IPL 2025: ಅರ್ಧಶತಕ ಗಳಿಸದಿದ್ದರೂ ಸದ್ದು ಮಾಡುತ್ತಿರುವ ಆರ್‌ಸಿಬಿ ಫಿನಿಶರ್
ಪ್ರತಿಯೊಂದು ಕ್ರಿಕೆಟ್ ತಂಡದಲ್ಲೂ ಒಬ್ಬ ಫಿನಿಷರ್ ಇರುತ್ತಾರೆ. ಅವರು ಜಾದೂಗಾರನಂತೆ ಬಂದು ತಂಡಕ್ಕೆ ಗೆಲುವನ್ನು ತಂದು ಕೊಡುತ್ತಾನೆ. ಐಪಿಎಲ್ 2025 ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದಲ್ಲಿ ಒಬ್ಬ ಫಿನಿಶರ್ ಇದ್ದಾರೆ. ಅವರು ಅರ್ಧಶತಕ ಗಳಿಸದಿದ್ದರೂ ಎದುರಾಳಿ ತಂಡಗಳ ಬೌಲರ್ಸ್ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಐಪಿಎಲ್ 2025 ರಲ್ಲಿ ಆರ್‌ಸಿಬಿ ತಂಡವು ಪ್ರಾಬಲ್ಯ ಸಾಧಿಸುತ್ತಿದೆ. ಇದರೊಂದಿಗೆ ಚೊಚ್ಚಲ ಐಪಿಎಲ್ ಪ್ರಶಸ್ತಿ ಗೆಲ್ಲುವತ್ತ ಹೆಜ್ಜೆ ಹಾಕಿದೆ.
ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಂತಹ ಚಾಂಪಿಯನ್ ತಂಡಗಳನ್ನು ತವರಿನಲ್ಲಿ ಸೋಲಿಸುವಲ್ಲಿ ಆರ್‌ಸಿಬಿ ಯಶಸ್ವಿಯಾಗಿದೆ. ಈ ಆರ್‌ಸಿಬಿ ಬ್ಯಾಟರ್ ಫಿನಿಷರ್ ಆಗುವುದು ಎಷ್ಟು ಕಷ್ಟ ಎಂದು ಹೇಳಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿರುವುದು ಬೇರೆ ಯಾರು ಅಲ್ಲ, ಜಿತೇಶ್ ಶರ್ಮಾ. ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದರಿಂದ ಅವರ ಇನ್ನಿಂಗ್ಸ್‌ನ ಮಹತ್ವ ಹೆಚ್ಚಾಗಿದೆ. ಈಗ 30-40 ರನ್‌ಗಳ ಸ್ಕೋರ್ ಅನ್ನು ಸಹ ಅರ್ಧಶತಕವೆಂದು ಪರಿಗಣಿಸುತ್ತಾರೆ ಎಂದು ಅವರು ತಿಳಿಸಿದ್ದಾರೆ.
ಜಿತೇಶ್ ಶರ್ಮಾ ಐಪಿಎಲ್ 2025 ರಲ್ಲಿ ಆಗಾಗ್ಗೆ ಆರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬರುತ್ತಾರೆ. ಕೆಲವು ದಿನಗಳ ಹಿಂದೆ ಮುಂಬೈ ಇಂಡಿಯನ್ಸ್ ವಿರುದ್ಧದ ಗೆಲುವಿನಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದರು. ಅವರು ಕೇವಲ19 ಎಸೆತಗಳಲ್ಲಿ 40 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದರು.
ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಜಿತೇಶ್ ಶರ್ಮಾ ಅವರು, "ಈಗ ಎಲ್ಲರೂ ಫಿನಿಷರ್ ಆಗಿದ್ದಾರೆ. ಆದರೆ ಆರು ಅಥವಾ ಏಳನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವುದು ಸುಲಭವಲ್ಲ. ಏಕೆಂದರೆ ನಾನು ಫಿನಿಷರ್ ಪಾತ್ರವನ್ನು ನಿರ್ವಹಿಸುತ್ತಿರುವಾಗಿನಿಂದ, ನಾನು ಅರ್ಧಶತಕ ಗಳಿಸಿಲ್ಲ' ಎಂದಿದ್ದಾರೆ.
ಮೊದಲು ನಾನು ಅರ್ಧಶತಕ ಮತ್ತು ಶತಕಗಳನ್ನು ಗಳಿಸುತ್ತಿದ್ದೆ. ಯಾವುದೇ ಸಾಧನೆ ಮಾಡಿದ ನಂತರ ಬ್ಯಾಟ್ ಎತ್ತಿಕೊಳ್ಳುವುದು ಒಳ್ಳೆಯದೆನಿಸಿತು. ಆದರೆ ನಾನು ಫಿನಿಷರ್ ಆದಾಗಿನಿಂದ, 30, 20, 40 ರನ್ ಗಳಿಸುತ್ತಿದ್ದೇನೆ. ಈಗ ಈ ರನ್‌ಗಳು ಐವತ್ತರಂತೆ. ನೀವು 30 ಎಸೆತಗಳಲ್ಲಿ 60 ಅಥವಾ 70 ರನ್ ಗಳಿಸಿದರೆ ಅದು ಶತಕದಂತೆ. ನನಗೆ ಸಂತೋಷವಾಗಿದೆ. ತಂಡ ಗೆದ್ದರೆ ಮನಸ್ಸು ದಣಿಯುತ್ತದೆ. ಇದರ ಅನುಕೂಲವೆಂದರೆ ನೀವು ಅಲ್ಲಿಂದ ಆಟವನ್ನು ನಿಯಂತ್ರಿಸಬಹುದು. ಈ ಪಿಚ್‌ನಲ್ಲಿ ನಿಮ್ಮ ತಂಡದ ಬೌಲರ್‌ಗಳು ಏನು ಮಾಡಬಹುದು ಎಂದು ನಿಮಗೆ ತಿಳಿಯುತ್ತದೆ. ನೀವು ಇನ್ನೊಂದು ತಂಡದ ಬ್ಯಾಟರ್ಸ್ ಆಟವನ್ನು ಆರ್ಥ ಮಾಡಿಕೊಳ್ಳಬಹುದು ಎಂದು ಜಿತೇಶ್ ಶರ್ಮಾ ಹೇಳಿದ್ದಾರೆ.
ಐಪಿಎಲ್ 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡುತ್ತಿದೆ. ಇಲ್ಲಿವರೆಗೆ ಆರ್‌ಸಿಬಿ ಆಡಿರುವ 6 ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆಲುವು ಸಾಧಿಸಿದರೆ, 2 ರಲ್ಲಿ ಸೋಲು ಕಂಡಿದ್ದು, 8 ಅಂಕಗಳೊಂದಿಗೆ ಪಾಯಿಂಟ್ ಟೇಬಲ್‌ನಲ್ಲಿ ಮೂರನೇ ಸ್ಥಾನದಲ್ಲಿದೆ. ಆರ್‌ಸಿಬಿ ಮುಂದಿನ ಪಂದ್ಯವನ್ನು 18 ರಂದು ಪಂಜಾಬ್ ಕಿಂಗ್ಸ್ ಎದುರು ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications