Jharkhand Assembly Election: ರಾಂಚಿಯಲ್ಲಿ ಮತದಾನ ಮಾಡಿದ ಎಂಎಸ್ ಧೋನಿ ದಂಪತಿ
ಜಾರ್ಖಂಡ್‌ನಲ್ಲಿ 41 ವಿಧಾನಸಭಾ ಕ್ಷೇತ್ರಗಳಿಗೆ ಇಂದು ಮೊದಲ ಹಂತದಲ್ಲಿ ಮತದಾನ ನಡೆದಿದೆ. ಇಲ್ಲಿನ ಮತದಾರರು ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. ಸಣ್ಣ ರಾಜ್ಯಗಳಲ್ಲಿ ಒಂದಾದ ಜಾರ್ಖಂಡ್‌ನಲ್ಲಿ ಈ ಬಾರಿ ಭರ್ಜರಿ ಚುನಾವಣೆ ನಡೆದಿದೆ. ಅಲ್ಲದೇ ಹಲವು ಕಾರಣಗಳಿಗೆ ಈ ಬಾರಿಯ ಜಾರ್ಖಂಡ್ ಚುನಾವಣೆ ಮಹತ್ವ ಪಡೆದುಕೊಂಡಿದೆ. ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಮ್ಮ ಪತ್ನಿ ಜೊತೆಗೆ ಆಗಮಿಸಿ ಮತದಾನ ಮಾಡಿದ್ದಾರೆ. ಎಂಎಸ್ ಧೋನಿ ರಾಂಚಿಯ ಮತಗಟ್ಟೆಗೆ ಆಗಮಿಸಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡುತ್ತಿವೆ.
ವಿಡಿಯೋದಲ್ಲಿ ಎಂಎಸ್ ಧೋನಿ ತನ್ನ ಪತ್ನಿ ಸಾಕ್ಷಿ ಅವರೊಂದಿಗೆ ರಾಂಚಿಯ ಮತಗಟ್ಟೆ ಬಳಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ತಮ್ಮ ನೆಚ್ಚಿನ ಕ್ರಿಕೆಟಿಗನನ್ನು ನೋಡಲು ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಜೊತೆಗೆ ವರದಿಗಾರರು, ಭದ್ರತಾ ಸಿಬ್ಬಂದಿ ಮತ್ತು ಪೋಲೀಸರು ಗುಂಪಿನಲ್ಲಿ ಸಿಲುಕಿಕೊಂಡು ಪರದಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಜಾರ್ಖಂಡ್ ಹೈಕೋರ್ಟ್ ನೋಟಿಸ್
ಧೋನಿ ಇತ್ತೀಚೆಗೆ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಹೀಗಾಗಿ ಧೋನಿ ಅವರ ವ್ಯಾಪಾರ ಪಾಲುದಾರರಾದ ಮಿಹಿರ್ ದಿವಾಕರ್ ಮತ್ತು ಸೌಮ್ಯ ದಾಸ್ ಅವರು ಸಲ್ಲಿಸಿರುವ ಪ್ರಕರಣದಲ್ಲಿ ಸಂಬಂಧ ಜಾರ್ಖಂಡ್ ಹೈಕೋರ್ಟ್‌ಗೆ ಹಾಜರಾಗುವಂತೆ ನೋಟಿಸ್ ನೀಡಿದೆ.
ಆರ್ಕಾ ಸ್ಪೋರ್ಟ್ಸ್ ಅಂಡ್ ಮ್ಯಾನೇಜ್‌ಮೆಂಟ್ ಲಿಮಿಟೆಡ್‌ನ ಮಾಲೀಕರಾದ ದಿವಾಕರ್ ಮತ್ತು ದಾಸ್ ಅವರಿಗೆ ಜಾರ್ಖಂಡ್ ಹೈಕೋರ್ಟ್ ನೋಟಿಸ್ ಕಳುಹಿಸಿದ್ದು, ಅವರ ಹೆಸರಿನಲ್ಲಿ ಅಕಾಡೆಮಿ ತೆರೆಯಲು ಒಪ್ಪಂದ ಮಾಡಿಕೊಂಡಿದೆ. ರಾಂಚಿಯಲ್ಲಿ ದಿವಾಕರ್ ಮತ್ತು ದಾಸ್ ವಿರುದ್ಧ ಧೋನಿ ವಂಚನೆ ಆರೋಪದ ಮೇಲೆ ಕ್ರಿಮಿನಲ್ ದೂರು ದಾಖಲಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಧೋನಿ ಆರೋಪದ ಹೊರತಾಗಿಯೂ ಇವರಿಬ್ಬರು ಅವರ ಹೆಸರಿನಲ್ಲಿ ಅಕಾಡೆಮಿ ತೆರೆದು 15 ಕೋಟಿ ರೂಪಾಯಿ ಆರ್ಥಿಕ ನಷ್ಟ ಅನುಭವಿಸಿದ್ದಾರೆ.
ಧೋನಿ ದೂರಿಗೆ ಪ್ರತಿಕ್ರಿಯೆಯಾಗಿ, ದಿವಾಕರ್ ಮತ್ತು ದಾಸ್ ತಮ್ಮ ವಿರುದ್ಧದ ಕ್ರಿಮಿನಲ್ ದೂರನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಈಗ ಧೋನಿಗೆ ಸಮನ್ಸ್ ನೀಡಿದ್ದು, ಈ ಪ್ರಕರಣ ಸಂಬಂಧದ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸುವಂತೆ ಹೈಕೋರ್ಟ್ ಕೇಳಿದೆ.
ಐಪಿಎಲ್ 2025ರಲ್ಲಿ ಧೋನಿ
ಎಂಎಸ್ ಧೋನಿ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2025 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ. 5 ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮೆಗಾ ಹರಾಜಿನ ಮೊದಲು ಅವರನ್ನು ಅನ್‌ಕ್ಯಾಪ್ಡ್ ಆಟಗಾರನಾಗಿ ಉಳಿಸಿಕೊಂಡಿದೆ. ಧೋನಿ ಹಳದಿ ಜೆರ್ಸಿಯಲ್ಲಿ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications