ರೂಟ್ ಹಾಗೂ ವಿಲಿಯಮ್ಸನ್ ಅವರನ್ನು ಸ್ಮಿತ್ ಹಾಗೂ ಕೊಹ್ಲಿಗೆ ಹೋಲಿಸಬೇಡಿ: ಗೌತಮ್ ಗಂಭೀರ್

ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಸತತ ಮೂರು ಟೆಸ್ಟ್ ಪಂದ್ಯಗಳಲ್ಲಿ ಶತಕವನ್ನು ಬಾರಿಸಿ ಮಿಂಚಿದ್ದಾರೆ. ಅದರಲ್ಲಿ ಎರಡು ಭರ್ಜರಿ ದ್ವಿಶತಕಗಳಾಗಿದೆ. ಹೀಗಾಗಿ ರೂಟ್ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಪ್ರತಿಕ್ರಿಯಿಸಿದ್ದಾರೆ.
ಇಂಗ್ಲೆಂಡ್ ನಾಯಕ ಜೋ ರೂಟ್ ಅದ್ಭುತವಾಗಿ ಪ್ರದರ್ಶನ ನಿಡುತ್ತಿದ್ದಾರೆ. ಜೋ ರೂಟ್ ಹಾಗೂ ಕೇನ್ ವಿಲಿಯಮ್ಸನ್ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್‌ನ ಕಠಿಣವಾದ ಪರಿಸ್ಥಿತಿಯಲ್ಲಿ ಆಡುತ್ತಾರೆ. ಈ ಆಟಗಾರರು ಭಾರತ ಹಾಗೂ ಆಸ್ಟ್ರೇಲಿಯಾದಲ್ಲೂ ತಮ್ಮ ಪರವಾಗರುವಂತೆ ಪ್ರದರ್ಶನವನ್ನು ನಿಡುತ್ತಾರೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ರೂಟ್, ವಿಲಿಯಮ್ಸನ್ ಹೊಗಳಿದ ಗಂಭೀರ್
ಇಂಗ್ಲೆಂಡ್ ನಾಯಕ ಜೋ ರೂಟ್ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಅವರನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಆಟಗಾರ ಸ್ಟೀವ್ ಸ್ಮಿತ್ ಅವರೊಂದಿಗೆ ಹೋಲಿಸಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಇಂಗ್ಲೆಂಡ್ ನ್ಯೂಜಿಲೆಂಡ್‌ನಲ್ಲಿ ಆಡುವುದು ಕಠಿಣ
"ಡ್ಯೂಕ್ ಬಾಲ್‌ಗಳಲ್ಲಿ ಆಡಲು ಇಂಗ್ಲೆಂಡ್ ಅತ್ಯಂತ ಕಠಿಣವಾದ ಸ್ಥಳ. ವೇಗವಾಗಿ ಸ್ವಿಂಗ್ ಆಗುವ ಎಸೆತಗಳನ್ನು ನ್ಯೂಜಿಲೆಂಡ್‌ನಲ್ಲಿಯೂ ಎದುರಿಸುವುದು ಸುಲಭವಲ್ಲ. ಭಾರತೀಯ ಉಪಖಂಡ ಅಥವಾ ಆಸ್ಟ್ರೇಲಿಯಾದಲ್ಲಿ ಪಿಚ್‌ಗಳು ಫ್ಲ್ಯಾಟ್ ಆಗಿರುತ್ತದೆ. ಆದರೆ ಇಂಗ್ಲೆಂಡ್‌ನಲ್ಲಿ ಫ್ಯಾಟ್ ಆಗಿರುವುದಿಲ್ಲ, ವಿಶೇಷವಾಗಿ ಡ್ಯೂಕ್ ಚೆಂಡುಗಳಲ್ಲಿ" ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.

ಭಾರತೀಯ ಪಿಚ್‌ನಲ್ಲಿ ರೂಟ್ ಉತ್ತಮ ಆಟ
"ಕಂಡೀಶನ್‌ನ ಕಾರಣದಿಂದಾಗಿ ವಿರಾಟ್ ಕೊಹ್ಲಿ ಅಥವಾ ಸ್ಟೀವ್ ಸ್ಮಿತ್ ಅವರನ್ನು ನೀವು ಜೋ ರೂಟ್ ಅಥವಾ ಕೇನ್ ವಿಲಿಯಮ್ಸನ್ ಅವರೊಂದಿಗೆ ಹೋಲಿಸಬಾರದು. ಭಾರತೀಯ ಪಿಚ್‌ನಲ್ಲಿ ಜೋ ರೂಟ್ ಪ್ರದರ್ಶನದತ್ತ ನೀವು ಗಮನಹರಿಸಿ. ವಿರಾಟ್ ಕೊಹ್ಲಿ ಇಂಗ್ಲೆಂಡ್ ಅಥವಾ ನ್ಯೂಜಿಲೆಂಡ್ ಪಿಚ್‌ಗಳಲ್ಲಿ ಇಷ್ಟು ರನ್‌ಗಳನ್ನು ಬಾರಿಸಿದರೆ ನೀವು ಯೋಚಿಸಿ. ತಿರುವು ಪಡೆಯುವ ಪಿಚ್‌ಗಳಲ್ಲಿ ನಂಬಲು ಅಸಾಧ್ಯ. ಶ್ರೀಲಂಕಾದಲ್ಲಿ ರುಟ್ ಮಾಡಿದ ಸಾಧನೆಯನ್ನೂ ಮರೆಯುವಂತಿಲ್ಲ" ಎಂದು ಜೋ ರೂಟ್ ಪ್ರದರ್ಶನವನ್ನು ಹಾಡಿ ಹೊಗಳಿದ್ದಾರೆ ಗೌತಮ್ ಗಂಭೀರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications