ಪಾಕ್ ವಿರುದ್ಧ ಶತಕ ಬಾರಿಸಿದ ಜೋ ರೂಟ್: ಸುನಿಲ್ ಗವಾಸ್ಕರ್, ಲಾರಾ ದಾಖಲೆ ಅಳಿಸಿದ ಇಂಗ್ಲೆಂಡ್ ಬ್ಯಾಟರ್
ಪ್ರಸಕ್ತ ವರ್ಷ ಟೆಸ್ಟ್ ಕ್ರಿಕೆಟ್‌ನಲ್ಲಿ ಭರ್ಜರಿ ಪಾರ್ಮ್‌ನಲ್ಲಿರುವ ಜೋ ರೂಟ್ ದಾಖಲೆಯ ಮೇಲೆ ದಾಖಲೆಯನ್ನು ಬರೆಯುತ್ತಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯರಿಗೆ ಸರಿಯಾಗಿ ಇಂಗ್ಲೆಂಡ್ ಪ್ರತಿ ಉತ್ತರ ನೀಡುವಲ್ಲಿ ಭರವಸೆಯ ಆಟಗಾರ ಜೋ ರೂಟ್ ನಿರ್ಣಾಯಕ ಪಾತ್ರವನ್ನು ವಹಿಸಿದ್ದಾರೆ.
ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ ಜೋ ರೂಟ್, ಮತ್ತೊಮ್ಮೆ ದಾಖಲೆಯ ಪುಟಕ್ಕೆ ಕೆಲಸ ನೀಡಿದ್ದಾರೆ. ಟೆಸ್ಟ್ ಪಂದ್ಯದ ಮೂರನೇ ದಿನವಾದ ಬುಧವಾರ ಇಂಗ್ಲೆಂಡ್ 1 ವಿಕೆಟ್ ನಷ್ಟಕ್ಕೆ 96 ರನ್‌ಗಳಿಂದ ಆಟ ಮುಂದುವರೆಸಿತು. ಈ ವೇಳೆ ಎಲ್ಲರ ಚಿತ್ತವನ್ನು ಕದ್ದ ಬ್ಯಾಟರ್ ಜೋ ರೂಟ್.

ಇಂಗ್ಲೆಂಡ್ ಆಸರೆಯಾದ ಜೊತೆಯಾಟ
ಒಬ್ಬ ಅನುಭವಿ ಆಟಗಾರ ಹೇಗೆ ಆಡಬೇಕು ಎಂಬುದನ್ನು ಜೋ ರೂಟ್ ತೊರಿಸಿಕೊಟ್ಟಿದ್ದಾರೆ. ಎರಡನೇ ವಿಕೆಟ್‌ಗೆ ರೂಟ್, ಜಾಕ್ ಕ್ರಾಲಿ ಅವರೊಂದಿಗೆ 140 ಎಸೆತಗಳಲ್ಲಿ 109 ರನ್ ಜೊತಯಾಟದ ಕಾಣಿಕೆ ನೀಡಿದರು. ಇನ್ನು ಮೂರನೇ ವಿಕೆಟ್‌ಗೂ ಬೆನ್ ಡಕೆಟ್ ಜೊತೆಗೂಡಿ ಕ್ಲಾಸಿಕ್ ಜೊತೆಯಾಟದ ಕಾಣಿಕೆಯನ್ನು ರೂಟ್ ನೀಡಿದರು. ಮೂರನೇ ವಿಕೆಟ್‌ಗೆ ರೂಟ್, ಡಕೆಟ್ 154 ಎಸೆತಗಳಲ್ಲಿ 136 ರನ್ ಸಿಡಿಸಿ ತಂಡಕ್ಕೆ ಆಸರೆ ಆದರು. ನಾಲ್ಕನೇ ವಿಕೆಟ್‌ಗೂ ಹ್ಯಾರಿ ಬ್ರೂಕ್ ಅವರೊಂದಿಗೆ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ.
