For Quick Alerts
ALLOW NOTIFICATIONS  
For Daily Alerts
 

Joe Root: ಇಂಗ್ಲೆಂಡ್ ಪರ ದೊಡ್ಡ ಸಾಧನೆ ಮಾಡಿದ ಜೋ ರೂಟ್

ಕೊಲಂಬೊ: ಭರವಸೆಯ ಆಟಗಾರ ಜೋ ರೂಟ್‌ ಅವರು ಬಾರಿಸಿದ ಅರ್ಧಶತಕದ ಬಲದಿಂದ ಇಂಗ್ಲೆಂಡ್‌ 5 ವಿಕೆಟ್‌ಗಳಿಂದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಮಣಿಸಿತು. ಈ ಮೂಲಕ ಇಂಗ್ಲೆಂಡ್‌ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.

220 ರನ್‌ಗಳ ರನ್‌ಗಳನ್ನು ಬೆನ್ನಟ್ಟಿದ ಇಂಗ್ಲೆಂಡ್ ತಂಡದ ಆರಂಭಿಕ ಆಟಗಾರ ರೆಹಮಾನ್ ಅಹ್ಮದ್‌ (13) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಎರಡನೇ ವಿಕೆಟ್‌ಗೆ ಬೆನ್‌ ಡಕೆಟ್‌ ಹಾಗೂ ಜೋ ರೂಟ್‌ ಭರ್ಜರಿ ಜೊತೆಯಾಟದ ಕಾಣಿಕೆ ನೀಡಿತು. ಈ ಜೋಡಿ 67 ಎಸೆತಗಳಲ್ಲಿ 68 ರನ್‌ ಸೇರಿಸಿತು. ಬೆನ್ ಡಕೆಟ್‌ 2 ಬೌಂಡರಿ, 1 ಸಿಕ್ಸರ್‌ ಸಹಾಯದಿಂದ 39 ರನ್‌ ಸಿಡಿಸಿದರು. ಜಾಕಬ್‌ ಬೆಥೆಲ್‌ 6 ರನ್‌ ಸಿಡಿಸಿದರು.

Joe Root

97 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ ತಂಡಕ್ಕೆ ಜೋ ರೂಟ್‌ ಹಾಗೂ ಹ್ಯಾರಿ ಬ್ರೂಕ್‌ ಜೋಡಿ ತಂಡಕ್ಕೆ ಆಸರೆಯಾಯಿತು. ಈ ಜೋಡಿ 126 ಎಸೆತಗಳಲ್ಲಿ 81 ರನ್‌ ಸೇರಿಸಿತು. ಹ್ಯಾರಿ ಬ್ರೂಕ್‌ 2 ಬೌಂಡರಿ ಸಹಾಯದಿಂದ 42 ರನ್‌ ಬಾರಿಸಿದರು. ಭರವಸೆಯ ಆಟಗಾರ ಜೋ ರೂಟ್‌ 90 ಎಸೆತಗಳಲ್ಲಿ 5 ಬೌಂಡರಿ ನೆರವಿನಿಂದ 75 ರನ್ ಕಾಣಿಕೆ ನೀಡಿದರು. ವಿಕೆಟ್‌ ಕೀಪರ್ ಜೋಸ್ ಬಟ್ಲರ್‌ 3 ಬೌಂಡರಿ, 1 ಸಿಕ್ಸರ್ ನೆರವಿನಿಂದ ಅಜೇಯ 33 ರನ್ ಬಾರಿಸಿ ತಂಡಕ್ಕೆ ಜಯದ ಮಾಲೆ ತೊಡಿಸಿದರು. ಅಂತಿಮವಾಗಿ ಇಂಗ್ಲೆಂಡ್‌ 46.2 ಓವರ್‌ಗಳಲ್ಲಿ 5 ವಿಕೆಟ್‌ಗೆ 223 ರನ್‌ ಸೇರಿಸಿ ಜಯ ಸಾಧಿಸಿತು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ ತಂಡದ ಪರ ಯಾವೊಬ್ಬ ಬ್ಯಾಟರ್‌ ಸಹ ದೊಡ್ಡ ಇನಿಂಗ್ಸ್ ಕಟ್ಟಲಿಲ್ಲ. ಪಥನು ನಿಸ್ಸಂಕ (26), ಕುಸಾಲ್ ಮೆಂಡೀಸ್ (26), ಧನಂಜಯ್ ಡಿಸಿಲ್ವಾ (40), ನಾಯಕ ಚರಿತ ಅಸಲಂಕಾ (45), ಪವನ್ ರಥನಾಯಕ (29), ದುನಿತ್ ವೆಲ್ಲಲಾಗೆ (20) ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ವಿಫಲರಾದರು. ಅಂತಿಮವಾಗಿ ಶ್ರೀಲಂಕಾ 219 ರನ್‌ಗಳಿಗೆ ಆಲೌಟ್ ಆಯಿತು.

ರೂಟ್ ದಾಖಲೆ

ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಜೋ ರೂಟ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಅವರು ಇಂಗ್ಲೆಂಡ್ ಪರ ಅತ್ಯಂತ ಹೆಚ್ಚು ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡರು. ಇದು ಜೋ ರೂಟ್ ಅವರ ವೃತ್ತಿಜೀವನದಲ್ಲಿ 27 ನೇ ಪಂದ್ಯಶ್ರೇಷ್ಠ ಪ್ರಶಸ್ತಿಯಾಗಿದೆ. ಈ ಮೂಲಕ ರೂಟ್‌, ನಾಯಕ ಕೆವಿನ್ ಪೀಟರ್ಸನ್ ಅವರ ದಾಖಲೆಯನ್ನು ಮೀರಿಸಿದ್ದಾರೆ.

ಜ.27 ರಂದು ಮೂರನೇ ಪಂದ್ಯ

ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ಜನವರಿ 27 ರಂದು ನಡೆಯಲಿದೆ. ಉಭಯ ತಂಡಗಳು ತಲಾ ಒಂದು ಪಂದ್ಯವನ್ನು ಗೆದ್ದಿದ್ದರಿಂದ ಪಂಧ್ಯ ರೋಚಕತೆ ಹೆಚ್ಚಿಸಿದೆ.

Story first published: Sunday, January 25, 2026, 12:15 [IST]
Other articles published on Jan 25, 2026
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+