ಶುಕ್ರವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಲಕ್ನೋನಲ್ಲಿ ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಗಾಯದ ಸಮಸ್ಯೆಯಿಂದಾಗಿ ನಾಯಕ ರಜತ್ ಪಾಟಿದಾರ್ ನಾಯಕತ್ವದಿಂದ ಹಿಂದೆ ಸರಿದರು. ಹೀಗಾಗಿ ಇವರ ಬದಲಿಗೆ ಆರ್‌ಸಿಬಿ ತಂಡವನ್ನು ಜಿತೇಶ್ ಶರ್ಮಾ ತಂಡವನ್ನು ಮುನ್ನಡೆಸಿದರು. ಈ ಮೂಲಕ ಆರ್‌ಸಿಬಿ ತಂಡವನ್ನು ಮುನ್ನಡೆಸಿದ ಒಂಬತ್ತನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದ್ರು.
ಜಿತೇಶ್ ಶರ್ಮಾ 18ನೇ ಆವೃತ್ತಿಯ 65ನೇ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದರು. ಈ ಮೊದಲು ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ವಿರುದ್ಧ ಕಳೆದ ಆವೃತ್ತಿಯಲ್ಲಿ ಇದೇ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧವೇ ಕಣಕ್ಕೆ ಇಳಿದಿದ್ದರು. ಈಗ ಐಪಿಎಲ್‌ನಲ್ಲಿ ಎರಡನೇ ಬಾರಿಗೆ ತಂಡವನ್ನು ಮುನ್ನಡೆಸಿದ ಹಿರಿಮೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡದ ನಾಯಕ ರಜತ್ ಪಟಿದಾರ್ ಬೆರಳಿಗೆ ಗಾಯವಾಗಿತ್ತು. ಕ್ಯಾಪ್ಟನ್ ರಜತ್ ಈ ಗಾಯದಿಂದ ಇನ್ನು ಚೇತರಿಸಿಕೊಂಡಿಲ್ಲ. ಹೀಗಾಗಿ ಇವರು ಮಹತ್ವದ ಪಂದ್ಯದಲ್ಲಿ ಮೈದಾನಕ್ಕೆ ಇಳಿಯಲಿಲ್ಲ. ಇವರ ಬದಲಿಗೆ ಜಿತೇಶ್ ಶರ್ಮಾ ಮೈದಾನಕ್ಕೆ ಟಾಸ್ ವೇಳೆಗೆ ಬಂದಾಗಲೇ ಎಲ್ಲರಿಗೂ ಅಚ್ಚರಿ ಮೂಡಿಸಿತು. ಆದರೆ ಪಾಟಿದಾರ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರೆ. ಅಲ್ಲದೆ ಬ್ಯಾಟಿಂಗ್ ಮಾಡುತ್ತಾರೆ ಎಂದು ಹೇಳಿದ್ದಾರೆ. ಆರ್‌ಸಿಬಿ ಈ ಒಂದು ಪಂದ್ಯಕ್ಕೆ ನಾಯಕತ್ವ ಬದಲಿಸಿತಾ ಅಥವಾ ಮುಂದಿನ ಪಂದ್ಯಗಳಲ್ಲೂ ರಜತ್ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡುತ್ತಾರಾ ಎಂಬ ಬಗ್ಗೆ ಇನ್ನು ಖಚಿತ ಮಾಹಿತಿ ಇಲ್ಲ.

ದೇಶೀಯ ಟೂರ್ನಿಯಲ್ಲಿ ಜಿತೇಶ್ ಶರ್ಮಾ ನಾಯಕರಾಗಿ ವಿದರ್ಭ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ಈ ಆವೃತ್ತಿಗೂ ಮೊದಲು ಆರ್‌ಸಿಬಿ ರಜತ್ ಪಾಟಿದಾರ್ ಅವರಿಗೆ ಪಟ್ಟವನ್ನು ಕಟ್ಟಿತು. ಇವರು 18ನೇ ಆವೃತ್ತಿಯಲ್ಲಿ ಅಮೋಘ ನಾಯಕತ್ವದ ಸ್ಕಿಲ್‌ಗಳನ್ನು ಪ್ರದರ್ಶಿಸಿ ಗಮನ ಸೆಳೆದರು. ಇವರ ಮುಂದಾಳತ್ವದಲ್ಲಿ ಆರ್‌ಸಿಬಿ 12 ಪಂದ್ಯಗಳಲ್ಲಿ 8 ಪಂದ್ಯಗಳನ್ನು ಗೆದ್ದಿದ್ದು ಪ್ಲೇ ಆಫ್‌ಗೆ ತಲುಪಿದೆ.
ರಾಹುಲ್ ದ್ರಾವಿಡ್ (2008)
ಕೆವಿನ್ ಪೀಟರ್ಸನ್ (2009)
ಅನಿಲ್ ಕುಂಬ್ಳೆ (2009-2010)
ಡೇನಿಯಲ್ ವೆಟ್ಟೋರಿ (2011-2012)
ವಿರಾಟ್ ಕೊಹ್ಲಿ (2013-2021)
ಶೇನ್ ವ್ಯಾಟ್ಸನ್ (2017, ಸ್ಟ್ಯಾಂಡ್-ಇನ್)
ಫಾಫ್ ಡು ಪ್ಲೆಸಿಸ್ (2022-2024)
ವಿರಾಟ್ ಕೊಹ್ಲಿ (2023 ಕೆಲ ಪಂದ್ಯ)
ಜಿತೇಶ್ ಶರ್ಮಾ (2025 ಒಂದು ಪಂದ್ಯ)
ಆರ್‌ಸಿಬಿ ತಂಡ ಲೀಗ್ ಹಂತದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ ಲಕ್ನೋನಲ್ಲಿ ಪಂದ್ಯವನ್ನು ಆಡಲಿದೆ. ಈ ಎರಡೂ ಪಂದ್ಯಗಳನ್ನು ಗೆದ್ದಲ್ಲಿ ಆರ್‌ಸಿಬಿ ಅಂಕ ಪಟ್ಟಿಯಲ್ಲಿ ಮೊದಲೆರೆಡು ಸ್ಥಾನವನ್ನು ತಲುಪಬಹುದು. ಈಗಾಗಲೇ ಆರ್‌ಸಿಬಿ ಎರಡನೇ ಸ್ಥಾನದಲ್ಲಿದ್ದು, ಈ ಸ್ಥಾನವನ್ನು ಭಧ್ರ ಪಡಿಸಿಕೊಳ್ಳಲು ಫೈಟ್ ನಡೆಸಲಿದೆ.