Jitesh Sharma: ಈ ತಂಡವನ್ನು ಮುನ್ನಡೆಸಲು ಸಿದ್ಧರಾಗಿದ್ದಾರೆ ಜಿತೇಶ್ ಶರ್ಮಾ
ಆರ್‌ಸಿಬಿ ತಂಡ ಈ ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದೆ. ಈ ವೇಳೆ ತಂಡದ ಸಂಘಟಿತ ಆಟ ಅಭಿಮಾನಿಗಳ ಮನ ಗೆದ್ದಿದೆ. ಪ್ರತಿ ತಂಡದಲ್ಲೂ ಸ್ಟಾರ್ ಆಟಗಾರರು ತಮ್ಮ ತಮ್ಮ ತಂಡದ ಗೆಲುವುಗಳಲ್ಲಿ ತಮ್ಮದೇ ಆದ ಕಾಣಿಕೆ ನೀಡಿದ್ದಾರೆ. ಇದೇ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪ ಬ್ಯಾಟ್ ಮಾಡಿದ್ದ ವಿಕೆಟ್‌ಕೀಪವರ್ ಬ್ಯಾಟರ್ ಜಿತೇಶ್ ಶರ್ಮಾ ಹೆಗಲಿಗೆ ದೊಡ್ಡ ಜವಾಬ್ದಾರಿಯೊಂದು ಏರಲಿದೆ.
ಐಪಿಎಲ್ ಮುಗಿದಿವೆ. ಈಗ ಬೇರೆ ಬೇರೆ ರಾಜ್ಯಗಳಲ್ಲಿ ಆಯಾ ರಾಜ್ಯಗಳ ಪ್ರೋ ಲೀಗ್ ಆರಂಭವಾಗಿವೆ. ಈ ವೇಳೆ ವಿದರ್ಭ ಸಹ ಪ್ರೊ ಟಿ20 ಲೀಗ್ ಆರಂಭವಾಗಲಿದೆ. ಈ ವೇಳೆ ಜಿತೇಶ್ ಶರ್ಮಾ ನೆಕೊ ಮಾಸ್ಟರ್ ಬ್ಲಾಸ್ಟರ್ ತಂಡವನ್ನು ಮುನ್ನಡೆಸಲಿದ್ದಾರೆ. ಸಂಜಯ್ ರಾಮಸ್ವಾಮಿ ಈ ತಂಡದ ಉಪನಾಯಕರಾಗಿದ್ದಾರೆ. ಜಿತೇಶ್ ಶರ್ಮಾ ಅವರಿಗೆ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಈಗ ಇವರು ವಿದರ್ಭ ಪ್ರೊ ಟಿ20 ಲೀಗ್‌ನಲ್ಲಿ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಜಿತೇಶ್ ಶರ್ಮಾ ಅವರ ಮುಂದಾಳತ್ವದ ತಂಡ ಇದೇ 6 ರಂದು ಭಾರತ್ ರೇಂಜರ್ಸ್ ವಿರುದ್ಧ ತನ್ನ ಲೀಗ್ ಹಂತದ ಮೊದಲ ಪಂದ್ಯವನ್ನು ಆಡಲಿದೆ. ಈ ಪಂದ್ಯ ಮಧ್ಯಾಹ್ನ 2.45ಕ್ಕೆ ಆರಂಭವಾಗಲಿದೆ. ವಿದರ್ಭ ಪ್ರೊ ಟಿ20 ಲೀಗ್ ಜಿಯೋಸಿನಿಮಾ, ಫ್ಯಾನ್‌ಕೋಡ್ ಮತ್ತು ವೇವ್ಸ್‌ನಲ್ಲಿ ನೇರ ಪ್ರಸಾರಕ್ಕೆ ಲಭ್ಯವಿರುತ್ತದೆ. ಅಲ್ಲದೆ ಡಿಡಿ ಸ್ಪೋರ್ಟ್ಸ್‌ನಲ್ಲಿ ಪಂದ್ಯಗಳ ನೇರ ಪ್ರಸಾರವನ್ನು ಸಹ ವೀಕ್ಷಿಸಬಹುದು.
ಜಿತೇಶ್ ಪ್ರದರ್ಶನ
ಪ್ರಸಕ್ತ ಐಪಿಎಲ್‌ನಲ್ಲಿ ಜಿತೇಶ್ ಶರ್ಮಾ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಜಿತೇಶ್ ಶರ್ಮಾ ಕ್ಲಾಸಿಕ್ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಈ ಪಂದ್ಯ ಆರ್‌ಸಿಬಿ ಮಹತ್ವದಾಗಿತ್ತು. ಈ ಪಂದ್ಯದಲ್ಲಿ ಜಿತೇಶ್ ಶರ್ಮಾ 85 ರನ್ ಬಾರಿಸಿದರು. ಇವರ ಬಿರುಸಿನ ಬ್ಯಾಟಿಂಗ್ ಫಲವಾಗಿ ಆರ್‌ಸಿಬಿ ಮೊದಲ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು. ಇನ್ನು ಜಿತೇಶ್ ಶರ್ಮಾ ತಮ್ಮ ಉಪಯುಕ್ತ ಕಾಣಿಕೆಯನ್ನು ನೀಡುತ್ತಲೇ ಇದ್ದಾರೆ.

ನಿಕೋ ಮಾಸ್ಟರ್ ಬ್ಲಾಸ್ಟರ್ಸ್ ತಂಡ: ಜಿತೇಶ್ ಶರ್ಮಾ, ಆರ್ ಸಂಜಯ್, ಆರ್ಯನ್ ಮೆಶ್ರಮ್, ಅಡ್ಯಾನ್ ದಗಾ, ಆದ್ಯಾನ್ ರೌತಮ್, ಆಕಾಶ್ ಕೊಮ್ಡೆ, ವೇದಾಂತ್ ದಿಘಡೆ, ಗೌರವ್ ಧೋಬ್ಲೆ, ಅಂಕುಶ್ ತಮ್ಮಿವಾರ್, ಆದಿತ್ಯ ಖಿಲೋಟೆ, ಆರ್ಯ ದುರುಗ್ಕರ್, ಪ್ರಥಮ್ ಮಹೇಶ್ವರಿ, ಪ್ರಫುಲ್ ಹಿಂಗೆ, ಅನಾಮಯ್ ಜೈಸ್ವಾಲ್, ಸಾರ್ಥಕ್ ದೇಶ್ಕರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications