Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Champions Trophy: ಅಫ್ಘಾನಿಸ್ತಾನ ವಿರುದ್ಧ ಒಂದು ವಿಕೆಟ್ ಪಡೆದು ಇತಿಹಾಸ ಸೃಷ್ಟಿಸಿದ ಜೋಫ್ರಾ ಆರ್ಚರ್

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಇಂಗ್ಲೆಂಡ್‌ ತಂಡದ ಮಾಜಿ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಅವರ ದಾಖಲೆಯನ್ನು ಮುರಿಯಲಾಗಿದೆ. ಈ ದಾಖಲೆಯನ್ನು ಬೇರೆ ಯಾರೂ ಮುರಿದಿಲ್ಲ, ಅವರದೇ ದೇಶದ ವೇಗದ ಬೌಲರ್ ಜೋಫ್ರಾ ಆರ್ಚರ್ ಮುರಿದಿದ್ದಾರೆ. 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಇಂಗ್ಲೆಂಡ್ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯದ ಜೋಫ್ರಾ ಆರ್ಚರ್ ಇತಿಹಾಸ ಸೃಷ್ಟಿಸಿದ್ದಾರೆ. ಈ ಪಂದ್ಯದಲ್ಲಿ ಜೋಫ್ರಾ ಆರ್ಚರ್ ತಮ್ಮ ಮೊದಲ ವಿಕೆಟ್ ಪಡೆದ ತಕ್ಷಣ, ಆಂಡರ್ಸನ್ ದಾಖಲೆಯನ್ನು ಮುರಿದಿದ್ದಾರೆ.

ಐಸಿಸಿ 2025ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಬಿ ಗುಂಪಿನ ಪಂದ್ಯದಲ್ಲಿ ಜೋಫ್ರಾ ಆರ್ಚರ್ 50 ಏಕದಿನ ವಿಕೆಟ್‌ಗಳನ್ನು ತಲುಪಿದ ಅತ್ಯಂತ ವೇಗದ ಇಂಗ್ಲೆಂಡ್ ಬೌಲರ್ ಎನಿಸಿಕೊಂಡಿದ್ದಾರೆ. ಇಂಗ್ಲೆಂಡ್ ಪರ ತಮ್ಮ 30ನೇ ಏಕದಿನ ಪಂದ್ಯವನ್ನು ಆಡುತ್ತಿರುವ ಚೋಪ್ರಾ ಆರ್ಚರ್, ಅಫ್ಘಾನಿಸ್ತಾನದ ಆರಂಭಿಕ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ ಅವರ ವಿಕೆಟ್ ಪಡೆಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

Jofra Archer creates history by taking wicket in Afghanistan vs England Champions Trophy 2025 match

ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರ್ಚರ್ ಅದ್ಭುತವಾಗಿ ಬೌಲಿಂಗ್ ಆರಂಭಿಸಿದರು. ಮೂರು ವಿಕೆಟ್‌ಗಳನ್ನು ಪಡೆಯುವ ಮೂಲಕ ಅಫ್ಘಾನಿಸ್ತಾನದ ಅಗ್ರ ಕ್ರಮಾಂಕ ಬ್ಯಾಟಿಂಗ್ ವಿಭಾಗವನ್ನು ಕಟ್ಟಿ ಹಾಕಿದರು. ಇದರೊಂದಿಗೆ ಅವರು ಏಕದಿನ ಕ್ರಿಕೆಟ್‌ನಲ್ಲಿ 50 ವಿಕೆಟ್‌ಗಳನ್ನು ಪೂರ್ಣಗೊಳಿಸಿದರು. ಇನ್ನೂ ವಿಶೇಷವೆಂದರೆ ಅವರು ಇಂಗ್ಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಅತ್ಯಂತ ವೇಗದ ಬೌಲರ್ ಎನಿಸಿಕೊಂಡರು.

ಆರ್ಚರ್ ಸಾಧನೆಗೂ ಮುನ್ನ, ಆಂಡರ್ಸನ್ 31 ಪಂದ್ಯಗಳಲ್ಲಿ ಇಂಗ್ಲೆಂಡ್ ಪರ ವೇಗವಾಗಿ 50 ಏಕದಿನ ವಿಕೆಟ್ ಪಡೆದ ದಾಖಲೆಯನ್ನು ಹೊಂದಿದ್ದರು. ಆದರೆ ಆರ್ಚರ್ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ 30ನೇ ಏಕದಿನ ಪಂದ್ಯದಲ್ಲಿ ಈ ಸಾಧನೆ ಮಾಡಿದರು. ಆಂಡರ್ಸನ್ ಮಾತ್ರವಲ್ಲದೆ, ಸ್ಟೀವ್ ಹಾರ್ಮಿಸನ್ (32 ಪಂದ್ಯಗಳು), ಸ್ಟೀವನ್ ಫಿನ್ (33 ಪಂದ್ಯಗಳು), ಸ್ಟುವರ್ಟ್ ಬ್ರಾಡ್ ಮತ್ತು ಡ್ಯಾರೆನ್ ಗೌ (ಇಬ್ಬರೂ 34 ಪಂದ್ಯಗಳು) ಸೇರಿದಂತೆ ಹಲವು ಇಂಗ್ಲೆಂಡ್ ಬೌಲರ್‌ಗಳನ್ನು ಆರ್ಚರ್ ಹಿಂದಿಕ್ಕಿದ್ದಾರೆ.

ಇಂಗ್ಲೆಂಡ್ ಪರ ವೇಗವಾಗಿ 50 ವಿಕೆಟ್ ಪಡೆದವರು

ಜೋಫ್ರಾ ಆರ್ಚರ್ - 30 ಪಂದ್ಯಗಳು
ಜೇಮ್ಸ್ ಆಂಡರ್ಸನ್ - 31 ಪಂದ್ಯಗಳು
ಸ್ಟೀವ್ ಹಾರ್ಮಿಸನ್ - 32 ಪಂದ್ಯಗಳು
ಸ್ಟೀವನ್ ಫಿನ್ - 33 ಪಂದ್ಯಗಳು
ಸ್ಟುವರ್ಟ್ ಬ್ರಾಡ್ - 34 ಪಂದ್ಯಗಳು
ಡ್ಯಾರೆನ್ ಗೌ - 34 ಪಂದ್ಯಗಳು

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ನಲ್ಲಿ ವೇಗವಾಗಿ 50 ವಿಕೆಟ್‌ಗಳನ್ನು ಪೂರೈಸಿದ ವಿಶ್ವ ದಾಖಲೆ ಶ್ರೀಲಂಕಾದ ಸ್ಪಿನ್ನರ್ ಅಜಂತಾ ಮೆಂಡಿಸ್ ಹೆಸರಿನಲ್ಲಿದೆ. ಅವರು ಕೇವಲ 19 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದರು. ವೇಗದ ಬೌಲರ್‌ಗಳಲ್ಲಿ, ಭಾರತದ ಅಜಿತ್ ಅಗರ್ಕರ್ ಕೇವಲ 23 ಏಕದಿನ ಪಂದ್ಯಗಳಲ್ಲಿ 50 ವಿಕೆಟ್‌ಗಳನ್ನು ಕಬಳಿಸಿ ದಾಖಲೆ ಸೃಷ್ಟಿಸಿದ್ದಾರೆ.

Story first published: Wednesday, February 26, 2025, 20:30 [IST]
Other articles published on Feb 26, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+