INDW vs SLW: ಭಾರತಕ್ಕೆ 8 ವಿಕೆಟ್ ಜಯ
ವಿಶಾಖಪಟ್ಟಣಂ: ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಬಾರಿಸಿದ ಅಜೇಯ ಅರ್ಧಶತಕದ ಬಲದಿಂದ ಟೀಮ್ ಇಂಡಿಯಾ ಮಹಿಳಾ ತಂಡ 8 ವಿಕೆಟ್ ಗಳಿಂದ ಶ್ರೀಲಂಕಾ ವನಿತೆಯರ ತಂಡವನ್ನು ಮಣಿಸಿ, 5 ಪಂದ್ಯಗಳ ಟಿ20 ಸರಣಿಯಲ್ಲಿ ಆತಿಥೇಯ ತಂಡ 1-0 ಮುನ್ನಡೆ ಸಾಧಿಸಿದೆ.
122 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡದ ಆರಂಭ ಕಳಪೆಯಾಗಿತ್ತು. ಶೆಫಾಲಿ ವರ್ಮಾ (9) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. 13 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಕ್ಕೆ ಸ್ಮೃತಿ ಮಂಧಾನ ಹಾಗೂ ಜೆಮಿಮಾ ರೋಡ್ರಿಗಾಸ ಜೋಡಿ 42 ಎಸೆತಗಳಲ್ಲಿ 54 ರನ್ ಸೇರಿಸಿತು. ಸ್ಮೃತಿ 25 ಎಸೆತಗಳಲ್ಲಿ 4 ಬೌಂಡರಿ ನೆರವಿನಿಂದ 25 ರನ್ ಸಿಡಿಸಿದರು.

ಭರವಸೆಯ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಅಜೇಯ 69 ರನ್ ಬಾರಿಸಿ ಮಿಂಚಿದರು. ಇವರ ಈ ಅಮೋಘ ಇನಿಂಗ್ಸ್‌ನಲ್ಲಿ 10 ಬೌಂಡರಿ ಸೇರಿವೆ. ಇನ್ನು ನಾಯಕಿ ಹರ್ಮನ್ ಪ್ರೀತ್ ಕೌರ್ 15 ರನ್ ಬಾರಿಸಿದರು. ಅಂತಿಮವಾಗಿ ಭಾರತ 14.4 ಓವರ್‌ಗಳಲ್ಲಿ 2 ವಿಕೆಟ್‌ಗೆ 122 ರನ್ ಸೇರಿಸಿ ಜಯ ಸಾಧಿಸಿತು.
ಸಾಧಾರಣ ಮೊತ್ತ ಕಲೆ ಹಾಕಿದ ಶ್ರೀಲಂಕಾ
ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ಮಹಿಳಾ ತಂಡದ ಆರಂಭ ಕಳಪೆಯಾಗಿತ್ತು. ನಾಯಕಿ ಚಮರಿ ಅಟ್ಟಪಟ್ಟು (15) ದೊಡ್ಡ ಇನಿಂಗ್ಸ್ ಆಡುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ವಿಶ್ಮಿ ಗುಣರತ್ನೆ ಮತ್ತು ಹಾಸಿನಿ ಪೆರೇರಾ ಜೋಡಿ ಕೊಂಚ ತಂಡಕ್ಕೆ ಆಧಾರವಾಯಿತು. ಈ ಜೋಡಿ 38 ಎಸೆತಗಳಲ್ಲಿ 31 ರನ್ ಸೇರಿಸಿತು. ಈ ವೇಳೆ ಹಾಸಿನಿ ಪೆರೇರಾ 2 ಬೌಂಡರಿ ಸಹಾಯದಿಂದ 20 ರನ್ ಸೇರಿಸಿದರು. 4ನೇ ವಿಕೆಟ್‌ಗೆ ವಿಶ್ಮಿ ಗುಣರತ್ನೆ ಮತ್ತು ಹರ್ಷಿತಾ ಸಮರವಿಕ್ರಮ (21) ಜೋಡಿ ಸಹ ತಂಡಕ್ಕೆ ಕೊಂಚ ಆಧಾರವಾಯಿತು. ಈ ಜೋಡಿ 38 ಎಸೆತಗಳಲ್ಲಿ 38 ರನ್ ಸೇರಿಸಿತು. ಆರಂಭಿಕ ಆಟಗಾರ್ತಿ ವಿಶ್ಮಿ ಗುಣರತ್ನೆ 43 ಎಸೆತಗಳಲ್ಲಿ 1 ಬೌಂಡರಿ, 1 ಸಿಕ್ಸರ್ ಸಹಾಯದಿಂದ 39 ರನ್ ಸೇರಿಸಿ ತಂಡಕ್ಕೆ ಆಧಾರವಾಯಿತು. ಉಳಿದ ಬ್ಯಾಟರ್‌ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಅಂತಿಮವಾಗಿ ಶ್ರೀಲಂಕಾ 20 ಓವರ್‌ಗೆ 6 ವಿಕೆಟ್‌ಗೆ 121 ರನ್ ಸೇರಿಸಿತು.
ಭಾರತದ ಪರ ಕ್ರಾಂತಿ ಗೌಡ, ದೀಪ್ತಿ ಶರ್ಮಾ, ಶ್ರೀ ಚರಣಿ ತಲಾ ಒಂದು ವಿಕೆಟ್ ಪಡೆದರು. ಉಳಿದಂತೆ ಭಾರತ ತಂಡ ಮೂರು ರನ್‌ಔಟ್ ಮಾಡಿ ಬೀಗಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications