ಜಿಯೋ ಟಿವಿಯಲ್ಲಿ ಮೂರು ರಾಷ್ಟ್ರಗಳ ಟಿ20 ಸರಣಿ ಪ್ರಸಾರ!

Posted By:
JioTV bags digital rights Tri- Nation Nidahas Trophy In India

ಮುಂಬೈ, ಮಾರ್ಚ್ 07: ಚಳಿಗಾಲದ ಒಲಿಂಪಿಕ್ಸ್ 2018 ಮತ್ತು ಇಎಫ್‌ಎಲ್ ಕಪ್ (ಕ್ಯಾರಬೋ ಕಪ್ ಫೈನಲ್) ಅನ್ನು ಇತ್ತೀಚಿನ ವಾರಗಳಲ್ಲಿ ಭಾರತೀಯ ಡಿಜಿಟಲ್ ಗ್ರಾಹಕರಿಗಾಗಿ ತಂದು ಜಿಯೋಟಿವಿ ಯಶಸ್ವಿಯಾಗಿತ್ತು.

ಈಗ ಭಾರತದ ಅಗ್ರಗಣ್ಯ ಲೈವ್ ಟಿವಿ ಆಪ್, ಜಿಯೋ ಟಿವಿ, ನಿದಹಾಸ್ ಟ್ರೋಫಿ ಟಿ20 ಕ್ರಿಕೆಟ್ ಸರಣಿಯ ಭಾರತದ ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ.

ನಿದಹಾಸ್ ಟ್ರೋಫಿ - ಮೂರು ದೇಶಗಳ ಟಿ20 ಟೂರ್ನಿಯಾಗಿದ್ದು, ಆತಿಥೇಯ ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಭಾರತದ ನಡುವೆ ಪಂದ್ಯಗಳು, ಕೊಲಂಬೋದಲ್ಲಿ 2018ರ ಮಾರ್ಚ್ 6 ರಿಂದ 18ರ ತನಕ ನಡೆಯಲಿದೆ.

ನಿದಹಾಸ್ ಟಿ20 ಸರಣಿ ವೇಳಾಪಟ್ಟಿ

ಜಿಯೋ ಟಿವಿ, ಇತ್ತೀಚೆಗೆ ಪ್ರತಿಷ್ಠಿತ ಜಾಗತಿಕ ಮೊಬೈಲ್(ಗ್ಲೋಮೋ) ಪ್ರಶಸ್ತಿ 2018ಅನ್ನು ಅತ್ಯುತ್ತಮ ಮೊಬೈಲ್ ವೀಡಿಯೋ ಕಂಟೆಂಟ್‌ಗಾಗಿ ಗೆದ್ದುಕೊಂಡಿತ್ತು.

ಭಾರತದಲ್ಲಿನ ಕೋಟ್ಯಂತರ ಅಭಿಮಾನಿಗಳಿಗೆ ಲೈವ್ ಆಗಿ ಮತ್ತು ಕ್ಯಾಚ್ ಅಪ್ ಕಂಟೆಂಟ್ ಮೂಲಕ ತಮ್ಮ ಮೊಬೈಲ್ ಡಿವೈಸ್‌ಗಳಲ್ಲೇ ತ್ರಿಕೋನ ಸರಣಿಯ ಸಮಗ್ರ ಕವರೇಜ್ ಒದಗಿಸಲಾಗುತ್ತದೆ.

ಈ ಕ್ರೀಡಾಕೂಟವು ಜಿಯೋಟಿವಿಯಲ್ಲಿ ಮಾರ್ಚ್ 6 ರಿಂದ 18ರ ತನಕ ಪ್ರತಿದಿನ ಸಂಜೆ 6.25ರಿಂದ ಪ್ರಸಾರಗೊಳ್ಳಲಿದೆ. ಇದು ಲೈವ್ ಮತ್ತು ಪುನರಾವರ್ತಿತ ಪ್ರಸಾರ ಹಾಗೂ ಹೈಲೈಟ್ ಪ್ಯಾಕೇಜ್‌ಗಳನ್ನು ಒಳಗೊಂಡಿರಲಿದೆ ಎಂದು ಹೇಳಿದೆ.

ನಿದಹಾಸ್ ಟ್ರೋಫಿಯ ವೇಳಾಪಟ್ಟಿ

ಮಾರ್ಚ್ 6,2018: ಶ್ರೀಲಂಕಾ ವಿರುದ್ಧ ಭಾರತ

ಮಾರ್ಚ್ 8, 2018: ಬಾಂಗ್ಲಾದೇಶ ವಿರುದ್ಧ ಭಾರತ

ಮಾರ್ಚ್ 10, 2018: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ

ಮಾರ್ಚ್ 12, 2018: ಶ್ರೀಲಂಕಾ ವಿರುದ್ಧ ಭಾರತ

ಮಾರ್ಚ್ 14, 2018: ಬಾಂಗ್ಲಾದೇಶ ವಿರುದ್ಧ ಭಾರತ

ಮಾರ್ಚ್ 16, 2018: ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ

ಮಾರ್ಚ್ 18, 2018: ಫೈನಲ್

Story first published: Wednesday, March 7, 2018, 20:56 [IST]
Other articles published on Mar 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