ಇಂಗ್ಲೆಂಡ್ ನಾಯಕನಾಗಿ ಹೊಸ ದಾಖಲೆ ನಿರ್ಮಿಸಿದ ಜೋ ರೂಟ್

ಲೀಡ್ಸ್: ಇಂಗ್ಲೆಂಡ್ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗಿ ಜೋ ರೂಟ್ ಹೊಸ ದಾಖಲೆ ನಿರ್ಮಿಸಿದ್ದಾರೆ. ಲೀಡ್ಸ್‌ನ ಹೆಡಿಂಗ್ಲಿ ಸ್ಟೇಡಿಯಂನಲ್ಲಿ ಶನಿವಾರ (ಆಗಸ್ಟ್ 28) ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ತೃತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಇನ್ನಿಂಗ್ಸ್ ಸಹಿತ 76 ರನ್ ಜಯ ಗಳಿಸಿತ್ತು. ಈ ಪಂದ್ಯದ ಗೆಲುವಿನೊಂದಿಗೆ ರೂಟ್ ಹೆಸರಿಗೆ ದಾಖಲೆ ಸೇರ್ಪಡೆಯಾಗಿದೆ.
ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕರಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ವಿಶೇಷ ದಾಖಲೆ ಪಟ್ಟಿಯಲ್ಲಿ ಜೋ ರೂಟ್ ಮೊದಲ ಸ್ಥಾನಕ್ಕೇರಿದ್ದಾರೆ. ಶನಿವಾರದ ಪಂದ್ಯದೊಂದಿಗೆ ಭಾರತ-ಇಂಗ್ಲೆಂಡ್ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಇತ್ತಂಡಗಳು 1-1ರ ಸಮಬಲ ಸಾಧಿಸಿವೆ.
ಇಂಗ್ಲೆಂಡ್ ನಾಯಕರಾಗಿ ಹೆಚ್ಚು ಪಂದ್ಯಗಳನ್ನು ಗೆದ್ದ ದಾಖಲೆ ಪಟ್ಟಿ
27 ಪಂದ್ಯಗಳಲ್ಲಿ ಜಯ, ಜೋ ರೂಟ್ (55 ಟೆಸ್ಟ್ ಪಂದ್ಯಗಳು)
26 ಪಂದ್ಯಗಳಲ್ಲಿ ಜಯ, ಮೈಕೆಲ್ ವಾನ್ (51 ಟೆಸ್ಟ್ ಪಂದ್ಯಗಳು)
24 ಪಂದ್ಯಗಳಲ್ಲಿ ಜಯ, ಆಂಡ್ರ್ಯೂ ಸ್ಟ್ರಾಸ್ (50 ಟೆಸ್ಟ್ ಪಂದ್ಯಗಳು)
24 ಪಂದ್ಯಗಳಲ್ಲಿ ಜಯ, ಅಲಸ್ಟೇರ್ ಕುಕ್ (59 ಟೆಸ್ಟ್ ಪಂದ್ಯಗಳು)
20 ಪಂದ್ಯಗಳಲ್ಲಿ ಜಯ, ಪೀಟರ್ ಮೇ (41 ಟೆಸ್ಟ್ ಪಂದ್ಯಗಳು)
ಇತ್ತಂಡಗಳ ಸ್ಕೋರ್‌ಕಾರ್ಡ್
ತೃತೀಯ ಟೆಸ್ಟ್‌ನ ಆರಂಭಿಕ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 19, ಚೇತೇಶ್ವರ ಪೂಜಾರ 1, ವಿರಾಟ್ ಕೊಹ್ಲಿ 7, ಅಜಿಂಕ್ಯ ರಹಾನೆ 18, ರಿಷಭ್ ಪಂತ್ 2, ರವೀಂದ್ರ ಜಡೇಜಾ 4, ಇಶಾಂತ್ ಶರ್ಮಾ 8, ಮೊಹಮ್ಮದ್ ಸಿರಾಜ್ 3 ರನ್‌ನೊಂದಿಗೆ ಭಾರತ 40.4 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 78 ರನ್ ಗಳಿಸಿತ್ತು. ಇಂಗ್ಲೆಂಡ್ ಪ್ರಥಮ ಇನ್ನಿಂಗ್ಸ್‌ನಲ್ಲಿ ರೋರಿ ಬರ್ನ್ಸ್ 61, ಹಸೀಬ್ ಹಮೀದ್ 68, ಡೇವಿಡ್ ಮಲನ್ 70, ಜೋ ರೂಟ್ 121, ಜಾನಿ ಬೈರ್‌ಸ್ಟೊ 29, ಜೋಸ್ ಬಟ್ಲರ್ 7, ಮೊಯೀನ್ ಅಲಿ 8, ಸ್ಯಾಮ್ ಕರನ್ 15, ಕ್ರೇಗ್ ಓವರ್‌ಟನ್ 32 ರನ್ ನೊಂದಿಗೆ 132.2 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 432 ರನ್ ಬಾರಿಸಿತ್ತು. ಭಾರತ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ 59, ಕೆಎಲ್ ರಾಹುಲ್ 8, ಚೇತೇಶ್ವರ ಪೂಜಾರ 91, ವಿರಾಟ್ ಕೊಹ್ಲಿ 55, ಅಜಿಂಕ್ಯ ರಹಾನೆ 10, ರಿಷಭ್ ಪಂತ್ 1, ರವೀಂದ್ರ ಜಡೇಜಾ 30, ಮೊಹಮ್ಮದ್ ಶಮಿ 6, ಇಶಾಂತ್ ಶರ್ಮಾ 2, ಜಸ್ಪ್ರೀತ್ ಬೂಮ್ರಾ 1 ರನ್‌ನೊಂದಿಗೆ ಭಾರತ 99.3 ಓವರ್‌ಗೆ ಎಲ್ಲಾ ವಿಕೆಟ್ ಕಳೆದು 278 ರನ್ ಗಳಿಸಿ ಸೋಲೊಪ್ಪಿಕೊಂಡಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications