ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಇಂಗ್ಲೆಂಡ್‌ನ ಜೋ ಡೆನ್ಲಿ ಹೊರಕ್ಕೆ

ಸೌತಾಂಪ್ಟನ್, ಆಗಸ್ಟ್ 1: ಐರ್ಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋ ಡೆನ್ಲಿ ಹೊರ ಬಿದ್ದಿದ್ದಾರೆ. ಅಭ್ಯಾಸದ ವೇಳೆ ಬೆನ್ನು ನೋವಿಗೀಡಾಗಿದ್ದರಿಂದ ಡೆನ್ಲಿ ರಾಯಲ್ ಲಂಡನ್ ಸರಣಿಯಲ್ಲಿ ಆಡುತ್ತಿಲ್ಲ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ತಿಳಿಸಿದೆ.
34ರ ಹರೆಯದ ಜೋ ಡೆನ್ಲಿ ಬದಲಿಗೆ ಲಾ್ಯನ್ಸೆಶೈರ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಅವರನ್ನು 14 ಮಂದಿಯ ಇಂಗ್ಲೆಂಡ್ ತಂಡಕ್ಕೆ ಕರೆತರಲಾಗಿದೆ. ಇನ್ನುಳಿದ ಎರಡು ಪಂದ್ಯಗಳಿಗಾಗಿ ಲಿವಿಂಗ್‌ಸ್ಟೋನ್ ತಂಡದಲ್ಲಿ ಲಭ್ಯರಿರಲಿದ್ದಾರೆ. ಇಂಗ್ಲೆಂಡ್-ಐರ್ಲೆಂಡ್ ದ್ವಿತೀಯ ಏಕದಿನ ಪಂದ್ಯ ಶನಿವಾರ (ಆಗಸ್ಟ್ 1) 6:30 PMಕ್ಕೆ ಆರಂಭವಾಗಲಿದೆ.
'ಅಭ್ಯಾಸದ ವೇಳೆ ಬೆನ್ನು ನೋವಿಗೆ ತುತ್ತಾಗಿದ್ದರಿಂದ ಐರ್ಲೆಂಡ್ ವಿರುದ್ಧದ ರಾಯಲ್ ಲಂಡನ್ ಸರಣಿಯಿಂದ ಜೋ ಡೆನ್ಲಿ ಹೊರ ಬಿದ್ದಿದ್ದಾರೆ. ಕೆಂಟ್ ಬ್ಯಾಟ್ಸ್‌ಮನ್ ಬದಲಿಗೆ ಲ್ಯಾನ್ಸೆಶೈರ್‌ನ ಲಿಯಾಮ್ ಲಿವಿಂಗ್‌ಸ್ಟೋನ್ ಅವರು 14 ಮಂದಿಯ ಇಂಗ್ಲೆಂಡ್ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ,' ಎಂದು ಇಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಇಂಗ್ಲೆಂಡ್‌ಗೆ ಪ್ರವಾಸ ಬಂದಿರುವ ಐರ್ಲೆಂಡ್, ಮೊದಲ ಏಕದಿನ ಪಂದ್ಯದಲ್ಲಿ 6 ವಿಕೆಟ್‌ಗಳ ಸೋಲನುಭವಿಸಿತ್ತು. ಇಂಗ್ಲೆಂಡ್‌ನ ಎಡಗೈ ಮಧ್ಯಮ ವೇಗಿ ಡೇವಿಡ್ ವಿಲ್ಲಿಯ ಮಾರಕ ಬೌಲಿಂಗ್‌ನಿಂದಾಗಿ (30 ರನ್‌ಗೆ 5 ವಿಕೆಟ್) ಆಂಗ್ಲ ತಂಡ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications