ಶ್ರೀಲಂಕಾದಿಂದಲೇ ಟೀಮ್ ಇಂಡಿಯಾಗೆ ಎಚ್ಚರಿಕೆ ರವಾನಿಸಿದ ಜೋ ರೂಟ್

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಟೀಮ್ ಇಂಡಿಯಾದ ಬೌಲಿಂಗ್ ಪಡೆಗೆ ಶ್ರೀಲಂಕಾದಿಂದಲೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಪ್ರಸಕ್ತ ಲಂಕಾದಲ್ಲಿ ನಡೆಯುತ್ತಿರುವ ಟೆಸ್ಟ್ ಸರಣಿಯಲ್ಲಿ ಅದ್ಭುತ ಫಾರ್ಮ್‌ನಲ್ಲಿರುವ ಇಂಗ್ಲೆಂಡ್ ನಾಯಕ ಸತತ ಎರಡನೇ ಶತಕ ಸಿಡಿಸಿ ಮಿಂಚಿದ್ದಾರೆ.
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಮೂರನೇ ದಿನದಾಟದಲ್ಲಿ ಜೋ ರೂಟ್ ಈ ಪ್ರದರ್ಶನವನ್ನು ನೀಡಿದ್ದು ಇಂಗ್ಲೆಂಡ್ ತಂಡಕ್ಕೆ ನೆರವಾಗಿದ್ದಾರೆ. ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಜೋ ರೂಟ್ ಮ್ಯಾಚ್ ವಿನ್ನಿಂಗ್ 228 ರನ್ ಸಿಡಿಸಿದರು. ಸುದೀರ್ಘ ಮಾದರಿಯ ಕ್ರಿಕೆಟ್‌ನಲ್ಲಿ ಅವರು ಈ ಮೂಲಕ ತಮ್ಮ 99ನೇ ಪಂದ್ಯದಲ್ಲಿ 19ನೇ ಶತಕವನ್ನು ದಾಖಲಸಿದ್ದರು.

ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಲಂಕಾ
ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿದ್ದು ಏಂಜಲೋ ಮ್ಯಾಥ್ಯೂಸ್ ಸಿಡಿಸಿದ ಶತಕ ಹಾಗೂ ಡಿಕ್ವೆಲ್ಲಾ ಅವರ 92ರನ್‌ಗಳ ಕೊಡುಗೆಯ ನೆರವಿನಿಂದ 381 ರನ್‌ಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಈ ಇನ್ನಿಂಗ್ಸ್‌ನಲ್ಲಿ ನಾಯಕ ಚಾಂಡಿಮಲ್ ಹಾಗೂ ದಿಲ್ರುವಾನ್ ಪೆರೆರ ಕೂಡ ಅರ್ಧ ಶತಕದ ಕೊಡುಗೆಯನ್ನು ನೀಡಿದ್ದಾರೆ.

ಇಂಗ್ಲೆಂಡ್‌ಗೆ ಆರಂಭಿಕ ಆಟಗಾರ
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಮಾಡಲಿಳಿದ ಇಂಗ್ಲೆಂಡ್ ಆರಂಭಿಕ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 5 ರನ್ ಆಗಯವಷ್ಟರಲ್ಲಿ ಆರಂಭಿಕರಿಬ್ಬರನ್ನೂ ಇಂಗ್ಲೆಂಡ್ ಕಳೆದುಕೊಂಡಿತು.ಬಳಿಕ ನಾಯಕನ ಜೊತೆ ಸೇರಿದ ವಿಕೆಟ್ ಕೀಪರ್ ಜಾನಿ ಬೈರ್‌ಸ್ಟೋವ್ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು ನಾಯಕನಿಗೆ ಸಾಥ್ ನೀಡಿದರು. ಬೈರ್‌ಸ್ಟೋವ್ ಕೇವಲ 28 ರನ್‌ಗಳಿಗೆ ವಿಕೆಟ್ ಒಪ್ಪಿಸಿದರು.

ಶ್ರೇಷ್ಠ ಜೊತೆಯಾಟ ನೀಡಿದ ರೂಟ್
ಲಾರೆನ್ಸ್ ಕೂಡ ಶೀಘ್ರವೇ ವಿಕೆಟ್ ಒಪ್ಪಿಸಿದರಾದರೂ ಜೋಸ್ ಬಟ್ಲರ್ ಜೊತೆಗೆ ಮತ್ತೊಂದು ಉತ್ತಮ ಜೊತೆಯಾಟದ ಪ್ರದರ್ಶನ ನೀಡುವಲ್ಲಿ ಜೋ ರೂಟ್ ಯಶಸ್ವಿಯಾದರು. ಶ್ರೀಲಂಕಾ ತಂಡದ ಪರವಾಗಿ ಲಸಿತ್ ಎಂಬುಲ್ಡೇನಿಯಾ ಅದ್ಭುತ ಬೌಲಿಂಗ್ ದಾಳಿಯನ್ನು ಸಂಘಟಿಸಿದ್ದು ಮೊದಲ ಆರು ವಿಕೆಟ್ ಕಳೆದುಕೊಂಡಿದ್ದ ವೇಳೆಗೆ ಅವರೊಬ್ಬರೇ ಐದು ವಿಕೆಟ್‌ಗಳನ್ನು ತನ್ನ ಖಾತೆಗೆ ಹಾಕಿಕೊಂಡಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications