಾ ಸಹ ಅಮೋಘ ಪ್ರದರ್ಶನ ನೀಡಿದ್ದರು. ಇವರು 84 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಾಯದಿಂದ 93 ರನ್‌ ಸಿಡಿಸಿ ಶತಕವಂಚಿತರಾದರು. ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಸಹ ಈ ಪಂದ್ಯದಲ್ಲಿ ಅಮೋಘ ಇನಿಂಗ್ಸ್‌ ಕಟ್ಟಿ ಅರ್ಧಶತಕ ಬಾರಿಸಿದರು.

ಪಂದ್ಯದ ಫಲಿತಾಂಶ

ಗುರಿಯನ್ನು ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಪರ ಅನ್ನೆರಿ ಡೆರ್ಕ್ಸೆನ್ (81), ಕ್ಲೋಯ್ ಟ್ರಯಾನ್ (67), ಮಾತ್ರ ಕೊಂಚ ತಂಡಕ್ಕೆ ಆಧಾರವಾದರು. ಉಳಿದ ಆಟಗಾರ್ತಿಯರು ರನ್‌ ಕಲೆ ಹಾಕುವಲ್ಲಿ ವಿಫಲರಾದರು. ದಕ್ಷಿಣ ಆಫ್ರಿಕಾ 50 ಓವರ್‌ಗಳಲ್ಲಿ 7 ವಿಕೆಟ್‌ಗೆ 314 ರನ್‌ ಸೇರಿಸಿ ಸೋಲು ಕಂಡಿತು. ಭಾರತದ ಪರ ಅಮನ್‌ಜೋತ್‌ ಕೌರ್‌ 3, ದೀಪ್ತಿ ಶರ್ಮಾ 2 ವಿಕೆಟ್‌ ಪಡೆದರು.

Story first published: Wednesday, May 7, 2025, 18:00 [IST]
Other articles published on May 7, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+