ಇಂಗ್ಲೆಂಡ್ ಪರ ಗರಿಷ್ಠ ರನ್
ಇದೇ ಪಂದ್ಯದಲ್ಲಿ ಜೋ ರೂಟ್ ಇತಿಹಾಸ ನಿರ್ಮಿಸಿದ್ದಾರೆ. ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ದಾಖಲೆ ಬರೆದಿದ್ದಾರೆ. ಈ ದಾಖಲೆ ನಿರ್ಮಿಸಲು ರೂಟ್‌ಗೆ 71 ರನ್ ಅವಶ್ಯಕತೆ ಇತ್ತು. ಈ ಸ್ಕೋರ್‌ನ್ನು ಸುಲಭವಾಗಿ ಮುಟ್ಟಿದ ರೂಟ್, ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಗರಿಷ್ಠ ರನ್ ಬಾರಿಸಿದ ಹಿರಿಮೆ ತಮ್ಮದಾಗಿಸಿಕೊಂಡಿದ್ದಾರೆ. ಇದಕ್ಕೂ ಮೊದಲು ಈ ದಾಖಲೆ ಅಲಿಸ್ಟಾರ್ ಕುಕ್ ಅವರ ಹೆಸರಲ್ಲಿ ಇತ್ತು. ಕುಕ್ ಟೆಸ್ಟ್ ಕ್ರಿಕೆಟ್‌ನಲ್ಲಿ 12472 ರನ್ ಸಿಡಿಸಿದ್ದಾರೆ.
ಶತಕ ಬಾರಿಸಿ ದಾಖಲೆ
ಜೋ ರೂಟ್ ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸಿದ ವಿಷಯದಲ್ಲಿ ಆರನೇ ಸ್ಥಾನವನ್ನು ತಲುಪಿದ್ದಾರೆ. ಮುಲ್ತಾನಾ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಶತಕ ಬಾರಿಸುತ್ತಿದ್ದಂತೆ ರೂಟ್ ಈ ಸಾಧನೆ ಮಾಡಿದರು. ಇನ್ನು ಇವರ ಕಣ್ಣು ಟೀಮ್ ಇಂಡಿಯಾದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಅವರ ಶತಕದ ಮೇಲಿದೆ. ದ್ರಾವಿಡ್ ಟೆಸ್ಟ್‌ನಲ್ಲಿ 36 ಶತಕ ಬಾರಿಸಿದ್ದಾರೆ. ಪಾಕ್ ವಿರುದ್ಧ ಶತಕ ಬಾರಿಸುತ್ತಿದ್ದಂತೆ ರೂಟ್ ಸುನಿಲ್ ಗವಾಸ್ಕರ್, ಬ್ರಿಯಾನ್ ಲಾರಾ, ಮಹೇಲಾ ಜಯವರ್ಧನೆ ಮತ್ತು ಯೂನಿಸ್ ಖಾನ್ ದಾಖಲೆ ಅಳಿಸಿದ್ದಾರೆ. ಇವರೆಲ್ಲರೂ ಟೆಸ್ಟ್‌ನಲ್ಲಿ 34 ಶತಕ ಬಾರಿಸಿದ ಹಿರಿಮೆ ಹೊಂದಿದ್ದರು. ಈಗ ರೂಟ್ ಇವರನ್ನೆಲ್ಲಾ ಹಿಂದೆ ಬಿಟ್ಟಿದ್ದಾರೆ. 2024 ರಲ್ಲಿ ಜೋ ರೂಟ್ ಅವರ ದಾಖಲಿಸಿದ 5 ನೇ ಶತಕವಾಗಿದೆ.

ಸಚಿನ್ ನಂಬರ್ 1
ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಭಾರತದ ದಿಗ್ಗಜ ಸಚಿನ್ ತೆಂಡೂಲ್ಕರ್ ನಂಬರ್ 1 ಸ್ಥಾನದಲ್ಲಿದ್ದಾರೆ. ಇವರು 51 ಶತಕ ಸಿಡಿಸಿದ್ದಾರೆ. ಇವರ ನಂತರದ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ ಇದ್ದಾರೆ. ಇವರು 45 ಶತಕ ಸಿಡಿಸಿದ್ದಾರೆ, ರಿಕಿ ಪಾಂಟಿಂಗ್ 41, ಕುಮಾರ್ ಸಂಗಾಕ್ಕಾರ 38, ರಾಹುಲ್ ದ್ರಾವಿಡ್ 36 ಶತಕ ಸಿಡಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications