ಜೋಫ್ರಾ ಆರ್ಚರ್ ನಿಂದಿಸಿದವನಿಗೆ ಎರಡು ವರ್ಷಗಳ ನಿಷೇಧ ಶಿಕ್ಷೆ!

ವೆಲ್ಲಿಂಗ್ಟನ್, ಜನವರಿ 14: ಇಂಗ್ಲೆಂಡ್ ಕ್ರಿಕೆಟ್ ತಂಡ ನ್ಯೂಜಿಲೆಂಡ್‌ಗೆ ಪ್ರವಾಸ ಕೈಗೊಂಡಿದ್ದಾಗ ನಡೆದಿದ್ದ ಇತ್ತಂಡಗಳ ಟೆಸ್ಟ್ ವೇಳೆ ಇಂಗ್ಲೆಂಡ್ ಬೌಲರ್ ಜೋಫ್ರಾ ಆರ್ಚರ್ ಅವರನ್ನು ನಿಂದಿಸಿದ್ದ ವ್ಯಕ್ತಿಯನ್ನು ನ್ಯೂಜಿಲೆಂಡ್‌ನಲ್ಲಿ ನಡೆಯುವ ಎಲ್ಲಾ ಅಂತಾರಾಷ್ಟ್ರೀಯ ಮತ್ತು ದೇಸಿ ಪಂದ್ಯಗಳಿಂದ ಎರಡು ವರ್ಷಗಳ ಅವಧಿಯವರೆಗೆ ನಿಷೇಧಿಸಲಾಗಿದೆ.
ಕಳೆದ ನವೆಂಬರ್‌ನಲ್ಲಿ ಆತಿಥೇಯ ನ್ಯೂಜಿಲೆಂಡ್ ಮತ್ತು ಪ್ರವಾಸಿ ಇಂಗ್ಲೆಂಡ್ ನಡುವಿನ ಟೆಸ್ಟ್ ವೇಳೆ ನ್ಯೂಜಿಲೆಂಡ್ ಪ್ರೇಕ್ಷಕನೊಬ್ಬ ಆರ್ಚರ್ ಅವರನ್ನು ಜನಾಂಗೀಯವಾಗಿ ನಿಂದಿಸಿದ್ದ. ಆ 28ರ ಹರೆಯದ ಆ್ಲೆಂಡ್ ವ್ಯಕ್ತಿಯನ್ನು ಪತ್ತೆಹಚ್ಚಿರುವ ಪೊಲೀಸರು ಆತನಿಗೆ ಎಚ್ಚರಿಕೆ ನೀಡಿದ್ದಾರೆ.
ನಿಷೇಧಿತ ವ್ಯಕ್ತಿ ಜೋಫ್ರಾಗೆ ಅವಮಾನಕರ ಭಾಷೆಯಲ್ಲಿ ನಿಂದಿಸಿದ್ದ ಎನ್ನಲಾಗಿದೆ. ಹೀಗಾಗಿ ಆ ವ್ಯಕ್ತಿಗೆ ನಿಷೇಧ ಶಿಕ್ಷೆ ವಿಧಿಸಿ, ನಿಷೇಧ ಉಲ್ಲಂಘಿಸಿದರೆ ಪೊಲೀಸ್ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ಎಚ್ಚರಿಸಿರುವುದಾಗಿ ನ್ಯೂಜಿಲೆಂಡ್ ಕ್ರಿಕೆಟ್ ವಕ್ತಾರ ಆ್ಯಂಟನಿ ಕ್ರುಮ್ಮಿ ತಿಳಿಸಿದ್ದಾರೆ.
ನಿಂದನೆ ನಡೆಸಿದ ವ್ಯಕ್ತಿ 2022ರ ವರೆಗೆ ನ್ಯೂಜಿಲೆಂಡ್‌ನಲ್ಲಿ ನಡೆಯುವ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಸಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸಲು ಅವಕಾಶವಿಲ್ಲ. ನಿಂದನೆ ಬಗ್ಗೆ ಮಾತನಾಡಿರುವ ಆರ್ಚರ್, 'ಆತ ನನ್ನ ಚರ್ಮದ ಬಣ್ಣದ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ,' ಎಂದು ಹೇಳಿದ್ದರು. ಅಂದ್ಹಾಗೆ 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಿವೀಸ್ 1-0ಯ ಜಯ ಗಳಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications