JioHotstar: ಐಪಿಎಲ್ ಆರಂಭಕ್ಕೂ ಮುನ್ನ ಬರೆ: ಇನ್ನು ಪಂದ್ಯಗಳನ್ನು ಫ್ರೀ ನೋಡುವುದು ಅಸಾಧ್ಯ, ಏನು ಮಾಡಬೇಕು?
ಇನ್ನೇನು ಕೆಲವೇ ದಿನಗಳಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಕಳೆದ ಆವೃತ್ತಿಗಳಲ್ಲಿ ಈ ಲೀಗ್‌ನ್ನು ಅಭಿಮಾನಿಗಳು ಮೊಬೈಲ್‌ನಲ್ಲಿ ನೋಡಿ ತುಂಬ ಖುಷಿ ಪಟ್ಟಿದ್ದರು. ಅದು ಉಚಿತವಾಗಿತ್ತು. ಆದರೆ ಈ ಬಾರಿ ಅಭಿಮಾನಿಗಳ ಜೇಬಿಗೆ ಕತ್ತರಿ ಹಾಕಲು ಪ್ಲ್ಯಾನ್ ನಡೆದಿದೆ. ಹಾಗಿದ್ದರೆ ಆಗುವುದು ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಜಿಯೋ ಹಾಗ ಹಾಟ್ ಸ್ಟಾರ್‌ಗಳ ವಿಲೀನವಾಗಿದ್ದು ಎಲ್ಲರಿಗೂ ಗೊತ್ತಿರುವ ಸುದ್ದಿ. ಈ ಎರಡೂ ಫ್ಲಾಟ್ ಫಾರ್ಮ್‌ಗಳು ಕೂಡಿ ಹೊಸ ವೇದಿಕೆಯನ್ನು ಸೃಷ್ಟಿಸಿವೆ. ಜಿಯೋಸಿನಿಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ವಿಲೀನಗೊಂಡು ಜಿಯೋಹಾಟ್‌ಸ್ಟಾರ್ ಆಗಿ ಮಾರ್ಪಟ್ಟಿವೆ. ಈ ಸೇವೆ ಫೆ.14 ರಂದು ಆರಂಭವಾಗಿದೆ. ಈ ಫ್ಲಾಟ್ ಫಾರ್ಮ್ 50 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಇನ್ನು ಐಪಿಎಲ್‌ನ್ನು ಉಚಿತವಾಗಿ ನೋಡಿ ಎಂಜಾಯ್ ಮಾಡುವ ಕಾಲ ಬದಲಾಗಲಿದೆ.

ಅಭಿಮಾನಿಗಳ ಜೇಬಿಗೆ ಕತ್ತರಿ
ಈ ಹಿಂದೆ ಐಪಿಎಲ್‌ನ್ನು ಅಭಿಮಾನಿಗಳು ಜಿಯೋ ಸಿನೇಮಾದಲ್ಲಿ ಉಚಿತವಾಗಿ ವೀಕ್ಷಿಸುತ್ತಿದ್ದರು. ಆದರೆ ಈಗ ಈ ಮೆಗಾ ಲೀಗ್‌ನ್ನು ನೋಡಲು ಚಂದಾದಾರಿಕೆ ಅವಶ್ಯಕ. ಕೈಗೆಟಕುವ ದರಗಳಲ್ಲಿ ಈ ಚಂದಾವನ್ನು ನಿಗದಿ ಪಡಿಸಲಾಗಿದೆ ಎಂದು ತಿಳಿದು ಬಂದಿದೆ. 2023ರಿಂದ ಐದು ವರ್ಷಗಳ ಕಾಲ ಜಿಯೋ ಐಪಿಎಲ್ ಡಿಜಿಟಲ್ ಫ್ಲಾಟ್ ಫಾರ್ಮ್ ಹಕ್ಕನ್ನು ಪಡೆದಿತ್ತು. ಇದರ ಪರಿಣಾಮ ಇನ್ನು 2025ರಲ್ಲಿ ಐಪಿಎಲ್ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಹಣವನ್ನು ನೀಡಬೇಕಾಗುತ್ತದೆ ಎಂದು ವರದಿಗಳು ತಿಳಿಸಿವೆ.
