ENG vs SL: ಟೆಸ್ಟ್ ಕ್ರಿಕೆಟ್‌ನಲ್ಲಿ ಕುಮಾರ್ ಸಂಗಕ್ಕಾರ ಹಿಂದಿಕ್ಕಿದ ಜೋ ರೂಟ್
ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಭರ್ಜರಿ ಫಾರ್ಮ್‌ನಲ್ಲಿದ್ದಾರೆ. ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ಅವರು ಮಿಂಚುವುದರ ಜೊತೆಗೆ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಈಗ ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಮತ್ತು ಕೊನೆಯ ಪಂದ್ಯ ಲಂಡನ್‌ನ ಕೆನ್ನಿಂಗ್ಟನ್ ಓವಲ್ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್‌ನ ಸ್ಟಾರ್ ಬ್ಯಾಟರ್ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿ 12 ರನ್ ಗಳಿಸುವುದರ ಮೂಲಕ ದೊಡ್ಡ ಸಾಧನೆ ಮಾಡಿದ್ದಾರೆ.

ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ರೇಸ್‌ನಲ್ಲಿದ್ದ ಶ್ರೀಲಂಕಾದ ದಿಗ್ಗಜ ವಿಕೆಟ್‌ಕೀಪರ್-ಬ್ಯಾಟರ್ ಕುಮಾರ್ ಸಂಗಕ್ಕಾರ ಅವರನ್ನು ರೂಟ್ ಹಿಂದಿಕ್ಕಿದ್ದಾರೆ. ಟೆಸ್ಟ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ರೂಟ್ ಮತ್ತೊಂದು ಸ್ಥಾನ ಮೇಲೇರಿದ್ದಾರೆ.
ಮೇಲೇರಿದ ರೂಟ್
ಕುಮಾರ್ ಸಂಗಕ್ಕಾರ ಅವರನ್ನು ಹಿಂದಿಕ್ಕುವ ಮೂಲಕ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ಗಳನ್ನು ಗಳಿಸಿದ ಆರನೇ ಬ್ಯಾಟರ್ ಆಗಿದ್ದಾರೆ. ಈಗ ಟೆಸ್ಟ್‌ನಲ್ಲಿ ಅವರು 12402 ರನ್ ಗಳಿಸಿದ್ದಾರೆ. ಕುಮಾರ ಸಂಗಕ್ಕಾರ ತಮ್ಮ ಟೆಸ್ಟ್ ವೃತ್ತಿಜೀವನದಲ್ಲಿ 12400 ರನ್ ಹೊಂದಿದ್ದಾರೆ.
ಮತ್ತೊಂದೆಡೆ ತಮ್ಮದೇ ದೇಶದ ಮಾಜಿ ಬ್ಯಾಟರ್ ಅಲಸ್ಟೈರ್ ಕುಕ್ ಅವರನ್ನು ಹಿಂದಿಕ್ಕಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅಲಸ್ಟೈರ್ ಕುಕ್ ಇಂಗ್ಲೆಂಡ್ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಅವರು ಟೆಸ್ಟ್‌ನಲ್ಲಿ 12472 ರನ್ ಗಳಿಸಿದ್ದಾರೆ. ರೂಟ್ ಇನ್ನೂ 69 ರನ್ ಗಳಿಸುವ ಮೂಲಕ ಕುಕ್ ದಾಖಲೆಯನ್ನು ಮುರಿಯಲಿದ್ದಾರೆ.
ಟೆಸ್ಟ್‌ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳು
- ಸಚಿನ್ ತೆಂಡೂಲ್ಕರ್ - 15921 ರನ್
- ರಿಕಿ ಪಾಂಟಿಂಗ್ - 13378 ರನ್
- ಜಾಕ್ವೆಸ್ ಕಾಲಿಸ್ - 13289 ರನ್
- ರಾಹುಲ್ ದ್ರಾವಿಡ್ - 13288 ರನ್
- ಅಲೆಸ್ಟರ್ ಕುಕ್ - 12427 ರನ್
- ಜೋ ರೂಟ್ - 12402 ರನ್
ಸಚಿನ್ ವಿಶ್ವದಾಖಲೆ ಮುರಿಯಲು ಸಾಧ್ಯವೇ?
ಟೆಸ್ಟ್ ಮಾದರಿಯಲ್ಲಿ ರೂಟ್ ರನ್ ಗಳಿಸುತ್ತಿರುವ ವೇಗವನ್ನು ನೋಡಿದರೆ, ಅವರು ಟೀಮ್ ಇಂಡಿಯಾ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರ ವಿಶ್ವ ದಾಖಲೆಯನ್ನು ಮುರಿಯುವ ಸಾಧ್ಯತೆಗಳಿವೆ. ಈ ದಾಖಲೆ ಬ್ರೇಕ್ ಮಾಡಲು ಅವರು ಅನೇಕ ಟೆಸ್ಟ್ ಪಂದ್ಯಗಳನ್ನು ಆಡಬೇಕಾಗುತ್ತದೆ. ನಿರಂತರವಾಗಿ ರನ್ ಹೊಳೆ ಹರಿಸಬೇಕಾಗುತ್ತದೆ.
ಸಚಿನ್ ತೆಂಡೂಲ್ಕರ್ ತಮ್ಮ ವೃತ್ತಿ ಜೀವನದಲ್ಲಿ ದಾಖಲೆಯ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 15921 ರನ್ ಗಳಿಸಿದ್ದಾರೆ. ಇದುವರೆಗೆ 15000 ರನ್‌ಗಳ ಗಡಿ ಮುಟ್ಟಲು ವಿಶ್ವದ ಯಾವುದೇ ಬ್ಯಾಟರ್‌ಗೆ ಸಾಧ್ಯವಾಗಿಲ್ಲ. ಸದ್ಯ ಸಚಿನ್ ಅವರ ವಿಶ್ವ ದಾಖಲೆಗಿಂತ ರೂಟ್ 3520 ರನ್ ಹಿಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications