
ಚೆನ್ನೈ: ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ಮೊದಲನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಅದ್ಭುತ ಬ್ಯಾಟಿಂಗ್ ಪ್ರದರ್ಶಿಸುತ್ತಿರುವ ಇಂಗ್ಲೆಂಡ್ ನಾಯಕ ಜೋ ರೂಟ್ ಈ ಪಂದ್ಯದಲ್ಲಿ ಸಾಲು ಸಾಲು ದಾಖಲೆಗಳನ್ನು ನಿರ್ಮಿಸುತ್ತಿದ್ದಾರೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್ ಮೊದಲನೇ ಇನ್ನಿಂಗ್ಸ್ ಆಡುತ್ತಿದೆ. ಈ ಪಂದ್ಯ ಮೂಲಕ 100ನೇ ಟೆಸ್ಟ್ ಆಡುತ್ತಿರುವ ಜೋ ರೂಟ್ 150+ ರನ್ ಬಾರಿಸಿ ಮತ್ತೊಂದು ದಾಖಲೆ ಪಟ್ಟಿ ಸೇರಿದ್ದಾರೆ.
ತಾನಾಡಿದ 98ನೇ, 99ನೇ ಟೆಸ್ಟ್ ಪಂದ್ಯಗಳಲ್ಲಿ ರೂಟ್ ಶತಕ ಬಾರಿಸಿದ್ದಷ್ಟೇ ಅಲ್ಲ, 100ನೇ ಪಂದ್ಯದಲ್ಲೂ ಶತಕ ಬಾರಿಸಿದ ವಿಶ್ವದ ಮೊದಲನೇ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಈಗ ಸತತ ಟೆಸ್ಟ್ ಪಂದ್ಯಗಳಲ್ಲಿ 150+ ರನ್ ಬಾರಿಸಿದ ಬ್ಯಾಟ್ಸ್‌ಮನ್ ಗಳ ಸಾಲಿಗೂ ರೂಟ್ ಸೇರಿಕೊಂಡಿದ್ದಾರೆ.
ಸತತ ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು 150+ ರನ್ ಗಳಿಸಿರುವ ಬ್ಯಾಟ್ಸ್‌ಮನ್ ಗಳ ಪಟ್ಟಿ
* ಕುಮಾರ ಸಂಗಕ್ಕಾರ, ಶ್ರೀಲಂಕಾ, 4 ಸಾರಿ, 2007
* ಇಂಗ್ಲೆಂಡ್ ನ ವ್ಯಾಲಿ ಹ್ಯಾಮಂಡ್, 3 ಸಾರಿ, 1928-29
* ಡಾನ್ ಬ್ರಾಡ್ಮನ್, ಆಸ್ಟ್ರೇಲಿಯಾ, 3 ಸಾರಿ, 1937
* ಝಹೀರ್ ಅಬ್ಬಾಸ್, ಪಾಕಿಸ್ತಾನ, 3 ಸಾರಿ, 1982-83
* ಮುದಾಸರ್ ನಝರ್, ಪಾಕಿಸ್ತಾನ, 3 ಸಾರಿ, 1983
* ನ್ಯೂಜಿಲೆಂಡ್ ನ ಟಾಮ್ ಲ್ಯಾಥಮ್, 3 ಸಾರಿ, 2018-19
* ಜೋ ರೂಟ್, ಇಂಗ್ಲೆಂಡ್, 2021