Test Ranking: ಜೋ ರೂಟ್ ನಂಬರ್ 1 ಬ್ಯಾಟರ್, ಭಾರತೀಯ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಬಡ್ತಿ
ಬುಧವಾರ ನೂತನ ಟೆಸ್ಟ್ ಶ್ರೇಯಾಂಕ ಬಿಡುಗಡೆ ಆಗಿದೆ. ಈ ಪಟ್ಟಿಯಲ್ಲಿ ಇಂಗ್ಲೆಂಡ್ ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದು, ಭಾರತೀಯ ಬ್ಯಾಟರ್‌ಗಳಿಗೆ ಲಾಭವಾಗಿದೆ. ಬಾಂಗ್ಲಾದೇಶದ ವಿರುದ್ಧ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಬಾಬರ್ ಅಜಮ್ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ.
ನೂತನವಾಗಿ ಬಿಡುಗಡೆಗೊಂಡ ಟೆಸ್ಟ್ ಶ್ರೇಯಾಂಕದಲ್ಲಿ ಜೋ ರೂಟ್ 881 ಅಂಕಗಳನ್ನು ಕಲೆ ಹಾಕಿ, ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ನ್ಯೂಜಿಲೆಂಡ್ ತಂಡದ ಕೇನ್ ವಿಲಿಯಮ್ಸನ್ ಪಡೆದಿದ್ದಾರೆ. ಇವರು 859 ಅಂಕಗಳನ್ನು ಪಡೆದಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿ ಡೇರಿಲ್ ಮಿಚೆಲ್ 768 ಅಂಕಗಳೊಂದೊಗೆ ಮೂರನೇ ಸ್ಥಾನದಲ್ಲಿದ್ದಾರೆ.

ಬಾಬರ್ ಶ್ರೇಯಾಂಕದಲ್ಲಿ ಕುಸಿತ
ಪಾಕಿಸ್ತಾನ ತಂಡದ ಸ್ಟಾರ್ ಆಟಗಾರ ಬಾಬರ್ ಅಜಮ್ ಟೆಸ್ಟ್ ಶ್ರೇಯಾಂಕದಲ್ಲಿ ಕುಸಿತ ಕಂಡಿದ್ದಾರೆ. ಇವರು ಆರನೇ ಶ್ರೇಯಾಂಕದಿಂದ ಒಂಬತ್ತನೇ ಶ್ರೇಯಾಂಕಕ್ಕೆ ಕುಸಿದಿದ್ದಾರೆ. ಇವರು 734 ಅಂಕಗಳನ್ನು ಕಲೆ ಹಾಕಿದ್ದಾರೆ. ಹತ್ತನೇ ಸ್ಥಾನದಲ್ಲಿ ಆಸೀಸ್‌ನ ಉಸ್ಮಾನ್ ಖವಾಜ್ ಇದ್ದಾರೆ.
ಪಾಕಿಸ್ತಾನ ವಿರುದ್ಧ 191 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಮುಶ್ಫಿಕರ್ ರಹೀಮ್ ರ್ಯಾಂಕಿಂಗ್‌ನಲ್ಲಿ ಲಾಭ ಪಡೆದಿದ್ದಾರೆ. ಇದೀಗ ಮುಶ್ಫಿಕರ್ ರಹೀಮ್ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ 17ನೇ ಸ್ಥಾನಕ್ಕೆ ತಲುಪಿದ್ದಾರೆ.
ಭಾರತದ ಆಟಗಾರರ ಶ್ರೇಯಾಂಕ ಜಿಗಿತ
ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಟೆಸ್ಟ್ ಶ್ರೇಯಾಂಕದಲ್ಲಿ ಉತ್ತಮ ಸ್ಥಾನದಲ್ಲಿರುವ ಭಾರತದ ಬ್ಯಾಟರ್. ಇವರು 751 ಅಂಕಗಳನ್ನು ಹೊಂದಿದ್ದ ಆರನೇ ಸ್ಥಾನದಲ್ಲಿದ್ದಾರೆ. ಇವರ ನಂತರದ ಸ್ಥಾನದಲ್ಲಿ ಟೀಮ್ ಇಂಡಿಯಾ ಯಂಗ್ ಪ್ಲೇಯರ್ ಯಶಸ್ವಿ ಜೈಸ್ವಾಲ್ ಇದ್ದು, ಇವರು 741 ಅಂಕಗಳನ್ನು ಸೇರಿಸಿದ್ದಾರೆ. ವಿರಾಟ್ ಕೊಹ್ಲಿ 737 ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದ್ದಾರೆ.
ಐಸಿಸಿ ನೂತನವಾಗಿ ಬಿಡುಗಡೆಗೊಳಿಸಿದ ಶ್ರೇಯಾಂಕದಲ್ಲಿ ಭಾರತೀಯ ಆಟಗಾರರಿಗೆ ಲಾಭವಾಗಿದೆ. ಯಶಸ್ವಿ ಜೈಸ್ವಾಲ್ ಒಂದು ಸ್ಥಾನ ಹಾಗೂ ವಿರಾಟ್ ಕೊಹ್ಲಿ ಎರಡು ಸ್ಥಾನ ಏರಿಕೆ ಕಂಡಿದ್ದಾರೆ.
ಅಶ್ವಿನ್‌ಗೆ ಅಗ್ರ ಸ್ಥಾನ
ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರು 870 ಅಂಕಗಳನ್ನು ಕಲೆ ಹಾಕಿದ್ದು, ನಂಬರ್ 1 ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಜೋಶ್ ಹ್ಯಾಜಲ್‌ವುಡ್ ಎರಡನೇ ಸ್ಥಾನದಲಿದ್ದಾರೆ. ಟೀಮ್ ಇಂಡಿಯಾದ ಅನುಭವಿ ಆಟಗಾರ ಜಸ್ಪ್ರಿತ್ ಬುಮ್ರಾ ಮೂರನೇ ಸ್ಥಾನದಲ್ಲಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications