For Quick Alerts
ALLOW NOTIFICATIONS  
For Daily Alerts
 

WTC 2023-25 ಈ ಆವೃತ್ತಿಯಲ್ಲಿ ಗರಿಷ್ಠ ರನ್‌ ಸಾಧಕರು, ವಿಕೆಟ್‌ ಪಡೆದವರು ಯಾರು?

ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ 2023-25ರ ಆವೃತ್ತಿ ಶನಿವಾರ ಕೊನೆಗೊಂಡಿದೆ. ಆಸ್ಟ್ರೇಲಿಯಾವನ್ನು ಐದು ವಿಕೆಟ್‌ಗಳಿಂದ ಮಣಿಸಿರುವ ದಕ್ಷಿಣ ಆಫ್ರಿಕಾ ನೂತನ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್‌ನಲ್ಲಿ ಭಾರತ ಮೂರನೇ ಸ್ಥಾನೀಯವಾಗಿ ಅಭಿಯಾನ ಮುಗಿಸಿದೆ. ಸತತ ಎರಡನೇ ಬಾರಿಗೆ ಟ್ರೋಫಿಗೆ ಮುತ್ತಿಡುವ ಆಸ್ಟ್ರೇಲಿಯಾದ ಆಸೆ ಕಮರಿದೆ. ಮೂರು ಆವೃತ್ತಿಯ ವಿಶ್ವ ಟೆಸ್ಟ್‌ ಚಾಂಪಿಯನ್‌ ಶಿಪ್‌ ಕಿರೀಟವನ್ನು ಮೂರು ದೇಶಗಳು ಅಲಂಕರಿಸಿವೆ.

ಸುಮಾರು 2 ವರ್ಷಗಳ ಕಾಲ ಟೆಸ್ಟ್ ಆಡುವ ದೇಶಗಳು ಈ ಚಾಂಪಿಯನ್ ಪಟ್ಟಕ್ಕೇರಲು ಕಾದಾಟವನ್ನು ನಡೆಸುತ್ತವೆ. ವಿಶ್ವ ಟೆಸ್ಟ್‌ ಚಾಂಪಿಯನ್ ಶಿಪ್‌ ಅಂಕ ಪಟ್ಟಿಯನ್ನು ಗೆಲುವಿನ ಶೆಕಡಾ ಮೇಲೆ ನಿರ್ಧರಿಸಲಾಗುತ್ತದೆ. ಈ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ರನ್‌ ಹಾಗೂ ವಿಕೆಟ್‌ ಪಡೆದ ಸಾಧಕರು ಅಭಿಮಾನಿಗಳ ಮನ ಗೆಲ್ಲುತ್ತಾರೆ. ಈ ಆವೃತ್ತಿಯ ಟೆಸ್ಟ್‌ ಚಾಂಪಿಯನ್‌ ಶಿಪ್‌ನಲ್ಲಿ ಯಾರು ಅತ್ಯಧಿಕ ರನ್‌ ಬಾರಿಸಿದ್ದಾರೆ ಎಂಬ ಬಗ್ಗೆ ವರದಿ ಇಲ್ಲಿದೆ.

Joe Root Pat Cummins Top WTC Stats as South Africa Wins

ಬಟ್ಲರ್‌ಗೆ ಅಗ್ರ ಸ್ಥಾನ

ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಕೀರ್ತಿ ಇಂಗ್ಲೆಂಡ್ ತಂಡದ ಜೋ ರೂಟ್‌ ಅವರಿಗೆ ಸಲ್ಲುತ್ತದೆ. ಇವರು ಆಡಿದ 22 ಪಂದ್ಯಗಳಲ್ಲಿ 54ರ ಸರಾಸರಿಯಲ್ಲಿ 1968 ರನ್‌ ಕಲೆ ಹಾಕಿದ್ದಾರೆ. ಈ ವೇಳೆ ಇವರು 7 ಶತಕ ಹಾಗೂ 7 ಅರ್ಧಶತಕಗಳನ್ನು ಬಾರಿಸಿ ಅಬ್ಬರಿಸಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿ ಟೀಮ್ ಇಂಡಿಯಾದ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ ಇದ್ದು, ಇವರು ಆಡಿದ 19 ಪಂದ್ಯಗಳಲ್ಲಿ 1798 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 4 ಶತಕ, 10 ಅರ್ಧಶತಕಗಳು ಸೇರಿವೆ.

ಗರಿಷ್ಠ ರನ್ ಸಾಧಕರು

ಜೋ ರೂಟ್, ಇಂಗ್ಲೆಂಡ್‌, 22 ಪಂದ್ಯ, 1968 ರನ್‌
ಯಶಸ್ವಿ ಜೈಸ್ವಾಲ್‌, ಭಾರತ, 19 ಪಂದ್ಯ, 1798 ರನ್‌
ಬೆನ್‌ ಡಕೆಟ್‌, ಇಂಗ್ಲೆಂಡ್‌, 22 ಪಂದ್ಯ, 1470 ರನ್‌
ಹ್ಯಾರಿ ಬ್ರೂಕ್‌, ಇಂಗ್ಲೆಂಡ್‌, 17 ಪಂದ್ಯ, 1463 ರನ್‌
ಉಸ್ಮಾನ್ ಖವಾಜ್, ಆಸ್ಟ್ರೇಲಿಯಾ, 20 ಪಂದ್ಯ, 1428 ರನ್

Joe Root Pat Cummins Top WTC Stats as South Africa Wins

ಬುಮ್ರಾಗೆ ಎರಡನೇ ಸ್ಥಾನ

ವಿಕೆಟ್‌ ಸಾಧಕರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್‌ ಅಗ್ರ ಸ್ಥಾನದಲ್ಲಿದ್ದಾರೆ.ಇವರು ಆಡಿದ 18 ಪಂದ್ಯಗಳಲ್ಲಿ 80 ವಿಕೆಟ್‌ ಪಡೆದಿದ್ದಾರೆ. ಇನ್ನು ಟೀಮ್ ಇಂಡಿಯಾದ ಯಾರ್ಕರ್ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ ಆಡಿದ 15 ಪಂದ್ಯಗಳಲ್ಲಿ 77 ವಿಕೆಟ್‌ ಕಬಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.

ಹೆಚ್ಚು ವಿಕೆಟ್‌ ಪಡೆದ ಬೌಲರ್ಸ್‌

ಪ್ಯಾಟ್ ಕಮಿನ್ಸ್‌, ಆಸ್ಟ್ರೇಲಿಯಾ, 18 ಪಂದ್ಯ, 80 ವಿಕೆಟ್‌
ಜಸ್ಪ್ರಿತ್ ಬುಮ್ರಾ, ಭಾರತ, 15 ಪಂದ್ಯ, 77 ವಿಕೆಟ್‌
ಮಿಚೆಲ್ ಸ್ಟಾರ್ಕ್‌, ಆಸ್ಟ್ರೇಲಿಯಾ, 19 ಪಂದ್ಯ, 77 ವಿಕೆಟ್‌
ನಾಥನ್ ಲಿಯಾನ್‌, ಆಸ್ಟ್ರೇಲಿಯಾ, 17 ಪಂದ್ಯ, 66 ವಿಕೆಟ್‌
ಆರ್‌ ಅಶ್ವಿನ್‌, ಭಾರತ, 14 ಪಂದ್ಯ, 63 ವಿಕೆಟ್‌

Story first published: Sunday, June 15, 2025, 20:21 [IST]
Other articles published on Jun 15, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+