ಕ್ರಿಕೆಟ್: ಅಂತಾರಾಷ್ಟ್ರೀಯ ಟಿ20ಗೆ ಜೂಲನ್ ಗೋಸ್ವಾಮಿ ವಿದಾಯ

ನವದೆಹಲಿ, ಆಗಸ್ಟ್ 23: ಭಾರತದ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಗುರುವಾರ ಆಗಸ್ಟ್ 23ರಂದು ಬಿಸಿಸಿಐ ಪತ್ರಿಕಾ ಪ್ರಕಟನೆಯಲ್ಲಿ ಈ ವಿಚಾರವನ್ನು ತಿಳಿಸಿದೆ.
ಟಿ20 ವೃತ್ತಿ ಬದುಕಿನಲ್ಲಿ ಒಟ್ಟು 68 ಪಂದ್ಯಗಳನ್ನಾಡಿರುವ 35ರ ಹರೆಯದ ಜೂಲನ್ ಅವರು 21.94 ಸರಾಸರಿಯಲ್ಲಿ, 5.45 ಎಕಾನಮಿಯಲ್ಲಿ 56 ವಿಕೆಟ್ ಪಡೆದ ಸಾಧನೆ ಹೊಂದಿದ್ದಾರೆ. ಗೋಸ್ವಾಮಿ ಅವರು ವಿಶಾಖಪಟ್ಟಣದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟಿ20 ಪಂದ್ಯದಲ್ಲಿ ಕೇವಲ 11 ರನ್ನಿಗೆ 5 ವಿಕೆಟ್ ಉರುಳಿಸಿದ್ದರು. ಇದು ಇವರ ವೃತ್ತಿ ಜೀವನದ ಶ್ರೇಷ್ಠ ಸಾಧನೆ.
2006ರ ಆಗಸ್ಟ್ ನಲ್ಲಿ ಡರ್ಬಿಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಜೂಲನ್ ಟಿ20ಗೆ ಪಾದಾರ್ಪಣೆ ಮಾಡಿದ್ದರು. ಟಿ20 ಮಾದರಿಯಲ್ಲಿ ಅತೀಹೆಚ್ಚು ಬಾರಿ ಕ್ಯಾಪ್ ಪಡೆದ (ಸಾಧನೆ ತೋರಿದ) ಭಾರತದ ಮೂರನೇ ಸಾಧಕಿ ಹೆಗ್ಗಳಿಕೆಗೂ ಜೂಲನ್ ಪಾತ್ರರಾಗಿದ್ದಾರೆ.
ಕಳೆದ ಜೂನ್ ನಲ್ಲಿ ಏಷ್ಯಾಕಪ್ ಟಿ20 ಫೈನಲ್ ನಲ್ಲಿ ಮುಖಾಮುಖಿಯಾಗಿದ್ದ ಭಾರತ-ಬಾಂಗ್ಲಾದೇಶ ನಡುವಿನ ಪಂದ್ಯದಲ್ಲಿ ಕಡೆಯಸಾರಿ ಜೂಲನ್ ಟಿ20 ಪಂದ್ಯವನ್ನಾಡಿದ್ದರು. ಇದರಲ್ಲಿ ಭಾರತ ಮೂರು ವಿಕೆಟ್ ಸೋಲನುಭವಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications