Joe Root: ಇಂಗ್ಲೆಂಡ್ ಪರ ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿ ಜೋ ರೂಟ್ ರೆಕಾರ್ಡ್
ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಬುಧವಾರ ಟೆಸ್ಟ್ ಕ್ರಿಕೆಟ್‌ನಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದರೊಂದಿಗೆ ಇಂಗ್ಲೆಂಡ್ ತಂಡದ ಮಾಜಿ ನಾಯಕ ಅಲಸ್ಟೈರ್ ಕುಕ್ ದಾಖಲೆಯನ್ನೂ ರೂಟ್ ಮುರಿದ್ದಾರೆ.
ಮುಲ್ತಾನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಈ ದಾಖಲೆ ಸೃಷ್ಟಿಸಿದ್ದಾರೆ. ಪಂದ್ಯದ ಮೂರನೇ ದಿನದ ಊಟದ ವಿರಾಮದ ಮೊದಲು ಬೌಂಡರಿ ಬಾರಿಸುವ ಮೂಲಕ ರೂಟ್ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ರೂಟ್ ತಮ್ಮ 147ನೇ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ಕುಕ್ ಅವರ ದಾಖಲೆಯನ್ನು ಮುರಿಯಲು, ಅವರಿಗೆ ಮೊದಲ ಟೆಸ್ಟ್‌ನಲ್ಲಿ 71 ರನ್‌ಗಳ ಅಗತ್ಯವಿತ್ತು. ಅವರು ಈ ಗುರಿಯನ್ನು ಸುಲಭವಾಗಿ ಮೊದಲ ಇನ್ನಿಂಗ್ಸ್‌ನಲ್ಲಿಯೇ ಮುಟ್ಟಿದ್ದಾರೆ. ಇದೀಗ ಪಾಕಿಸ್ತಾನ ವಿರುದ್ಧ ಮೊದಲ ಟೆಸ್ಟ್ ಆಡುತ್ತಿರುವ ರೂಟ್ ಅಜೇಯ 86 ರನ್ ಗಳಿಸಿದ್ದು, ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ 12,488 ರನ್ ಕಲೆ ಹಾಕಿದ್ದಾರೆ. ಕುಕ್ ಇಂಗ್ಲೆಂಡ್ ಪರ 161 ಟೆಸ್ಟ್ ಪಂದ್ಯಗಳಲ್ಲಿ 12472 ರನ್ ಗಳಿಸಿದ್ದಾರೆ.
ರೂಟ್ ಮತ್ತು ಕುಕ್ ನಂತರ, ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳಾಗಿ ಗ್ರಹಾಂ ಗೂಚ್ (8900) ಮೂರನೇ ಸ್ಥಾನದಲ್ಲಿದ್ದಾರೆ. ಅಲೆಕ್ ಸ್ಟೀವರ್ಟ್ (8463) ಮತ್ತು ಡೇವಿಡ್ ಗೋವರ್ (8231) ಅವರು ಕ್ರಮವಾಗಿ ನಾಲ್ಕು ಹಾಗು ಐದನೇ ಸ್ಥಾನದಲ್ಲಿದ್ದಾರೆ. ಆರನೇ ಸ್ಥಾನದಲ್ಲಿ ಕೆವಿನ್ ಪೀಟರ್ಸನ್ (8181) ಇದ್ದಾರೆ.
ಐದನೇ ಸ್ಥಾನ ತಲುಪಿದ ರೂಟ್
ಕುಕ್ ದಾಖಲೆಯನ್ನು ಮುರಿಯುವ ಮೂಲಕ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ತಲುಪಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಅವರು 200 ಪಂದ್ಯಗಳಲ್ಲಿ 15,921 ರನ್ ಗಳಿಸಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಜಾಕ್ವೆಸ್ ಕಾಲಿಸ್ ಮತ್ತು ಭಾರತದ ರಾಹುಲ್ ದ್ರಾವಿಡ್ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.
ರೂಟ್ ನಿಧಾನವಾಗಿ ಸಚಿನ್ ತೆಂಡೂಲ್ಕರ್ ಅವರ ದಾಖಲೆಯತ್ತ ಸಾಗುತ್ತಿದ್ದು, ಮುಂದಿನ ಕೆಲವು ವರ್ಷಗಳವರೆಗೆ ಅವರು ಇದೇ ರೀತಿ ಫಾರ್ಮ್ ಉಳಿಸಿಕೊಂಡು ಆಟವಾಡಿದರೆ, ಅವರು ಖಂಡಿತವಾಗಿಯೂ ಕ್ರಿಕೆಟ್ ದೇವರ ದಾಖಲೆಯನ್ನು ಮುರಿಯಲಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು
- ಸಚಿನ್ ತೆಂಡೂಲ್ಕರ್ (ಭಾರತ) - 15,921 ರನ್
- ರಿಕಿ ಪಾಂಟಿಂಗ್ (ಆಸ್ಟ್ರೇಲಿಯಾ) - 13,378 ರನ್
- ಜಾಕ್ವೆಸ್ ಕಾಲಿಸ್ (ದಕ್ಷಿಣ ಆಫ್ರಿಕಾ) - 13,289 ರನ್
- ರಾಹುಲ್ ದ್ರಾವಿಡ್ (ಭಾರತ) - 13,288 ರನ್
- ಜೋ ರೂಟ್ (ಇಂಗ್ಲೆಂಡ್) - 12,473* ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications