ವಿಶ್ವದಾಖಲೆ ನಿರ್ಮಿಸಿದ ವೇಗಿ ಜೂಲಾನ್ ಗೋಸ್ವಾಮಿ

ಬೆಂಗಳೂರು, ಫೆಬ್ರವರಿ 07: ಭಾರತದ ಮಹಿಳಾ ತಂಡದ ವೇಗಿ ಜೂಲಾನ್ ಗೋಸ್ವಾಮಿ ಅವರು ದಕ್ಷಿಣ ಅಫ್ರಿಕಾ ವಿರುದ್ಧದ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದರು. ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 200 ವಿಕೆಟ್ ಗಳಿಸಿದ ಪ್ರಥಮ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು.
ಕಿಂಬರ್ಲಿಯಲ್ಲಿ ಡೈಮಂಡ್ ಓವಲ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ನಡೆದಿರುವ ಎರಡನೇ ಏಕದಿನ ಪಂದ್ಯದಲ್ಲಿ 35 ವರ್ಷ ವಯಸ್ಸಿನ ಜೂಲಾನ್ ಗೋಸ್ವಾಮಿ ಅವರು ಮೊದಲ ವಿಕೆಟ್ ಪಡೆಯುತ್ತಿದ್ದಂತೆ ಈ ಸಾಧನೆ ಮಾಡಿದರು.
ಗೋಸ್ವಾಮಿ ಅವರು 166ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದಾರೆ. 10 ಟೆಸ್ಟ್ ಪಂದ್ಯಗಳಿಂದ 40 ವಿಕೆಟ್ ಹಾಗೂ 60 ಟಿ20ಐ ಪಂದ್ಯಗಳಿಂದ 50 ವಿಕೆಟ್ ಕೂಡಾ ಗಳಿಸಿದ್ದಾರೆ.
ಇದಕ್ಕೂ ಮುನ್ನ ಸ್ಮೃತಿ ಮಂದಾನ ಅವರು ಭರ್ಜರಿ ಶತಕ(135 ರನ್) ಬಾರಿಸಿ ಭಾರತದ ಸ್ಕೋರ್ 302/3ಕ್ಕೇರುವಂತೆ ಮಾಡಿದರು. ಫೆಬ್ರವರಿ 05ರಂದು ನಡೆದ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ 88ರನ್ ಗಳ ಅಮೋಘ ಜಯ ದಾಖಲಿಸಿದೆ.
Story first published: Wednesday, February 7, 2018, 19:18 [IST]
Other articles published on Feb 7, 2018
Read in English: 200 ODI wickets for Jhulan GoswamSeniori
Log in for Better Reading Experience!
By signing in, you agree to our Terms and Privacy Policy
Gender
Select your Gender
- Male
- Female
- Others
Age
Select your Age Range
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications