ಜೂಲನ್ ಗೋಸ್ವಾಮಿಗೆ ಸಿಎಸ್‌ಜೆಎಸ್ 2018ರ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ

ನವದೆಹಲಿ, ಏಪ್ರಿಲ್ 24: ಮಹಿಳೆಯರ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವಿಶ್ವದಲ್ಲೇ ಅತ್ಯಧಿಕ ವಿಕೆಟ್ ದಾಖಲೆ ಹೊಂದಿರುವ ಭಾರತದ ವೇಗಿ ಜೂಲನ್ ಗೋಸ್ವಾಮಿಗೆ ಕಲ್ಕತ್ತಾ ಸ್ಪೋರ್ಟ್ಸ್ ಜರ್ನಲಿಸ್ಟ್ ಕ್ಲಬ್ (ಸಿಎಸ್‌ಜೆಎಸ್) ನಿಂದ 2018ರ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಲಭಿಸಿದೆ.
ಸಿಎಸ್‌ಜೆಎಸ್‌ಯು ಬೆಂಗಾಲ್‌ನ ರಣಜಿ ಟ್ರೋಫಿ ವಿಜೇತ ನಾಯಕ ರಾಷ್ಟ್ರೀಯ ಆಯ್ಕೆ ಸಮಿತಿಯ ಮಾಜಿ ಸದಸ್ಯ ಸಂಬರನ್ ಬ್ಯಾನರ್ಜಿ ಮತ್ತು ಮಾಜಿ ಫುಲ್ಬಾಲ್ ಆಟಗಾರ ಸುಕುಮಾರ್ ಸಮಾಜ್‌ಪತಿ ಅವರಿಗೆ 'ಜೀವಮಾನದ ಸಾಧನೆ' ಪ್ರಶಸ್ತಿ ನೀಡಿ ಗೌರವಿಸಿದೆ.
ವಿವಿಧ ಪ್ರಶಸ್ತಿಗಳು
ಅತ್ಯುತ್ತಮ ಕ್ರೀಡಾಪಟು: ಜೂಲನ್ ಗೋಸ್ವಾಮಿ; ಜೀವಮಾನದ ಸಾಧನೆ ಪ್ರಶಸ್ತಿಗಳು: ಸಂಬರನ್ ಬ್ಯಾನರ್ಜಿ ಮತ್ತು ಸುಕುಮಾರ್ ಸಮಾಜ್‌ಪತಿ; ವಿಶೇಷ ಪ್ರಶಸ್ತಿ (ಬಿಡ್ಜ್): ಶಿಬ್ನಾಥ್ ಡಿ ಸರ್ಕಾರ್ ಮತ್ತು ಪ್ರಣಬ್ ಬರ್ಧನ್; ವಿಶೇಷ ಪ್ರಶಸ್ತಿ (ಕಬಡ್ಡಿ): ಪಾಯೆಲ್ ಚೌಧರಿ; ವರ್ಷದ ಭರವಸೆಯ ಕ್ರೀಡಾಪಟು: ನೀಲಾಶ್ ಸಹಾ.
ರಾಜ್ಯ ಪ್ರಶಸ್ತಿಗಳು
ಅತ್ಯುತ್ತಮ ಕ್ರಿಕೆಟಿಗ/ಗೆ: ತನುಶ್ರೀ ಸರ್ಕಾರ್; ಅತ್ಯುತ್ತಮ ಫುಟ್ಬಾಲ್ ಆಟಗಾರ: ಪ್ರೀತಮ್ ಕೊಟಾಲ್; ಅತ್ಯುತ್ತಮ ಕ್ರೀಡಾಪಟು: ಲಿಲಿ ದಾಸ್; ಅತ್ಯುತ್ತಮ ಚೆಸ್ ಆಟಗಾರ: ಉತ್ಸಾಬ್ ಚಟರ್ಜಿ; ಅತ್ಯುತ್ತಮ ಟಿಟಿ ಆಟಗಾರ: ಕ್ರಿತ್ವಿಕಾ ಸಿನ್ಹಾ ರಾಯ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications