Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Joe Root: ರಾಹುಲ್ ದ್ರಾವಿಡ್‌ ದಾಖಲೆ ಅಳಿಸಿದ ಜೋ ರೂಟ್‌

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಮೂರನೇ ಟೆಸ್ಟ್‌ ಪಂದ್ಯ ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೊದಲ ಇನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದೆ. ಇನ್ನು ಟಾಸ್‌ ಗೆದ್ದ ಇಂಗ್ಲೆಂಡ್‌ ಮೊದಲು ಬ್ಯಾಟ್ ಮಾಡಿ 387 ರನ್‌ಗಳಿಗೆ ಆಲೌಟ್ ಆಯಿತು. ತಂಡದ ಅನುಭವಿ ಬ್ಯಾಟರ್‌ ಜೋ ರೂಟ್‌ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಸಿಡಿಸಿದರು. ಆ ಬಳಿಕ ಫೀಲ್ಡಿಂಗ್‌ನಲ್ಲೂ ಕಮಾಲ್‌ ಮಾಡಿದ ರೂಟ್ ದಾಖಲೆ ಬರೆದಿದ್ದಾರೆ.

ಲಾರ್ಡ್ಸ್‌ ಹಾನರ್‌ ಬೋರ್ಡ್‌ನಲ್ಲಿ ತಮ್ಮ ಬ್ಯಾಟಿಂಗ್ ಮೂಲಕ ಸ್ಥಾನ ಪಡೆದಿದ್ದ ಜೋ ರೂಟ್‌, ಫೀಲ್ಡಿಂಗ್‌ನಲ್ಲೂ ಕಮಾಲ್‌ ಪ್ರದರ್ಶನ ನೀಡಿದ್ದಾರೆ. ಸಾಮಾನ್ಯವಾಗಿ ರೂಟ್‌ ಸ್ಲಿಪ್‌ನಲ್ಲಿ ಫೀಲ್ಡಿಂಗ್ ಮಾಡುವ ಆಟಗಾರ. ಈ ಮೊದಲೇ ಇವರು ತಮ್ಮ ಅಮೋಘ ಫೀಲ್ಡಿಂಗ್ ಸಮಾರ್ಥ್ಯದಿಂದ ಸದ್ದು ಮಾಡಿದ್ದರು. ಈಗ ಮತ್ತೊಮ್ಮೆ ಅಂತಹದ್ದೆ ಕೆಲಸವನ್ನು ಮಾಡಿದ್ದಾರೆ.

Joe Root Surpasses Rahul Dravid s Test Catch Record with 211 Catches

ಮೂರನೇ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕರುಣ್ ನಾಯರ್‌ ಬ್ಯಾಟಿಂಗ್ ಮಾಡುವಾಗ ಇಂಗ್ಲೆಂಡ್‌ ನಾಯಕ ಬೆನ್ ಸ್ಟೋಕ್ಸ್‌ ಅವರು ಹಾಫ್‌ ಸ್ಟಂಪ್‌ ಆಚೆಗೆ ಎಸೆದ ಚೆಂಡನ್ನು ಕೆಣಕಿದ ಕರುಣ್‌ ನಾಯರ್‌, ಮೊದಲ ಸ್ಲಿಪ್‌ನಲ್ಲಿದ್ದ ಜೋ ರೂಟ್‌ ಹಿಡಿದ ಕ್ಲಾಸಿಕ್ ಕ್ಯಾಚ್‌ಗೆ ಬಲಿಯಾದರು. ಇವರು ತಮ್ಮ ಎಡಗಡೆ ಡೈವ್ ಮಾಡಿ ಕ್ಯಾಚ್ ಪಡೆದರು. ಈ ಮೂಲಕ ಟೀಮ್ ಇಂಡಿಯಾದ ಎರಡನೇ ವಿಕೆಟ್‌ ಪಡೆದರು. ಈ ಕ್ಯಾಚ್‌ ಪಡೆಯುತ್ತಿದ್ದಂತೆ ಜೋ ರೂಟ್‌ ವಿಶ್ವ ದಾಖಲೆ ಬರೆದರು.

ಕ್ಲಾಸಿಕ್ ಕ್ಯಾಚ್ ಪಡೆದ ರೂಟ್

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದರು. ಇವರು ಎಂದಿನಿಂತೆ ಕೆಚ್ಚೆದಯ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡಕ್ಕೆ ಆಧಾರವಾದರು. ಆರಂಭದಲ್ಲಿ ಹಾಫ್‌ ಸ್ಟಂಪ್‌ ಆಚೆಯ ಚೆಂಡನ್ನು ಕೆಣಕುವ ಪ್ರಯತ್ನಕ್ಕೆ ಹೋಗಲಿಲ್ಲ. ಆದರೆ 21ನೇ ಓವರ್‌ ಎರಡನೇ ಎಸೆತದಲ್ಲಿ ಕರುಣ್‌ ಕೆಣಕಿ ಇಲ್ಲದ ಹೊಡೆತಕ್ಕೆ ಮುಂದಾಗಿ ವಿಕೆಟ್‌ ಒಪ್ಪಿಸಿದರು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಕ್ಯಾಚ್‌ಗಳನ್ನು ಪಡೆದ ವಿಶ್ವ ದಾಖಲೆಯನ್ನು ಜೋ ರೂಟ್ ಬರೆದರು. ಇವರು 156 ಪಂದ್ಯಗಳಲ್ಲಿ 211 ಕ್ಯಾಚ್‌ ಪಡೆದಿದ್ದಾರೆ. ಇವರು ಅಮೋಘ ಸಾಧನೆಯ ಮೂಲಕ ಟೀಮ್ ಇಂಡಿಯಾದ ದಿಗ್ಗಜ ಆಟಗಾರ ರಾಹುಲ್ ದ್ರಾವಿಡ್ ಸಾಧನೆಯನ್ನು ಅಳಿಸಿ ಹಾಕಿದ್ದಾರೆ. ರಾಹುಲ್ ದ್ರಾವಿಡ್‌ 164 ಟೆಸ್ಟ್‌ ಪಂದ್ಯಗಳಲ್ಲಿ 210 ಕ್ಯಾಚ್‌ಗಳನ್ನು ಪಡೆದ ದಾಖಲೆಯನ್ನು ಹೊಂದಿದ್ದರು.

ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಕ್ಯಾಚ್ ಪಡೆದ ಫೀಲ್ಡರ್ಸ್‌

ಜೋ ರೂಟ್‌, ಇಂಗ್ಲೆಂಡ್‌, 211 ಕ್ಯಾಚ್‌
ರಾಹುಲ್ ದ್ರಾವಿಡ್‌, ಭಾರತ, 210 ಕ್ಯಾಚ್
ಮಹೇಲ್ ಜಯವರ್ಧನ್, ಶ್ರೀಲಂಕಾ, 205 ಕ್ಯಾಚ್‌
ಸ್ಟೀವನ್ ಸ್ಮಿತ್‌, ಆಸ್ಟ್ರೇಲಿಯಾ, 200 ಕ್ಯಾಚ್‌
ಜಾಕ್‌ ಕಾಲಿಸ್‌, ದ. ಆಫ್ರಿಕಾ, 200 ಕ್ಯಾಚ್‌

Story first published: Saturday, July 12, 2025, 13:36 [IST]
Other articles published on Jul 12, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+