WTC: ಜೋ ರೂಟ್ ಅತಿ ಹೆಚ್ಚು ಬಾರಿ ಡಕ್ ಔಟ್; ಕೊಹ್ಲಿ, ಸ್ಮಿತ್ ರೆಕಾರ್ಡ್ ಬ್ರೇಕ್!
ವಿಶ್ವ ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ವೇಗವಾಗಿ ಮುನ್ನುಗುತ್ತಿದ್ದಾರೆ. ಪ್ರಸ್ತಕ ಸಾಲಿನಲ್ಲಿ ಶತಕದ ಮೇಲೆ ಶತಕ ಸಿಡಿಸಿ ಜೋ ರೂಟ್ ಹಲವು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದೀಗ ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ತಮ್ಮ ವೃತ್ತಿಜೀವನದಲ್ಲಿ ಮಹತ್ವದ ಸಾಧನೆ ಮಾಡಿದ್ದಾರೆ. ರೂಟ್ ತನ್ನ 150ನೇ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಆದರೆ ಕಿವೀಸ್ ವೇಗಿ ನಾಥನ್ ಸ್ಮಿತ್ ಬೌಲಿಂಗ್‌ನಲ್ಲಿ ನಾಲ್ಕು ಎಸೆತಗಳ ನಂತರ ಡಕ್ ಔಟಾಗುವ ಮೂಲಕ ಅನಗತ್ಯ ದಾಖಲೆ ಮಾಡಿದ್ದಾರೆ.
ಜೋ ರೂಟ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 13 ಬಾರಿ ಶೂನ್ಯಕ್ಕೆ ವಿಕೆಟ್ ಕಳೆದುಕೊಂಡಿದ್ದಾರೆ. ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಯೂಟಿಸಿ) ಇತಿಹಾಸದಲ್ಲಿ ಅವರ 8 ಬಾರಿ ಡಕ್ ಔಟಾಗಿದ್ದಾರೆ. ಈ ಮೂಲಕ ಡಬ್ಯೂಟಿಸಿಯಲ್ಲಿ ಭಾರತದ ವಿರಾಟ್ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. ಡಬ್ಯೂಟಿಸಿಯಲ್ಲಿ ಸ್ಮಿತ್ ಮತ್ತು ಕೊಹ್ಲಿ 7 ಬಾರಿ ಡಕ್ ಔಟ್‌ಗೆ ಬಲಿಯಾಗಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಜೋ ರೂಟ್ ತಮ್ಮ ಕಳಪೆ ಫಾರ್ಮ್ ಅನ್ನು ಮುಂದುವರೆಸಿದ್ದಾರೆ. ಅವರು ತಮ್ಮ ಕೊನೆಯ ಐದು ಇನ್ನಿಂಗ್ಸ್‌ಗಳಲ್ಲಿ ಕೇವಲ 90 ರನ್ ಗಳಿಸಿದ್ದಾರೆ. ತನ್ನ 150ನೇ ಟೆಸ್ಟ್ ಪಂದ್ಯದಲ್ಲಿ ಡಕ್ ಔಟ್ ಆಗುವ ಮೂಲಕ ರೂಟ್ ವಿಶೇಷ ಕ್ಲಬ್‌ಗೆ ಸೇರಿದ್ದಾರೆ. 150ನೇ ಟೆಸ್ಟ್ ಪಂದ್ಯದಲ್ಲಿ ಡಕ್ ಔಟಾಗಿರುವ ಮಾಜಿ ಆಸ್ಟ್ರೇಲಿಯಾದ ಸ್ಟಾರ್ ಬ್ಯಾಟರ್‌ಗಳಾದ ಸ್ಟೀವ್ ವಾ ಮತ್ತು ರಿಕಿ ಪಾಂಟಿಂಗ್ ಅವರೊಂದಿಗೆ ದಾಖಲೆ ಪಟ್ಟಿಯಲ್ಲಿ ರೂಟ್ ಸ್ಥಾನ ಪಡೆದಿದ್ದಾರೆ.
ನ್ಯೂಜಿಲೆಂಡ್ ತಂಡಕ್ಕೆ ನಾಥನ್ ಸ್ಮಿತ್ ಉತ್ತಮ ಆರಂಭ ನೀಡಿದರು. ಒಂದೇ ಓವರ್‌ನಲ್ಲಿ ಇಂಗ್ಲೆಂಡ್‌ನ ಜಾಕೋಬ್ ಬೆಥೆಲ್ ಮತ್ತು ರೂಟ್ ಅವರನ್ನು ಔಟ್ ಮಾಡಿದರು. ಆದರೂ ಇಂಗ್ಲೆಂಡ್ ಪಂದ್ಯ ಮೇಲೆ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನ್ಯೂಜಿಲೆಂಡ್ ಕಲೆ ಹಾಕಿರುವ 348 ರನ್‌ಗಳಿಗೆ ಉತ್ತರವಾಗಿ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ 5 ವಿಕೆಟ್ ನಷ್ಟಕ್ಕೆ 319 ರನ್ ಗಳಿಸಿದೆ. ಹ್ಯಾರಿ ಬ್ರೂಕ್ ಅಜೇಯ 132 ರನ್ ಮತ್ತು ಬೆನ್ ಸ್ಟೋಕ್ಸ್ ಅಜೇಯ 37 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications