Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಗ್ಲೋಬಲ್ ಮೊಬೈಲ್ ಅವಾರ್ಡ್ಸ್ 2019 ಗೆದ್ದ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌

Jio Cricket Play Along innovation wins at GLOMO Awards

ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC19) ಸಂದರ್ಭದಲ್ಲಿ ಘೋಷಿಸಲಾದ ಗ್ಲೋಬಲ್ ಮೊಬೈಲ್ (ಗ್ಲೋಮೊ) ಅವಾರ್ಡ್ಸ್ 2019ನಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಉಪಕ್ರಮವು 'ಮೊಬೈಲ್ ಮಾರ್ಕೆಟಿಂಗ್‌ನ ಅತ್ಯುತ್ತಮ ಬಳಕೆ' ಪ್ರಶಸ್ತಿ ಗೆದ್ದಿದೆ. 'ಸ್ಮಾರ್ಟಿ'ಗಾಗಿ ಬಯಾಪೋವಾ ಹಾಗೂ ಸ್ಮಾರ್ಟಿ, 'ಡಯಲಾಗ್ ಮೆಗಾ ರನ್ ಮೊಬೈಲ್ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್'ಗಾಗಿ ಡಯಲಾಗ್ ಆಕ್ಸಿಯಾಟಾ, 'ಯುನಾನ್ ಟೂರಿಂಗ್ ಬೈ ಒನ್ ಮೊಬೈಲ್ ಫೋನ್'ಗಾಗಿ ಚೈನಾ ಮೊಬೈಲ್ ಯುನಾನ್ ಹಾಗೂ ಹುವಾಯ್, 'ಫ್ರೀನೆಟ್ಸ್ ಫ್ರೀನಿವರ್ಸಯಾ'ಗಾಗಿ ವಾಯೇಜರ್ ಇನೋವೇಶನ್ಸ್ - ಈ ಪ್ರಶಸ್ತಿಗಾಗಿ ಸ್ಪರ್ಧೆಯಲ್ಲಿದ್ದವು.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಒಂದು ಅನುಭವಾತ್ಮಕ ಮಾರ್ಕೆಟಿಂಗ್ ಕಾರ್ಯಕ್ರಮವಾಗಿದ್ದು, ಟೀವಿ ಹಾಗೂ ಮೊಬೈಲುಗಳೆರಡರಲ್ಲೂ ಕ್ರಿಕೆಟಿನ ತತ್ಕಾಲದ ಸಂವಾದಾತ್ಮಕ ಅನುಭವ ಪಡೆದುಕೊಳ್ಳಲು ಗ್ರಾಹಕರಿಗೆ ನೆರವಾಗುತ್ತದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ಗೆ ನೀಡಲಾದ ಪ್ರಶಸ್ತಿಯ ಕುರಿತು ಮಾತನಾಡಿದ ತೀರ್ಪುಗಾರರು, "ಇದು ಮೊಬೈಲ್ ಮಾರ್ಕೆಟಿಂಗ್ ಮತ್ತು ಜಾಹೀರಾತು ಉಪಕ್ರಮಗಳ ಮೂಲಕ ಗಮನಾರ್ಹ ಯಶಸ್ಸನ್ನು ಪಡೆಯುವುದರ ಉತ್ತಮ ಉದಾಹರಣೆಯಾಗಿದೆ. ಬುದ್ಧಿವಂತಿಕೆಯಿಂದ ರೂಪಿಸಲಾದ ಯೋಜನೆ ಹಾಗೂ ಅನುಷ್ಠಾನವನ್ನು ಗಮನಿಸಿದಾಗ, ಲಕ್ಷಾಂತರ ಬಳಕೆದಾರರು ಹಾಗೂ 19 ಜಾಹೀರಾತುದಾರರು ಈ ಪ್ರಗತಿಪರ ಹಾಗೂ ವಿನೋದಮಯ ವೇದಿಕೆಯ ಲಾಭ ಪಡೆದುಕೊಂಡಿದ್ದು ಆಶ್ಚರ್ಯವೆನಿಸುವುದಿಲ್ಲ" ಎಂದು ಹೇಳಿದ್ದಾರೆ.

