ವಿರಾಟ್ ಕೊಹ್ಲಿ ಟ್ರೋಲ್ ಮಾಡಿ ತಾನೇ ಫಜೀತಿಗೆ ಸಿಲುಕಿದ ಜೇಮ್ಸ್ ನೀಶಮ್!

ನವದೆಹಲಿ, ಆಗಸ್ಟ್ 3: ಸುಖಾಸುಮ್ಮನೆ ಮೈ ಮೇಲೆ ಇರುವೆ ಬಿಟ್ಟುಕೊಳ್ಳೋದು ಅಂತಾರಲ್ಲ? ಅಂಥದ್ದೊಂದು ಫಜೀತಿಗೆ ನ್ಯೂಜಿಲೆಂಡ್ ಆಲ್ ರೌಂಡರ್ ಜೇಮ್ಸ್ ನೀಶಮ್ ಸಿಲುಕಿದ್ದಾರೆ. ಟ್ವಿಟರ್‌ನಲ್ಲಿ ವಿರಾಟ್ ಕೊಹ್ಲಿಯನ್ನು ಟ್ರೋಲ್ ಮಾಡೋಕೆ ಹೋಗಿ ತಾನೇ ತಮಾಷೆಗೀಡಾಗಿದ್ದಾರೆ.
ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್ಮನ್ ರೋರಿ ಬರ್ನ್ಸ್ ಮತ್ತು ಟೀಮ್ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ ಹೆಸರನ್ನು ಸೇರಿಸಿ ನೀಶಮ್ ಆಗಸ್ಟ್ 3ರಂದು ಒಂದು ಟ್ವೀಟ್ ಮಾಡಿದ್ದರು. ಟ್ವೀಟ್‌ನಲ್ಲಿ ನೀಶಮ್, 'ಆ್ಯಷಸ್ ವೃತ್ತಿ ಜೀವನದಲ್ಲಿ ಕೊಹ್ಲಿ ಗಳಿಸಿದ ರನ್‌ಗಿಂತ ಹೆಚ್ಚು ರನ್ನನ್ನು ರೋರಿ ಬರ್ನ್ಸ್ ಅವರು ಆ್ಯಷನ್ ಮೊದಲ ಇನ್ನಿಂಗ್ಸ್‌ನಲ್ಲಿ ಗಳಿಸಿದ್ದಾರೆ' ಎಂದು ಬರೆದುಕೊಂಡಿದ್ದರು.
ಇಂಗ್ಲೆಂಡ್ vs ಆಸ್ಟ್ರೇಲಿಯಾ, ಆ್ಯಷಸ್ ಮೊದಲ ಟೆಸ್ಟ್, Live ಸ್ಕೋರ್‌ಕಾರ್ಡ್
ಆ್ಯಷಸ್ ಸರಣಿಯ ಮೊದಲ ಟೆಸ್ಟ್ ನಲ್ಲಿ ಬರ್ನ್ಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದು ನಿಜವೇ. ಆದರೆ ಆ್ಯಷಸ್ ಸರಣಿಗೆ ಕೊಹ್ಲಿಯನ್ನು ಎಳೆತಂದು ನೀಶಮ್ ಎಡವಟ್ಟು ಮಾಡಿಕೊಂಡಿದ್ದರು.

ರೋರಿ ಬರ್ನ್ಸ್ ಭರ್ಜರಿ ಆಟ
ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಆ್ಯಷಸ್ ಟೆಸ್ಟ್‌ನಲ್ಲಿ ಇಂಗ್ಲೆಂಡ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಬರ್ನ್ಸ್ 133 ರನ್ ಗಳಿಸುವ ಮೂಲಕ ಉತ್ತಮ ಆಟ ಪ್ರದರ್ಶಿಸಿದ್ದರು. ಹೆಚ್ಚಾಗಿ ಅವರಿವರ ಕಾಲೆಳೆಯುವ ಗೀಳಿರುವ ನೀಶಮ್ ಅದ್ಯಾಕೋ ರೋರಿ ಬರ್ನ್ಸ್ ಆಟವನ್ನು ಕೊಹ್ಲಿಗೆ ಹೋಲಿಸೋಕೆ ಹೋದರೋ ಗೊತ್ತಿಲ್ಲ.