ಚಂದಾದಾರಿಕೆಗೆ ಎಷ್ಟು ಹಣ
ಬಳಕೆದಾರ ತನ್ನ ಅನುಕೂಲತಗೆ ತಕ್ಕಂತೆ ರಿಚಾರ್ಜ್ ಮಾಡಿಸಿಕೊಳ್ಳಬಹುದು. ಈ ಯೋಜನೆ 149 ರೂಪಾಯಿಯಿಂದ ಆರಂಭವಾಗುತ್ತದೆ. ಜಾಹಿರಾತಿನ ಕಿರಿಕಿರಿ ಇಲ್ಲದೆ ಐಪಿಎಲ್ ನೋಡಲು ಚಂದಾದಾರ 499 ರೂಪಾಯಿ ಖರ್ಚು ಮಾಡಬೇಕಾಗುತ್ತದೆ. ಈ ಫ್ಲಾಟ್ ಫಾರ್ಮ್ ಮೂಲಕ ಅಭಿಮಾನಿ ಐಸಿಸಿ ಈವೆಂಟ್ ಹಾಗೂ ಹಲವು ಕ್ರೀಡೆಗಳ ನೇರ ಪ್ರಸಾರ ಮಜೆಯನ್ನು ಪಡೆಯಬಹಹುದು. ರಿಲಯನ್ಸ್ ಹಾಗೂ ಡಿಸ್ನಿ ದೇಶದಲ್ಲಿ 100ಕ್ಕೂ ಹೆಚ್ಚು ಡಿಜಿಟಲ್ ಫ್ಲಾಟ್ ಫಾರ್ಮ್‌ಗಳನ್ನು ನಿರ್ವಹಿಸುತ್ತವೆ. ಸದ್ಯಕ್ಕಂತೂ ಈ ಸುದ್ದಿ ಐಪಿಎಲ್ ಅಭಿಮಾನಿಗಳಿಗೆ ನಿರಾಶಾದಾಯಕ.
ಜಿಯೋಹಾಟಸ್ಟಾರ್ ವೇದಿಕೆಯಿಂದ ಬಳಕೆದಾರ ಪಂದ್ಯವನ್ನು ವಿವಿಧ ಕೋನಗಳಲ್ಲಿ ನೋಡಬಹುದು. ಅಲ್ಲದೆ ತನಗೆ ಬೇಕಿದ್ದ ಮಾಹಿತಿಯನ್ನು ತುದಿ ಬೆರಳಲ್ಲಿ ಪಡೆಯಬಹುದು. ಅಲ್ಲದೆ ಈ ಮಾಧ್ಯಮ ಅಲ್ಟ್ರಾ-ಎಚ್‌ಡಿ 4ಕೆ ಸ್ಟ್ರೀಮಿಂಗ್ ವ್ಯವಸ್ಥೆಯನ್ನು ಹೊಂದಿರಲಿದೆ.
ಇಂದಿನಿಂದ ಮಹಿಳಾ ಲೀಗ್
ಫೆ.14 ಶುಕ್ರವಾರದಿಂದ ಮಹಿಳಾ ಪ್ರೀಮಿಯರ್ ಲೀಗ್ ಆರಂಭವಾಗಲಿದೆ. ಈ ಲೀಗ್‌ನ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಕಾದಾಟ ನಡೆಸಲಿವೆ. ಈ ಪಂದ್ಯ ಅಭಿಮಾನಿಗಳ ಚಿತ್ತ ಕದ್ದಿದೆ. ಬೆಂಗಳೂರು ತಂಡದಲ್ಲಿ ಸ್ಟಾರ್ ಆಟಗಾರ್ತಿಯರ ದಂಡೇ ಇದ್ದು, ಶುಭಾರಂಭ ಮಾಡುವ ಕನಸನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications