Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್ಚರ್‌ಗೆ ಮೊಣಕೈ ಗಾಯ, ನ್ಯೂಜಿಲೆಂಡ್ ಸರಣಿಯಿಂದ ಹೊರಕ್ಕೆ

Jofra Archer out of New Zealand series with elbow injury

ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಯುವ ವೇಗಿ ಜೋಫ್ರಾ ಆರ್ಚರ್ ಮತ್ತೆ ಗಾಯಕ್ಕೀಡಾಗಿದ್ದಾರೆ. ಮೊಣಕೈ ಗಾಯಕ್ಕೀಡಾಗಿರುವ ಆರ್ಚರ್ ಮುಂದಿನ ತಿಂಗಳು ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಯಿಂದ ಹೊರ ಬಿದ್ದಿದ್ದಾರೆ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಹೇಳಿದೆ.

ಕಳೆದ ಮಾರ್ಚ್‌ನಲ್ಲೇ ಜೋಫ್ರಾ ಆರ್ಚರ್ ಕೈಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಅವರ ಕೈಯೊಳಗೆ ಸಿಲುಕಿದ್ದ ಗಾಜಿನ ಚೂರನ್ನು ತೆಗೆಸಿಕೊಂಡಿದ್ದರು. ತನ್ನ ಮನೆಯಲ್ಲಿ ಫಿಶ್ ಟ್ಯಾಂಕ್ ಸ್ವಚ್ಛ ಮಾಡುತ್ತಿದ್ದಾಗ ಆರ್ಚರ್ ಕೈಗೆ ಗಾಯ ಮಾಡಿಕೊಂಡಿದ್ದರು. ಇಂಗ್ಲೆಂಡ್‌ಗೆ ಪ್ರವಾಸ ಬರಲಿರುವ ನ್ಯೂಜಿಲೆಂಡ್ ತಂಡ ಅಲ್ಲಿ ಜೂನ್ 2ರಿಂದ ಟೆಸ್ಟ್‌ ಸರಣಿ ಆಡಲಿದೆ.

ಕೈಯ ಶಸ್ತ್ರ ಚಿಕಿತ್ಸೆಯ ಬಳಿಕ ವಿಶ್ರಾಂತಿಯಲ್ಲಿದ್ದ ಆರ್ಚರ್ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿರಲಿಲ್ಲ. ಈ ವಾರ ಚೇತರಿಸಿಕೊಂಡಿದ್ದ ಆರ್ಚರ್, ಇಂಗ್ಲೆಂಡ್ ಕೌಂಟಿ ಕ್ರಿಕೆಟ್‌ನಲ್ಲಿ ಸಸೆಕ್ಸ್ ಪರ ಮತ್ತು ಕೆಂಟ್ ವಿರುದ್ಧ ಆಡಿದ್ದರು.

ಸಸೆಕ್ಸ್ ಪರ 5 ಓವರ್‌ ಎಸೆದಿದ್ದ ಆರ್ಚರ್‌ಗೆ ಮೊಣಕೈ ಗಾಯದಿಂದಾಗಿ ನೋವಿನ ಅನುಭವವಾಗಿತ್ತು. ಭಾರತಕ್ಕೆ ಇಂಗ್ಲೆಂಡ್ ತಂಡ ಪ್ರವಾಸ ಬಂದಿದ್ದಾಗ (4 ಟೆಸ್ಟ್‌ ಪಂದ್ಯಗಳು, 5 ಟಿ20ಐ) ಎಲ್ಲಾ ಪಂದ್ಯಗಳಲ್ಲೂ ಆರ್ಚರ್ ಆಡಿದ್ದರು. ಆದರೆ ಕೊನೇ ಟಿ20 ಪಂದ್ಯದ ವೇಳೆ ಆರ್ಚರ್‌ಗೆ ಕೈ ನೋವು ಕಾಣಿಸಿಕೊಂಡಿತ್ತು. ಆ ಬಳಿಕ ಆರ್ಚರ್ ಶಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದರು.

Story first published: Monday, May 17, 2021, 9:52 [IST]
Other articles published on May 17, 2021
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+