ತಮಾಷೆಗೀಡಾದ ನೀಶಮ್
ನೀಶಮ್ ಟ್ವೀಟ್ ಸಾಲುಗಳಲ್ಲಿ ಎಡವಟ್ಟಾಗಿತ್ತು. ಆ್ಯಷಸ್ ಪಂದ್ಯಕ್ಕೂ ವಿರಾಟ್ ಕೊಹ್ಲಿಗೂ ಸಂಬಂಧವೇ ಇಲ್ಲ. ಯಾಕೆಂದರೆ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನಡುವಣ ಪಂದ್ಯಗಳನ್ನು ಮಾತ್ರ ಆ್ಯಷಸ್ ಎಂದು ಕರೆಯಲಾಗುತ್ತದೆ. ಹೀಗಾಗಿ ನೀಶಮ್ ತಮಾಷೆ ಸ್ವತಃ ತಾನೇ ಮುಜುಗರಕ್ಕೀಡಾಗುವಂತೆ ಮಾಡಿದೆ.

ರಣಜಿ ಹೆಸರಿಸಿ ತಮಾಷೆ
ರಣಜಿ ಟೂರ್ನಿಯಲ್ಲಿ ಹೇಗೆ ಭಾರತೀಯ ಆಟಗಾರರಲ್ಲದೆ ಬೇರೆ ವಿದೇಶಿ ಆಟಗಾರರು ಆಡಲು ಅವಕಾಶವಿಲ್ಲವೋ ಹಾಗೇ, ಆ್ಯಷಸ್‌ನಲ್ಲೂ ಇಂಗ್ಲೆಂಡ್-ಆಸೀಸ್ ಆಟಗಾರರಲ್ಲದೆ ಬೇರೆಯವರು ಕಾಣಸಿಲು ಸಾಧ್ಯವಿಲ್ಲ. ಹೀಗಾಗಿ ಇಲ್ಲೊಬ್ಬರು ಟ್ವೀಟ್‌ನಲ್ಲಿ, 'ರಣಜಿರಲ್ಲಿ ನೀನು ಹೇಗೆ 1000 ವಿಕೆಟ್, 10000 ರನ್ ಗಳಿಸಿದ್ದೀಯೋ ಹಾಗೇ ಇದು' ಎಂದು ಪ್ರತಿಕ್ರಿಯಿಸಿದ್ದಾರೆ.

ಆ್ಯಷಸ್‌ಗೆ ಬಂದ ಫೆಡರರ್
'ಕಳೆದ ನಾಲ್ಕು ಆ್ಯಷಸ್ ಸರಣಿಗಳಲ್ಲಿ ರೋಜರ್ ಫೆಡರರ್ ಸೊನ್ನೆ ವಿಕೆಟ್ ಗಳಿಸಿದ್ದಾರೆ' ಎಂದು ಇಲ್ಲೊಂದು ಟ್ವೀಟ್ ತರಲೆ ಪ್ರತಿಕ್ರಿಯೆಯಿದೆ. ಟೆನಿಸ್ ದಿಗ್ಗಜಫೆಡರರ್ ಎಂದಾದರೂ ಕ್ರಿಕೆಟ್‌ನಲ್ಲಿ, ಅದೂ ಆ್ಯಷನ್ ನಲ್ಲಿ ಕಾಣಲು ಸಾಧ್ಯವೆ?!. ಹಾಗೇ ವಿರಾಟ್ ಕೂಡ ಆ್ಯಷಸ್‌ನಲ್ಲಿ ಕಾಣಲಾರರು ಎಂದು ನೀಶಮ್‌ಗೆ ಕುಟುಕಿ ಮಾಡಿರುವ ಟ್ವೀಟ್ ಇದು. ಹೀಗೇ ಇನ್ನೂ ಸಾಕಷ್ಟು ಟ್ವೀಟ್‌ಗಳು ನೀಶಮ್ ಕಾಲೆಳೆದಿವೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications