Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಜಯದ ರೂಟ್‌ಗೆ ಮರಳಿದಿ ಇಂಗ್ಲೆಂಡ್: ಗಿಲ್‌ ಪಡೆಗೆ 4 ವಿಕೆಟ್ ಸೋಲು

ಕಾರ್ಡಿಫ್‌: ಭರವಸೆಯ ಆಟಗಾರ ಜೋ ರೂಟ್ ಬಾರಿಸಿದ 99 ರನ್ ಹಾಗೂ ಅನುಭವಿ ವೇಗದ ಬೌಲರ್ ಜೋಫ್ರಾ ಆರ್ಚರ್ ಅವರ ಬಿಗುವಿನ ದಾಳಿಯ ಪರಿಣಾಮ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಟೀಮ್ ಇಂಡಿಯಾವನ್ನು ಮಣಿಸಿ ಸರಣಿಯಲ್ಲಿ ಸಮಬಲ ಸಾಧಿಸಿದೆ.

234 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಇಂಗ್ಲೆಂಡ್‌ ತಂಡದ ಆರಂಭ ಕಳಪೆಯಾಗಿತ್ತು ಬೆನ್ ಡಕೆಟ್‌ (0), ಜಾಕೊಬ್ ಬೆಥೆಲ್ (4) ರನ್‌ ಕಲೆ ಹಾಕುವಲ್ಲಿ ವಿಫಲರಾದರು. ಮೂರನೇ ವಿಕೆಟ್‌ಗೆ
ಜೋ ರೂಟ್ ಹಾಗೂ ನಾಯಕ ಹ್ಯಾರಿ ಬ್ರುಕ್ ಜೋಡಿ 45 ರನ್‌ ಸೇರಿಸಿತು. ಈ ಹಂತದಲ್ಲಿ ಬ್ರೂಕ್ 16 ರನ್ ಬಾರಿಸಿ ಔಟ್ ಆದರು.

Joe Root s

ಗೆಲುವಿನಲ್ಲಿ ಮಿಂಚಿದ ರೂಟ್‌

ಮಧ್ಯಮ ಕ್ರಮಾಂಕದಲ್ಲಿ ಸ್ಯಾಮ್ ಕರನ್ 26, ಜೋಸ್ ಬಟ್ಲರ್ 17 ರನ್ ಬಾರಿಸಿ ಔಟ್ ಆದರು. 6ನೇ ವಿಕೆಟ್‌ಗೆ ವಿಲ್ ಜಾಕ್ಸ್ ಹಾಗೂ ಜೋ ರೂಟ್ ಜೋಡಿ 72 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಈ ಹಂತದಲ್ಲಿ 2 ಬೌಂಡರಿ ನೆರವಿನಿಂದ 30 ರನ್ ಬಾರಿಸಿದ್ದ ಜಾಕ್ಸ್ ಔಟ್ ಆದರು. ಭರವಸೆಯ ಆಟಗಾರ ಜೋ ರೂಟ್, 133 ಎಸೆತಗಳಲ್ಲಿ 9 ಬೌಂಡರಿ ನೆರವಿನಿಂದ ಅಜೇಯ 99 ರನ್ ಬಾರಿಸಿ ಜಯದಲ್ಲಿ ಮಿಂಚಿದರು. ಅಂತಿಮವಾಗಿ ಇಂಗ್ಲೆಂಡ್‌ 44.1 ಓವರ್‌ಗಳಲ್ಲಿ 6 ವಿಕೆಟ್‌ಗೆ 235 ರನ್‌ ಸೇರಿಸಿ ಜಯ ಸಾಧಿಸಿತು.

65 ರನ್‌ ಬಾರಿಸುತ್ತಲೇ ಹಲವು ದಾಖಲೆಗಳನ್ನು ಬರೆದ ಕಿಂಗ್ ಕೊಹ್ಲಿ

65 ರನ್‌ ಬಾರಿಸುತ್ತಲೇ ಹಲವು ದಾಖಲೆಗಳನ್ನು ಬರೆದ ಕಿಂಗ್ ಕೊಹ್ಲಿ

ಟಾಸ್‌ ಸೋತರೂ ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ರೋಹಿತ್ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಮೊದಲ ವಿಕೆಟ್‌ಗೆ 7.4 ಓವರ್‌ಗಳಲ್ಲಿ 44 ರನ್‌ ಸೇರಿಸಿತು. ಈ ಹಂತದಲ್ಲಿ ನಾಯಕ ಶುಭಮನ್‌ ಗಿಲ್ 6 ಬೌಂಡರಿ ನೆರವಿನಿಂದ 31 ರನ್‌ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಜೋಡಿ ಅರ್ಧಶತಕದ ಜೊತೆಯಾಟವನ್ನು ನೀಡಿದರು. ಈ ಹಂತದಲ್ಲಿ ರೋಹಿತ್ ಶರ್ಮಾ 26 ರನ್ ಬಾರಿಸಿ ಔಟ್ ಆದರು.

ಶ್ರೇಯಸ್‌, ವಿರಾಟ್‌ ಮಿಂಚು

ಶ್ರೇಯಸ್ ಅಯ್ಯರ್ ಬದಲಿಗೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಇಶಾನ್ ಕಿಶನ್‌ 1 ರನ್ ಬಾರಿಸಿ ಆಟ ಮುಗಿಸಿದರು. ನಾಲ್ಕನೇ ವಿಕೆಟ್‌ಗೆ ಶ್ರೇಯಸ್ ಅಯ್ಯರ್ ಹಾಗೂ ವಿರಾಟ್‌ ಕೊಹ್ಲಿ ಜೋಡಿ 67 ರನ್‌ ಸೇರಿಸಿತು. ಈ ವೇಳೆ ವಿರಾಟ್‌ ಕೊಹ್ಲಿ 66 ಎಸೆತಗಳಲ್ಲಿ 8 ಬೌಂಡರಿ ನೆರವಿನಿಂದ 65 ರನ್ ಬಾರಿಸಿ ಆರ್ಚರ್‌ಗೆ ವಿಕೆಟ್‌ ಒಪ್ಪಿಸಿದರು. ಉಳಿದ ಬ್ಯಾಟರ್‌ಗಳ ರನ್‌ ಕಲೆ ಹಾಕುವಲ್ಲಿ ಎಡವಿದರು.

ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ದಾಖಲೆ ಅಳಿಸಿದ Rohit Sharma

ಪಾಕಿಸ್ತಾನದ ಇಂಜಮಾಮ್‌ ಉಲ್‌ ಹಕ್‌ ದಾಖಲೆ ಅಳಿಸಿದ Rohit Sharma

ಶ್ರೇಯಸ್ ಅಯ್ಯರ್ 71 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 66 ರನ್‌ ಬಾರಿಸಿ ಮಿಂಚಿದರು. ಭಾರತ 44 ಓವರ್‌ಗಳಲ್ಲಿ 233 ರನ್‌ಗಳಿಗೆ ಆಲೌಟ್ ಆದರು. ಇಂಗ್ಲೆಂಡ್‌ ಪರ ಜೋಫ್ರಾ ಆರ್ಚರ್‌, ಗಸ್ ಅಟ್ಕಿನ್ಸನ್ ತಲಾ ಮೂರು ವಿಕೆಟ್‌ ಪಡೆದರು.

Story first published: Friday, July 17, 2026, 3:04 [IST]
Other articles published on Jul 17, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+