Jofra Archer: ಜೋಫ್ರಾ ಆರ್ಚರ್ ದುಬಾರಿ ಬೌಲರ್: ಇಲ್ಲಿದೆ ಅಂಕಿ ಅಂಶ
ರಾಜಸ್ಥಾನ ರಾಯಲ್ಸ್ ತಂಡದ ಸ್ಟಾರ್ ಬೌಲರ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ತಮ್ಮ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಬೇಡವಾದ ದಾಖಲೆಗೆ ಜೋಫ್ರಾ ಪಾತ್ರರಾಗಿದ್ದಾರೆ. ಹಾಗಿದ್ದಾರೆ ಜೋಪ್ರಾ ಮಾಡಿದ ಕಳಪೆ ಸಾಧನೆ ಏನು ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಹೈದರಾಬಾದ್‌ನಲ್ಲಿ 18ನೇ ಆವೃತ್ತಿಯ 2ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ ದಾಖಲೆಯ ರನ್ ಕಲೆ ಹಾಕಿ ಅಬ್ಬರಿಸಿತು. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಸನ್ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 286 ರನ್ ಸೇರಿಸಿತು. ಈ ವೇಳೆ ಜೋಫ್ರಾ ಆರ್ಚರ್ ಸ್ಥಿರ ಪ್ರದರ್ಶನ ನೀಡುವಲ್ಲಿ ಎಡವಿ ಬೇಡವಾದ ದಾಖಲೆ ಬರೆದರು.

ದುಬಾರಿ ಬೌಲರ್
ಈ ಪಂದ್ಯದಲ್ಲಿ ಜೋಪ್ರಾ ಆರ್ಚರ್ ರನ್‌ಗಳಿಗೆ ಕಡಿವಾಣ ಹಾಕುವಲ್ಲಿ ವಿಫಲರಾದರು. ಇವರು 19 ರನ್‌ಗಳ ಸರಾಸರಿಯಲ್ಲಿ ಪ್ರತಿ ಓವರ್‌ನಲ್ಲಿ ರನ್ ನೀಡಿ ಕೈ ಸುಟ್ಟುಕೊಂಡರು. ಇವರು 4 ಓವರ್ ಬೌಲಿಂಗ್ ನಡೆಸಿ 76 ರನ್ ನೀಡಿ ದುಬಾರಿಯಾದರು. ರಾಜಸ್ಥಾನ ಪರ ಎಲ್ಲ ಬೌಲರ್‌ಗಳು ಧಾರಾಳವಾಗಿ ರನ್ ಬಿಟ್ಟುಕೊಟ್ಟರು. ಆದರೆ ಜೋಫ್ರಾ ಹೆಚ್ಚು ರನ್ ಬಿಟ್ಟುಕೊಟ್ಟು ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು. ಈ ಮೂಲಕ ಮೋಹಿತ್ ಶರ್ಮಾ ಅವರ ದಾಖಲೆಯನ್ನು ಅಳಿಸಿ ಹಾಕಿದರು.
ಮೋಹಿತ್ ಶರ್ಮಾ ಗುಜರಾತ್ ಟೈಟಾನ್ಸ್ ಪರ ಆಡುವಾಗ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಏಪ್ರಿಲ್ 24, 2024ರಂದು ದುಬಾರಿಯಾಗಿದ್ದರು. ಈ ಪಂದ್ಯದಲ್ಲಿ ಮೋಹಿತ್ ಶರ್ಮಾ ಸಹ 4 ಓವರ್ ಬೌಲಿಂಗ್ ನಡೆಸಿ 73 ರನ್ ನೀಡಿ, ಐಪಿಎಲ್ ಇತಿಹಾಸದ ದುಬಾರಿ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡಿದ್ದರು. ಆದರೆ ಈ ದಾಖಲೆಯನ್ನು ಜೋಫ್ರಾ ಆರ್ಚರ್ ಅಳಿಸಿ ಹಾಕಿದರು.
ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ನೀಡಿದ ಬೌಲರ್ಸ್
- ಜೋಫ್ರಾ ಆರ್ಚರ್ (ರಾಜಸ್ಥಾನ), ಎಸ್‌ಆರ್‌ಎಚ್ ವಿರುದ್ಧ, 76 ರನ್
- ಮೋಹಿತ್ ಶರ್ಮಾ (ಜಿಟಿ), ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ, 73 ರನ್
- ಬಸಿಲ್ ಥಂಪಿ (ಹೈದರಾಬಾದ್), ಆರ್‌ಸಿಬಿ ವಿರುದ್ಧ, 70 ರನ್
- ಯಶ್ ದಯಾಳ್ (ಜಿಟಿ), ಕೆಕೆಆರ್ ವಿರುದ್ಧ, 69 ರನ್
- ರೀಸ್ ಟಾಪ್ಲಿ (ಆರ್‌ಸಿಬಿ), ಎಸ್‌ಆರ್‌ಎಚ್ ವಿರುದ್ಧ, 68 ರನ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications