ಏಕದಿನ ಕ್ರಿಕೆಟ್ ನಲ್ಲಿ ವಿಶ್ವ ದಾಖಲೆ ನಿರ್ಮಿಸಿದ ಜೂಲನ್ ಗೋಸ್ವಾಮಿ
ನವದೆಹಲಿ, ಮೇ 10 : ಭಾರತ ವನಿತೆಯರ ಕ್ರಿಕೆಟ್ ತಂಡದ ಮಧ್ಯಮ ವೇಗಿ ಜೂಲನ್ ಗೋಸ್ವಾಮಿ ಅವರು ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.
ಮಂಗಳವಾರ ಇಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ದದ ಪಂದ್ಯದಲ್ಲಿ ಅವರು ಮೂರು ವಿಕೆಟ್‌ಗಳನ್ನು ಕಬಳಿಸಿದೊಂದಿಗೆ ಒಟ್ಟು 181 ವಿಕೆಟ್ ಸಂಪಾದಿಸಿ ಅಂತಾರಾಷ್ಟ್ರೀಯ ಏಕದಿನ ಮಹಿಳಾ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವಿಶ್ವದಾಖಲೆ ನಿರ್ಮಿಸಿದರು.

10 ವರ್ಷಗಳ ಹಿಂದೆ ಆಸ್ಟ್ರೇಲಿಯಾದ ಆಟಗಾರ್ತಿ ಕ್ಯಾಥರಿನ್ ಫಿಟ್ ಪ್ಯಾಟ್ರಿಕ್ ಅವರು 103 ಪಂದ್ಯಗಳಲ್ಲಿ 180 ವಿಕೆಟ್‌ಗಳನ್ನು ಗಳಿಸಿದ್ದ ದಾಖಲೆಯನ್ನು ಜೂಲನ್ ಅಳಿಸಿ ಹಾಕಿದರು.
34 ವರ್ಷದ ಜೂಲನ್ ಗೋಸ್ವಾಮಿ 2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2007ರಲ್ಲಿ ಐಸಿಸಿ ಶ್ರೇಷ್ಠ ಮಹಿಳಾ ಕ್ರಿಕೆಟ್ ಆಟಗಾರ್ತಿ ಗೌರವ ಗಳಿಸಿದ್ದರು.
ಕೆಲವು ವರ್ಷಗಳವರೆಗೆ ಭಾರತ ತಂಡದ ನಾಯಕತ್ವವನ್ನೂ ವಹಿಸಿದ್ದರು. 10 ಟೆಸ್ಟ್‌ಗಳನ್ನೂ ಆಡಿದ್ದು 40 ವಿಕೆಟ್ ಗಳಿಸಿದ್ದರೆ 60 ಟಿ-20 ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications