For Quick Alerts
ALLOW NOTIFICATIONS  
For Daily Alerts
 

Joe Root: ಅರ್ಧಶತಕ ಬಾರಿಸಿ ದಾಖಲೆ ಬರೆದ ಜೋ ರೂಟ್‌: ಮಾರ್ಗನ್ ರೆಕಾರ್ಡ್‌ ಉಡೀಸ್‌

ಚಾಂಪಿಯನ್ಸ್‌ ಟ್ರೋಫಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇವೆ. ಈ ವೇಳೆ ಎಲ್ಲ ತಂಡಗಳು ಈ ಮೆಗಾ ಟೂರ್ನಿಯನ್ನು ಗಮನದಲ್ಲಿಟ್ಟುಕೊಂಡೆ ಪಂದ್ಯಗಳನ್ನು ಆಡುತ್ತಿವೆ. ಹಾಗೂ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಿವೆ. ಇಂಗ್ಲೆಂಡ್ ಸಹ ಈ ನಿಟ್ಟಿನಲ್ಲಿ ಇಂತಹದ್ದೇ ಪ್ರಯತ್ನವನ್ನು ಮಾಡಿದೆ. ಭಾರತದಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ ಬಳಿಕ ಏಕದಿನ ಪಂದ್ಯಗಳನ್ನೇ ಆಡಿರದ ಜೋ ರೂಟ್‌ ಅವರಿಗೆ ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ತಮಗೆ ಮ್ಯಾನೇಜ್ಮೆಂಟ್‌ ನೀಡಿರುವ ಅವಕಾಶ ಸರಿಯಾಗಿದೆ ಎಂದು ತೋರಿಸಿದ್ದಾರೆ.

ಇಂಗ್ಲೆಂಡ್ ಭಾರತದಲ್ಲಿ ಏಕದಿನ ಸರಣಿಗಳನ್ನು ಆಡುತ್ತಿದೆ. ಎರಡನೇ ಪಂದ್ಯಕ್ಕೆ ಕಟಕ್‌ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್‌ ಜೋ ರೂಟ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ತಮ್ಮ ನೈಜ ಶೈಲಿಯಲ್ಲಿ ಬ್ಯಾಟ್ ಮಾಡಿದ ರೂಟ್‌ ಅಬ್ಬರಿಸಿದರು. ಮೊದಲ ಪಂದ್ಯದಲ್ಲಿ ರನ್‌ ಕಲೆ ಹಾಕುವಲ್ಲಿ ಕೊಂಚ ಹಿಂದೆ ಬಿದ್ದಿದ್ದ ರೂಟ್‌ ಎರಡನೇ ಏಕದಿನ ಪಂದ್ಯದಲ್ಲಿ ಫಾರ್ಮ್‌ ಕಂಡುಕೊಂಡರು.

Joe Root Breaks Eoin Morgan s Record for Most 50 Scores in England s ODI History

ರೂಟ್ ದೊಡ್ಡ ಸಾಧನೆ

ಬಾರಮತಿ ಸ್ಟೇಡಿಯಂನಲ್ಲಿ ಜೋ ರೂಟ್ ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅರ್ಧಶತಕ ಗಳಿಸುವ ಮೂಲಕ ದಾಖಲೆ ನಿರ್ಮಿಸಿದರು. ಇಂಗ್ಲೆಂಡ್‌ ಪರ 50ಕ್ಕೂ ಹೆಚ್ಚು ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡರು. ಈ ಮೂಲಕ ರೂಟ್‌ ಇಯಾನ್‌ ಮಾರ್ಗನ್‌ ಅವರ ದಾಖಲೆಯನ್ನು ಮುರಿದರು. ಮಾರ್ಗನ್‌ 55 ಬಾರಿ 50ಕ್ಕೂ ಹೆಚ್ಚು ರನ್‌ಗಳನ್ನು ಬಾರಿಸಿದ್ದರು. ಕಟಕ್‌ನಲ್ಲಿ ರೂಟ್‌ ಅರ್ಧಶತಕ ಬಾರಿಸುತ್ತಿದ್ದಂತೆ ಈ ದಾಖಲೆಯನ್ನು ಅಳಿಸಿ ಹಾಕಿದರು. ಏಕದಿನ ಪಂದ್ಯಗಳಲ್ಲಿ ಜೋ ರೂಟ್ 40 ಅರ್ಧಶತಕಗಳನ್ನು ಗಳಿಸುವುದರ ಜೊತೆಗೆ, 16 ಶತಕಗಳನ್ನು ಸಿಡಿಸಿದ್ದಾರೆ.

ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಕಲೆ ಹಾಕಿದ ಆಟಗಾರರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಇಯಾನ್ ಬೆಲ್ (39) ಇದ್ದು ನಂತರದ ಸ್ಥಾನಗಳಲ್ಲಿ ಜೋಸ್ ಬಟ್ಲರ್ (38), ಕೆವಿನ್ ಪೀಟರ್ಸನ್‌ (34) ಇದ್ದಾರೆ.

Joe Root Breaks Eoin Morgan s Record for Most 50 Scores in England s ODI History

ಭಾನುವಾರ ನಡೆದ ಪಂದ್ಯದಲ್ಲಿ ಜೋ ರೂಟ್‌ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಇವರು ಆಡಿದ 72 ಎಸೆತಗಳಲ್ಲಿ 6 ಬೌಂಡರಿ ನೆರವಿನಿಂದ 69 ರನ್‌ ಸಿಡಿಸಿದರು. ಇವರು ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಲಯ ಕಂಡುಕೊಂಡಿರುವುದು ನಿಜಕ್ಕೂ ಇಂಗ್ಲೆಂಡ್ ತಂಡದ ಮನೋಬಲವನ್ನು ಹೆಚ್ಚಿಸಿದೆ.

ರೂಟ್ ಸಾಧನೆ

ರೂಟ್‌ ಇಂಗ್ಲೆಂಡ್ ತಂಡದ ಅನುಭವಿ ಬ್ಯಾಟರ್‌. ಇವರು ಇತ್ತೀಚಿನ ದಿನಗಳಲ್ಲಿ ಟೆಸ್ಟ್‌ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದರು. ಆದರೆ ಈಗ ಏಕದಿನ ಕ್ರಿಕೆಟ್‌ಗೂ ಭರ್ಜರಿಯಾಗಿ ಕಂ ಬ್ಯಾಕ್ ಮಾಡಿದ್ದಾರೆ. ಇವರು ಆಡಿದ 173 ಏಕದಿನ ಪಂದ್ಯಗಳಲ್ಲಿ 47ರ ಸರಾಸರಿಯಲ್ಲಿ 6610 ರನ್‌ ಸಿಡಿಸಿದ್ದಾರೆ. ಇದರಲ್ಲಿ 16 ಶತಕ ಹಾಗೂ 40 ಅರ್ಧಶತಕಗಳು ಸೇರಿವೆ.

Story first published: Sunday, February 9, 2025, 19:31 [IST]
Other articles published on Feb 9, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+