ಜುಲೈ 18 ಗುರುವಾರ, ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತ ತಂಡದ ರಾಹುಲ್ ದ್ರಾವಿಡ್ ಮತ್ತು ವೆಸ್ಟ್ ಇಂಡೀಸ್‌ನ ಬ್ರಿಯಾನ್ ಲಾರಾ ಶ್ರೇಷ್ಠ ಬ್ಯಾಟರ್‌ಗಳಾಗಿ ಉಳಿದಿದ್ದಾರೆ.
ಈ ದಿಗ್ಗಜರು ಟೆಸ್ಟ್ ಕ್ರಿಕೆಟ್‌ನಲ್ಲಿ ಕೆಲವು ದಾಖಲೆಗಳನ್ನು ನಿರ್ಮಿಸಿದ್ದು, ಈ ರೆಕಾರ್ಡ್‌ಗಳನ್ನು ಬ್ರೇಕ್ ಮಾಡಲು ಇನ್ನೂ ಯಾವ ಆಟಗಾರನಿಂದಲ್ಲೂ ಸಾಧ್ಯವಾಗಿಲ್ಲ. ಇದೀಗ 33 ವರ್ಷದ ಇಂಗ್ಲೆಂಡ್ ಸ್ಟಾರ್ ಬ್ಯಾಟರ್ ಜೋ ರೂಟ್ ಈ ಇಬ್ಬರೂ ಶ್ರೇಷ್ಠ ಕ್ರಿಕೆಟಿಗರ ದಾಖಲೆಗಳನ್ನು ಮುರಿಯುವ ತವಕದಲ್ಲಿದ್ದಾರೆ.

ವಾಸ್ತಕವಾಗಿ, ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಸರಣಿಯ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಜೋ ರೂಟ್ ಆಡಿದರೆ ದ್ರಾವಿಡ್ ಮತ್ತು ಲಾರಾ ಅವರ ಶ್ರೇಷ್ಠ ಟೆಸ್ಟ್ ದಾಖಲೆಯನ್ನು ಮುರಿಯಲಿದ್ದಾರೆ.
ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದು, ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಜೋ ರೂಟ್ ಅತಿ ಹೆಚ್ಚು ಟೆಸ್ಟ್ ರನ್‌ಗಳ ವಿಷಯದಲ್ಲಿ ಬ್ರಿಯಾನ್ ಲಾರಾ ಅವರನ್ನು ಮೀರಿಸಲು ಬಹಳ ಹತ್ತಿರವಾಗಿದ್ದಾರೆ.
ಆದರೆ, ಇದಕ್ಕಾಗಿ ಅವರಿಗೆ 150 ರನ್‌ಗಳ ಅಗತ್ಯವಿದೆ. ಈ ರನ್‌ಗಳೊಂದಿಗೆ, ಅವರು ಚಂದ್ರಪಾಲ್ (11867 ರನ್) ಅವರನ್ನು ಹಿಂದಿಕ್ಕಲಿದ್ದಾರೆ. ಬ್ರಿಯಾನ್ ಲಾರಾ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 11953 ರನ್ ಗಳಿಸಿದ್ದಾರೆ. ಈ ಪಂದ್ಯಕ್ಕೂ ಮುನ್ನ ಜೋ ರೂಟ್ 141 ಟೆಸ್ಟ್‌ಗಳಲ್ಲಿ 258 ಇನ್ನಿಂಗ್ಸ್‌ಗಳಲ್ಲಿ 11804 ರನ್ ಗಳಿಸಿದ್ದಾರೆ.
ಬ್ರಿಯಾನ್ ಲಾರಾ ಮಾತ್ರವಲ್ಲ, ಭಾರತದ ದಿಗ್ಗಜ ರಾಹುಲ್ ದ್ರಾವಿಡ್ ಅವರನ್ನು ರೂಟ್ ಹಿಂದಿಕ್ಕುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ಎರಡೂ ಇನಿಂಗ್ಸ್‌ಗಳಲ್ಲಿ ರೂಟ್‌ಗೆ ಬ್ಯಾಟಿಂಗ್ ಅವಕಾಶ ಪಡೆಯುವುದು ಅಗತ್ಯವಾಗಿದ್ದು, ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಗಳಿಸುವುದು ಅನಿವಾರ್ಯವಾಗಿದೆ.
ಇದು ಸಾಧ್ಯವಾದರೆ, ದ್ರಾವಿಡ್ ಅವರ ಟೆಸ್ಟ್‌ನಲ್ಲಿ ಅರ್ಧಶತಕಗಳ ಸಂಖ್ಯೆಯಲ್ಲಿ ರೂಟ್ ಅವರನ್ನು ಮೀರಿಸಬಹುದು. ರಾಹುಲ್ ದ್ರಾವಿಡ್ ಟೆಸ್ಟ್‌ನಲ್ಲಿ 63 ಅರ್ಧಶತಕಗಳನ್ನು ಗಳಿಸಿದ್ದಾರೆ. ಜೋ ರೂಟ್ ತಮ್ಮ ಹೆಸರಿನಲ್ಲಿ ಟೆಸ್ಟ್‌ನಲ್ಲಿ 62 ಅರ್ಧ ಶತಕಗಳನ್ನು ಹೊಂದಿದ್ದಾರೆ.
ಈ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಅರ್ಧಶತಕಗಳನ್ನು ಗಳಿಸುವುದರೊಂದಿಗೆ ಅಲನ್ ಬಾರ್ಡರ್ (63) ಅವರ ದಾಖಲೆಯನ್ನು ಬ್ರೇಕ್ ಮಾಡಲು ರೂಟ್‌ಗೆ ಅವಕಾಶವಿದೆ.