Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಭಾರತ vs ಇಂಗ್ಲೆಂಡ್: ವಿಶ್ವದಾಖಲೆ ಬರೆದ ಇಂಗ್ಲೆಂಡ್‌ನ ಜೋ ರೂಟ್

Joe Root is the first cricketer to score a century in his 98th, 99th and 100th Test

ಚೆನ್ನೈ: ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಭಾರತ ವಿರುದ್ಧ ವಿಶೇಷ ದಾಖಲೆ ಬರೆದಿದ್ದಾರೆ. ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್ ಪಂದ್ಯದಲ್ಲಿ‌ ರೂಟ್ ಈ ಸಾಧನೆ ತೋರಿದ್ದಾರೆ. ಇದೇ ಪಂದ್ಯದಲ್ಲಿ ರೂಟ್‌ ಹಲವಾರು ದಾಖಲೆಗಳಿಗೆ ಕಾರಣರಾಗಿದ್ದಾರೆ.

ತಾನಾಡಿದ 98ನೇ, 99ನೇ ಮತ್ತು 100ನೇ ಟೆಸ್ಟ್ ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ಮೊದಲನೇ ಕ್ರಿಕೆಟರ್‌ ಆಗಿ ಜೋ ರೂಟ್ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೊದಲನೇ ಟೆಸ್ಟ್‌ನ ಮೊದಲನೇ ಇನ್ನಿಂಗ್ಸ್‌ನಲ್ಲಿ ಶುಕ್ರವಾರ ದಿನದಾಟದ ಅಂತ್ಯಕ್ಕೆ ರೂಟ್ 128 ರನ್ ಬಾರಿಸಿ ಆಡುತ್ತಿದ್ದರು.

100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಕೆಲವೇ ಕೆಲವು ಮಂದಿಯಲ್ಲಿ ರೂಟ್‌ ಕೂಡ ಸೇರಿಕೊಂಡಿದ್ದಾರೆ. ಇಂಗ್ಲೆಂಡ್‌ನ ಕಾಲಿನ್ ಕೌಡ್ರೆ, ಪಾಕಿಸ್ತಾನದ ಜಾವೆದ್ ಮಿಯಾಂದಾದ್, ವೆಸ್ಟ್ ಇಂಡೀಸ್‌ನ ಗಾರ್ಡನ್, ಇಂಗ್ಲೆಂಡ್‌ನ ಅಲೆಕ್ ಸ್ಟೀವರ್ಟ್, ಪಾಕಿಸ್ತಾನದ ಇಂಜಮಾಮ್-ಉಲ್-ಹಕ್, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್, ಹಾಶಿಮ್ ಆಮ್ಲಾ, ಇಂಗ್ಲೆಂಡ್‌ನ ಜೋ ರೂಟ್‌ ಈ ದಾಖಲೆ ಸಾಲಿನಲ್ಲಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಂಗ್ಲೆಂಡ್, ರೋರಿ ಬರ್ನ್ಸ್ 33, ಡೊಮಿನಿಕ್ ಸಿಬ್ಲಿ 87, ಜೋ ರೂಟ್ 128 ರನ್‌ನೊಂದಿಗೆ 89.3ನೇ ಓವರ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಜಸ್‌ಪ್ರೀತ್‌ ಬೂಮ್ರಾಗೆ 2, ರವಿಚಂದ್ರನ್ ಅಶ್ವಿನ್‌ಗೆ 1 ವಿಕೆಟ್ ಲಭಿಸಿತ್ತು.

Story first published: Friday, February 5, 2021, 17:26 [IST]
Other articles published on Feb 5, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+