ವೀಕ್ಷಕರೂ ಆಟಗಾರರಾಗುವ, ತಮ್ಮ ಅಚ್ಚುಮೆಚ್ಚಿನ ತಂಡ ಹಾಗೂ ಆಟಗಾರರಿಗೆ ಇನ್ನಷ್ಟು ಹತ್ತಿರವಾಗುವ ಅವಕಾಶ ನೀಡುವ ಮೂಲಕ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್ ಭಾರತದ ಅತ್ಯಂತ ಜನಪ್ರಿಯ ಕ್ರೀಡೆಯನ್ನು ಒಟ್ಟಾಗಿ ಸಂಭ್ರಮಿಸಲು ನೆರವಾಗಿದೆ. ಕ್ರಿಕೆಟ್ ಪ್ರೇಮಿಗಳಿಗೆ ತಮ್ಮ ಮೊಬೈಲಿನಲ್ಲೇ ವಿನೂತನ ಅನುಭವ ಕಟ್ಟಿಕೊಟ್ಟ ಈ ಉಪಕ್ರಮದ ಯಶಸ್ಸನ್ನು ಈ ಪ್ರಶಸ್ತಿ ಪ್ರಮಾಣೀಕರಿಸುತ್ತದೆ.

ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಕುರಿತು: ಟೀವಿಯಲ್ಲಿ ಪಂದ್ಯದ ನೇರಪ್ರಸಾರ ಆಗುತ್ತಿರುವಾಗಲೇ ಬಳಕೆದಾರರು ತಮ್ಮ ಮೊಬೈಲ್ ಪರದೆಯಲ್ಲಿ ಜಿಯೋ ಕ್ರಿಕೆಟ್ ಪ್ಲೇ ಅಲಾಂಗ್‌ ಸೌಲಭ್ಯವನ್ನು ಬಳಸಬಹುದು.

ವೀಕ್ಷಕರು ತಮ್ಮ ಅಚ್ಚುಮೆಚ್ಚಿನ ಕ್ರಿಕೆಟ್ ಪಂದ್ಯವನ್ನು ನೇರಪ್ರಸಾರದಲ್ಲಿ ನೋಡುವುದರ ಜೊತೆಗೆ ಅದರ ಫಲಿತಾಂಶವನ್ನು ತತ್ಕಾಲದಲ್ಲೇ ಊಹಿಸುವ ಮೂಲಕ ಅದರಲ್ಲಿ ಭಾಗವಹಿಸುವುದನ್ನೂ ಸಾಧ್ಯವಾಗಿಸುವ ಸಂವಾದಾತ್ಮಕತೆಯ ಪ್ರಾಥಮಿಕ ತತ್ವವನ್ನು ಈ ಪರಿಕಲ್ಪನೆ ಬಳಸಿಕೊಂಡಿತ್ತು. ಜಿಯೋ ಗ್ರಾಹಕರು ಹಾಗೂ ಗ್ರಾಹಕರಲ್ಲದವರಿಗೂ ಈ ಆಟ ಲಭ್ಯವಿತ್ತು. ಮೈಜಿಯೋ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿಕೊಂಡರೆ ಸಾಕು, ಗ್ರಾಹಕರು ಈ ಆಟದಲ್ಲಿ ಪಾಲ್ಗೊಳ್ಳಲು ಸಿದ್ಧರಾಗುತ್ತಿದ್ದರು.

ತತ್ಕಾಲದಲ್ಲಿ ಫಲಿತಾಂಶಗಳನ್ನು ಊಹಿಸುವ ಜೊತೆಗೆ ಆಟಗಾರರು ತಮ್ಮ ಕ್ರಿಕೆಟ್ ಜ್ಞಾನವನ್ನೂ ಪರೀಕ್ಷಿಸಿಕೊಂಡು ಪ್ರತಿ ಸರಿಯಾದ ಊಹೆಗೂ ಅಂಕಗಳನ್ನು ಪಡೆದುಕೊಳ್ಳಬಹುದಿತ್ತು. ಪ್ರತಿ ಪಂದ್ಯದಲ್ಲಿ ಉನ್ನತ ಅಂಕ ಗಳಿಸಿದವರ ಜೊತೆಗೆ ಒಟ್ಟಾರೆ ಅತ್ಯುನ್ನತ ಅಂಕಗಳನ್ನು ಪಡೆದವರಿಗೂ ಬಹುಮಾನಗಳನ್ನು ನೀಡಲಾಗಿತ್ತು.

Story first published: Sunday, March 3, 2019, 10:32 [IST]
Other articles published on Mar 3, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+