For Quick Alerts
ALLOW NOTIFICATIONS  
For Daily Alerts
 

ಒಂದೇ ಕೈಯ್ಯಲ್ಲಿ ರಹಾನೆಯ ಅದ್ಭುತ ಕ್ಯಾಚ್ ಪಡೆದು ದಂಗು ಬಡಿಸಿದ ಜೋ ರೂಟ್: ವಿಡಿಯೋ

Joe Root takes one-handed stunner to dismiss Ajinkya Rahane
Photo Credit: TWITTER/NIC_SAVAGE1

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಕಠಿಣ ಪರಿಸ್ಥೀತಿಯಲ್ಲಿದೆ. ಪ್ರವಾಸಿ ಇಂಗ್ಲೆಂಡ್ ಮೊದಲಿಗೆ ಬ್ಯಾಟಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಳಿಕ ಬೌಲಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಬ್ಯಾಟ್ಸ್‌ಮನ್‌ಗಳನ್ನು ಕೆಡವಿರುವ ಇಂಗ್ಲೀಷರು ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದಾರೆ.

ಈ ಮಧ್ಯೆ ಫೀಲ್ಡಿಂಗ್‌ನಲ್ಲೂ ಇಂಗ್ಲೆಂಡ್ ಸಾಕಷ್ಟು ಗಮನಸೆಳೆಯುತ್ತಿದೆ. ಅದರಲ್ಲೂ ಟೀಮ್ ಇಂಡಿಯಾ ಉಪನಾಯಕ ಅಜಿಂಕ್ಯ ರಹಾನೆಯ ಕಠಿಣ ಕ್ಯಾಚ್‌ಅನ್ನು ಇಂಗ್ಲೆಂಡ್ ನಾಯಕ ಜೋ ರೂಟ್ ಅದ್ಭುತವಾಗಿ ಹಿಡಿಯುವ ಮೂಲಕ ಮತ್ತೊಂದು ಆಘಾತವನ್ನು ನೀಡಿದರು.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 11 ರನ್ ಗಳಿಸಿ ಔಟಾಗುತ್ತಿದಂತೆಯೇ ಕ್ರೀಸ್‌ಗೆ ಬಂದಿಳಿದ ಅಜಿಂಕ್ಯ ರಹಾನೆ 5 ಎಸೆತಗಳಲ್ಲಿ ಒಂದು ರನ್ ಗಳಿಸಿದ್ದರು. ಈ ಸಂದರ್ಭದಲ್ಲಿ ಬೆಸ್ ಎಸೆತವನ್ನು ಮುನ್ನುಗ್ಗಿ ಬಾರಿಸುವ ಪ್ರಯತ್ನ ನಡೆಸಿದರು. ಆದರೆ ಇದರಲ್ಲಿ ಅಂದುಕೊಂಡಂತೆ ಬಾರಿಸಲು ವಿಫಲರಾದರು ಅಜಿಂಕ್ಯ ರಹಾನೆ.

ರಹಾನೆ ಬಾರಿಸಿದ ಚೆಂಡು ಗಾಳಿಯಲ್ಲಿ ಕವರ್‌ನಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಜೋ ರೂಟ್ ಅವರಿಂದ ಒಂದಷ್ಟು ಅಡಿ ದೂರದಲ್ಲಿ ಸಾಗಿತ್ತು. ಆದರೆ ಅದನ್ನು ಗಮನಿಸಿದ ಜೋ ರೂಟ್ ಕ್ಷಣಾರ್ಧದಲ್ಲಿ ಡೈವ್ ಮೂಲಕ ಚೆಂಡನ್ನು ಎಡಗೈಯಲ್ಲಿ ಸುರಕ್ಷಿತವಾಗಿ ಹಿಡಿಯುವಲ್ಲಿ ಯಶಸ್ವಿಯಾದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಮೇಲುಗೈ ಒದಗಿಸಿದರೆ ಆತಿಥೇಯರಿಗೆ ದೊಡ್ಡ ಆಘಾತ ನಿಡುವಲ್ಲಿ ಯಶಸ್ವಿಯಾದರು.

ಇಂಗ್ಲೆಂಡ್ ತಂಡ ನೀಡಿದ 578 ರನ್‌ಗಳಿಗೆ ಪ್ರತಿಯಾಗಿ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ ಆರಂಭಿಕ ನಾಲ್ಕು ವಿಕೆಟ್‌ಗಳನ್ನು ಶೀಘ್ರವಾಗಿ ಕಳೆದುಕೊಂಡಿತು. ಚೇತೇಶ್ವರ್ ಪೂಜಾರ ಹಾಗೂ ರಿಷಬ್ ಪಂತ್ ತಂಡಕ್ಕೆ ಚೇತರಿಕೆ ನಿಡುವ ಪ್ರಯತ್ನ ಮಾಡಿದ್ದಾರೆ.

Story first published: Sunday, February 7, 2021, 14:14 [IST]
Other articles published on Feb 7, 2021
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+