ಗೈಲ್ಸ್ ಬಿಚ್ಚಿಟ್ಟ ಕುತೂಹಲಕಾರಿ ಸತ್ಯ: ಆರ್ಚರ್ ಕೈಯೊಳಗಿದೆ ಗಾಜಿನ ಚೂರು!

ಲಂಡನ್: ಭಾರತ ವಿರುದ್ಧದ ಟಿ20ಐ ಸರಣಿಯ ಬಳಿಕ ಇಂಗ್ಲೆಂಡ್‌ನ ಪ್ರಮುಖ ವೇಗಿ ಜೋಫ್ರಾ ಆರ್ಚರ್ ತಂಡದಿಂದ ಹೊರ ಬಿದ್ದಿದ್ದರು. ಗಾಯದ ಸಮಸ್ಯೆಯಿಂದಾಗಿ ಆರ್ಚರ್ ತಂಡದಿಂದ ಹೊರ ಬಿದ್ದಿದ್ದಾಗಿ ಹೇಳಲಾಗಿತ್ತು. ಆರ್ಚರ್ ದೀರ್ಘ ಕಾಲದಿಂದ ಬಲಗೈ ನೋವಿನ ಸಮಸ್ಯೆ ಎದುರಿಸುತ್ತಿದ್ದಾರೆ ಎನ್ನಲಾಗಿತ್ತು. ಆರ್ಚರ್ ಗಾಯದ ಹಿಂದಿನ ಅಸಲಿ ಸಂಗತಿ ಏನೆಂದು ಈಗ ಬಯಲಾಗಿದೆ.
ಭಾರತಕ್ಕೆ ಇಂಗ್ಲೆಂಡ್ ತಂಡ ಪ್ರವಾಸ ಬರುವುದಕ್ಕೂ ಮುನ್ನ, ಜೋಫ್ರಾ ಆರ್ಚರ್ ತನ್ನ ಫ್ಲ್ಯಾಟ್‌ನಲ್ಲಿದ್ದಾಗ ಫಿಶ್ ಟ್ಯಾಂಗ್ ಸ್ವಚ್ಛ ಮಾಡುತ್ತಿದ್ದಾಗ ಬಲಗೈಯ ಮಧ್ಯದ ಬೆರಳಿಗೆ ಕತ್ತರಿಸಿದ ಗಾಯವಾಗಿತ್ತು ಎಂದು ಇಂಗ್ಲೆಂಡ್‌ನ ಕ್ರಿಕೆಟ್ ನಿರ್ದೇಶಕ ಆಶ್ಲೇ ಗೈಲ್ಸ್ ಹೇಳಿದ್ದಾರೆ.

ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದ ಆರ್ಚರ್
ಕಳೆದ ಜನವರಿಯಲ್ಲಿ ಆರ್ಚರ್ ತನ್ನ ಫ್ಲ್ಯಾಟ್‌ನಲ್ಲಿದ್ದಾಗ ಈ ಘಟನೆ ನಡೆದಿತ್ತು. 'ಹೌದು ಆತ ಮನೆಯಲ್ಲಿ ಫಿಶ್ ಟ್ಯಾಂಕ್ ಕ್ಲೀನ್ ಮಾಡುತ್ತಿದ್ದಾಗ ಕೈ ಜಾರಿ ಫಿಟ್ ಟ್ಯಾಂಕ್ ಕೆಳಗೆ ಬಿದ್ದು ಕೈಗೆ ಕುಯ್ದ ಗಾಯವಾಗಿತ್ತು. ಆ ಬಳಿಕ ಆರ್ಚರ್ ಶಸ್ತ್ರ ಚಿಕಿತ್ಸೆ ಮಾಡಿಕೊಂಡಿದ್ದರು,' ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ಜೊತೆ ಗೈಲ್ಸ್ ಹೇಳಿಕೊಂಡಿದ್ದಾರೆ.

ಕೈಯೊಳಗೆ ಗಾಜಿನ ಚೂರು
ಬಲ್ಲ ಮಾಹಿತಿಯ ಪ್ರಕಾರ, ಆರ್ಚರ್ ಕೈಗೆ ಕುಯ್ದ ಗಾಯವಾದಾಗ ಅವರ ಕೈಯೊಳಗೆ ಗಾಜಿನ ಚೂರು ನುಸುಳಿತ್ತು. ಆರಂಭಿಕ ಶಸ್ತ್ರ ಚಿಕಿತ್ಸೆಯ ವೇಳೆ ಇದು ತೆಗೆಯಲ್ಪಡದೆ ಉಳಿದಿದ್ದರಿಂದ ಭಾರತ-ಇಂಗ್ಲೆಂಡ್ ಸರಣಿಯ ವೇಳೆ ಆರ್ಚರ್‌ಗೆ ಕೈ ನೋಯಲಾರಂಭಿಸಿತ್ತು. ಹೀಗಾಗಿ ಆರ್ಚರ್ ಮತ್ತೆ ಆಸ್ತ್ರ ಚಿಕಿತ್ಸೆಯ ಮೊರೆ ಹೋಗಿದ್ದಾರೆ.

ಐಪಿಎಲ್ ಆರಂಭದಲ್ಲಿ ಆಡುತ್ತಿಲ್ಲ
ಭಾರತ-ಇಂಗ್ಲೆಂಡ್ ಸರಣಿಯ ವೇಳೆ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ, 5 ಪಂದ್ಯಗಳ ಟಿ20ಐ ಸರಣಿಯಲ್ಲಿ ಹೇಗೋ ಆಡಿದ್ದ ಆರ್ಚರ್ ಆ ಬಳಿಕ ಮೂರು ಪಂದ್ಯಗಳ ಏಕದಿನ ಸರಣಿಯಿಂದ ದೂರ ಉಳಿದಿದ್ದರು. ಸದ್ಯ ಆರ್ಚರ್ ಕೈಯ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವುದರಿಂದ ಐಪಿಎಲ್ 2021ರ ಆರಂಭಿಕ ಪಂದ್ಯಗಳಲ್ಲಿ ಆಡೋದು ಅನುಮಾನವಾಗಿದೆ. ಇಂಗ್ಲೆಂಡ್ ಪರ 13 ಟೆಸ್ಟ್, 17 ಏಕದಿನ ಪಂದ್ಯಗಳು, 12 ಟಿ20ಐ ಪಂದ್ಯಗಳನ್ನಾಡಿರುವ ಆರ್ಚರ್ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications